ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ. ರಾಜಶೇಖರನ್ ನಿಧನ

ಬೆಂಗಳೂರು: ಕಾಂಗ್ರೆಸ್ಸಿನ ಹಿರಿಯ ಮುಖಂಡ ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಸೋಮವಾರ ಬೆಳಗ್ಗೆ ನಿಧನರಾದರು. ಹಲವಾರು ತಿಂಗಳಿನಿಂದ ರಾಜಶೇಖರನ್ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪುತ್ರ ತಿಳಿಸಿದ್ದಾರೆ.
ಕೊರೊನಾ ಸೋಂಕು: ಇಂಗ್ಲೆಂಡ್‌ನಲ್ಲಿ ಭಾರತ ಮೂಲದ ವೈದ್ಯ ಸಾವು

ಲಂಡನ್: ಕೊರೊನಾ ವೈರಸ್ ಸೋಂಕು ತಗುಲಿ ಭಾರತ ಮೂಲದ ವೈದ್ಯರೊಬ್ಬರು ಇಂಗ್ಲೆಂಡ್ ನಲ್ಲಿ ಸಾವನ್ನಪ್ಪಿಗಿದ್ದಾರೆ. ವೈದ್ಯ ವೃತ್ತಿ ನಿರ್ವಹಿಸಿತ್ತಿದ್ದ ಜಿತೇಂದ್ರ ಕುಮಾರ್ ರಾಥೋಡ್ ಅವರು ಸರ್ಜರಿ ವಿಭಾಗದಲ್ಲಿ ಸಹಾಯಕ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅತ್ಯುತ್ತಮ ಶಸ್ತ್ರ ಚಿಕಿತ್ಸಕರೆಂದೇ ಖ್ಯಾತರಾಗಿದ್ದರು. 58 ವರ್ಷದ ರಾಥೋಡ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಾಶ್ಮೀರ ಗಡಿಯಲ್ಲಿ ಭಾರತೀಯ ಸೇನೆಯ ಗುಂಡಿಗೆ 9 ಮಂದಿ ಉಗ್ರರು ಬಲಿ

ಜಮ್ಮು- ಕಾಶ್ಮೀರ: 24 ಗಂಟೆಗಳ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ 9 ಮಂದಿ ಉಗ್ರರು ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ..ಕೆರೆನ್ ಸೆಕ್ಟರ್‌ನಲ್ಲಿ 5 ಮಂದಿ ಉಗ್ರರು ಒಳಬರಲು ನುಸುಳುತ್ತಿದ್ದಾಗ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.ದಕ್ಷಿಣ ಕಾಶ್ಮೀರದ ಬಟ್ಪುರದಲ್ಲಿ ಶನಿವಾರ 4 ಮಂದಿ ಉಗ್ರರು ಭಾರತೀಯ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಯತ್ನಿಸುತ್ತಿದ್ದಾಗ ಸೈನಿಕರ ಗುಂಡಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ
ಕೊರೊನ ವಿರುದ್ಧ ಒಗ್ಗಟ್ಟಿನ ಹೋರಾಟ: ಏ 5ರಂದು 9 ನಿಮಿಷ ಮೊಂಬತ್ತಿ ಉರಿಸಲು ಪ್ರಧಾನಿ ಕರೆ

ನವದೆಹಲಿ: ಇದೇ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ನಿಮ್ಮ ಅಮೂಲ್ಯ ಸಮಯವಾಗಿದ್ದು, ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್ ಆರಿಸಿ, ಮೊಬೈಲ್ ಟಾರ್ಚ್ ಅಥವಾ ಮೇಣದ ಬತ್ತಿ ಹಿಡಿಯಬೇಕು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಬೇಕು ಎಂದು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಿಂತು ದೀಪ, ಮೇಣದಬತ್ತಿ, ಟಾರ್ಚ್, ಮೊಬೈಲ್ ಫ್ಲಾಶ್ ಹಿಡಿದು ಭಾರತ ಮಾತೆಯನ್ನು ನೆನೆಯಿರಿ. ಯಾರೂ ಸಹ […]
ದೇಶದಲ್ಲಿ 50 ಕ್ಕೇರಿದ ಮೃತರ ಸಂಖ್ಯೆ: ಮಹಾರಾಷ್ಟ್ರದಲ್ಲಿ ಇನ್ನೊಂದು ಸಾವು

ದೇಶ: ಬುಧವಾರ ಮಹಾರಾಷ್ಟ್ರದಲ್ಲಿ ಸೋಂಕಿತರೊಬ್ಬರು ಸಾವಿಗೀಡಾಗಿದ್ದು, ಇದೀಗ ದೇಶದಲ್ಲಿ ಕೋವಿಡ್–19ನಿಂದಾಗಿ ಮೃತಪಟ್ಟವರ ಸಂಖ್ಯೆ 50ಕ್ಕೇರಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಹಾಗೂ 18 ಸೋಂಕು ಪ್ರಕರಣಗಳು ವರದಿಯಾಗಿದೆ.ಒಟ್ಟು ಸೋಂಕು ಪ್ರಕರಣಗಳು 320 ತಲುಪಿದೆ. ಈ ಮೂಲಕ ದೇಶದಾದ್ಯಂತ ಒಟ್ಟು ಸೋಂಕು ಪ್ರಕರಣಗಳು 1,500 ದಾಟಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 102 ಕ್ಕೇರಿದೆ.