ಐಪಿಎಲ್ 2020: ಆರ್ ಸಿಬಿ ಹೊಸ ಲೋಗೋ ಬಿಡುಗಡೆ

ಐಪಿಎಲ್ 2020 ಆವೃತ್ತಿ ಮಾರ್ಚ್ 29 ರಿಂದ ಪ್ರಾರಂಭವಾಗುತ್ತಿದ್ದು. ಇದಕ್ಕೆ ಮುನ್ನ ಆರ್. ಸಿ.ಬಿ. ತನ್ನ ಹೊಸ ಲೋಗೋವನ್ನು ಬಿಡುಗಡೆಗೊಳಿಸಿದೆ. ಈ ಬಗ್ಗೆ ಆರ್ ಸಿಬಿಯ ಅಧ್ಯಕ್ಷ ಸಂಜೀವ್ ಚುರಿವಾಲ ಮಾತನಾಡಿದ್ದು, ನಮ್ಮ ಲೋಗೋವಿನಲ್ಲಿ ತಂಡದ ಆಕ್ರಮಣಕಾರಿ ಕ್ರೀಡಾ ಮನೋಭಾವ, ಕ್ರೀಡಾಭಿಮನಿಗಳನ್ನು ನಿರಂತರವಾಗಿ ರಂಜಿಸುವ ಅಂಶಗಳು ಕಾಣಸಿಗುತ್ತವೆ ಎಂದು ಹೇಳಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗಿ 12 ವರ್ಷ ಕಳೆದರು, ಇದುವರೆಗೂ ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಸಾಧ್ಯವಾಗಲಿಲ್ಲ. ಶುಕ್ರವಾರ ಆರ್‌ಸಿಬಿ ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಿದ್ದು, ತನ್ನ […]

ಫೆ. 24: ವಿಶ್ವದ ದೊಡ್ಡಣ್ಣ ಅಹಮದಾಬಾದ್‌ಗೆ ಭೇಟಿ: ಬಿಗಿ ಪೊಲೀಸ ಭದ್ರತೆ

ವಿಶ್ವದ ದೊಡ್ಡಣ್ಣ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಫೆ. 24ರಂದು ಅಹಮದಾಬಾದ್‌ಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಸುರಕ್ಷತೆಗಾಗಿ 10,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಎಸ್‌ಪಿಜಿ, ಎನ್‌ಎಸ್‌ಜಿ ಹಾಗೂ ಇತರ ವಿಶೇಷ ರಕ್ಷಣಾ ಪಡೆಗಳ ಸಿಬ್ಬಂದಿಯೂ ರಕ್ಷಣಾ ಕಾರ್ಯದಲ್ಲಿ ತೊಡಗಿರುತ್ತಾರೆ’ ಎಂದು ಅಹಮದಾಬಾದ್‌ನ ಡಿಸಿಪಿ ವಿಜಯ್‌ ಪಟೇಲ್‌ ಶನಿವಾರ ತಿಳಿಸಿದರು. ಇದು ಮೊದಲಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರು ಗುಜರಾತ್‌ಗೆ ಬರುತ್ತಿದ್ದು, ಈ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚು ಜನರು ಬಾಗಿಯಾಗಬಹುದು ಎಂದು ಪೊಲೀಸರು ನಿರೀಕ್ಷಿಸಿದ್ದಾರೆ. ಸದ್ಯದಲ್ಲೇ ಅಮೆರಿಕದಲ್ಲಿ ಚುನಾವಣೆ […]

ಸಿಡ್ನಿ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀನಿವಾಸಕಲ್ಯಾಣ 

ಉಡುಪಿ: ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದ ಶ್ರೀಪುತ್ತಿಗೆ ಮಠದ ಶ್ರೀವೆಂಕಟಕೃಷ್ಣ ವೃಂದಾವನದಲ್ಲಿ ಪ್ರಥಮವಾಗಿ ವೈಭವದ ಶ್ರೀನಿವಾಸಕಲ್ಯಾಣ ಮಹೋತ್ಸವವು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಿತು. ಸುಮಾರು ಎರಡು ಸಾವಿರ ಭಕ್ತರ ಪಾಲ್ಗೊಳ್ಳುವಿಕೆಯಿಂದ ನಡೆದ ಈ ಸಮಾರಂಭದಲ್ಲಿ ಸಿಡ್ನಿ ಮಹಾನಗರದ ಮೇಯರ್ ಹಾಗೂ ಸಂಸದರು ಅಲ್ಲದೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಭಜನೆ ನೃತ್ಯ ಸಂಗೀತ ವಲ್ಲದೆ ವಿದ್ವಾನ್ ಕೇಶವ್ ಅವರಿಂದ ಪ್ರವಚನ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ರಾಮಮಂದಿರ ನಿರ್ಮಾಣ ಟ್ರಸ್ಟ್ ರಚನೆ: ಪೇಜಾವರ ವಿಶ್ವಪ್ರಸನ್ನ ಶ್ರೀಪಾದರು ಸದಸ್ಯರಾಗಿ ನೇಮಕ

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಿದ್ದು, ಈ ಟ್ರಸ್ಟ್ ನಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಟ್ರಸ್ಟ್ ಗೆ ದಕ್ಷಿಣ ಭಾರತದಿಂದ ಪೇಜಾವರ ಶ್ರೀ ಹಾಗೂ ತಮಿಳುನಾಡಿನಿಂದ ಯುಗಪುರುಷ್ ಪರಮಾನಂದ್ ಸರಸ್ವತಿ ಸೇರಿದಂತೆ 9 ಮಂದಿಯನ್ನು ನೇಮಕ ಮಾಡಲಾಗಿದೆ. ಹಾಗೆಯೇ ಟ್ರಸ್ಟ್ ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಶಾಶ್ವತ ಸ್ಥಾನ ಕಲ್ಪಿಸಲಾಗಿದೆ. ಟ್ರಸ್ಟ್ ರಚನೆ ಕುರಿತು ಕೇಂದ್ರ […]

ಮಂಗಳೂರು: ನಾಪತ್ತೆಯಾದ ಮೀನುಗಾರರಿಗೆ  ಪರಿಹಾರ ನೀಡಲು ರಕ್ಷಣಾ ಸಚಿವರಿಗೆ ಮನವಿ

ಉಡುಪಿ: ವರ್ಷದ ಹಿಂದೆ ಮೀನುಗಾರಿಕೆಗೆಂದು ಆಳಸಮುದ್ರಕ್ಕೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ, ಅದರಲ್ಲಿ ಇದ್ದ ಮೀನುಗಾರರ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಇವರ ನೇತೃತ್ವದಲ್ಲಿ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರ ಮೀನುಗಾರರ ನಿಯೋಗವು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಿಗೆ ಮನವಿ ಸಲ್ಲಿಸಿತು. ಮಂಗಳೂರಿನಲ್ಲಿ ನಡೆದ ಸಿಎಎ ಸಮರ್ಥನಾ ಸಮಾವೇಶದಲ್ಲಿ […]