ಕೆಲವೇ ಕ್ಷಣಗಳಲ್ಲಿ ರಫೇಲ್ ಯುದ್ದ ವಿಮಾನಗಳ ಆಗಮನ ವಾಯುನೆಲೆಯಲ್ಲಿ ಸರ್ವ ಸಿದ್ಧತೆ

ಹರಿಯಾಣ: ಇಂದು ಮಧ್ಯಾಹ್ನ ಫ್ರಾನ್ಸ್‌ನಿಂದ ಹೊರಟಿರುವ ಮೊದಲ ಹಂತದ ಐದು ರಫೇಲ್‌ ಯುದ್ಧ ವಿಮಾನಗಳು ಅಂಬಾಲ ವಾಯುನೆಲೆಗೆ ಬಂದಿಳಿಯಲಿದೆ. ಇದನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಬರಮಾಡಿಕೊಳ್ಳಲಿದ್ದಾರೆ. ಹತ್ತಿರದ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದ್ದು, ವಾಯುನೆಲೆ ಸುತ್ತ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಹಾಗೂ ಯುದ್ಧ ವಿಮಾನಗಳು ಇಳಿಯುವ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ.

ಗೂಗಲ್ ಉದ್ಯೋಗಿಗಳಿಗೆ 2021ರ ಜೂನ್ ತಿಂಗಳವರೆಗೂ ವರ್ಕ್ ಫ್ರಂ ಹೋಮ್

ನವದೆಹಲಿ: ಜಗತ್ತಿನಲ್ಲಿ ದಿನೇ ದಿನೇ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಳವಾಗುತ್ತಿದ್ದು, ಹಲವಾರು ಐಟಿ ಉದ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸಲು ಸೂಚಿಸಿದೆ. ಅದರಂತೆ ಗೂಗಲ್ ತನ್ನ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ 2021ರ ಜೂನ್ 30ರ ವರೆಗೂ ವರ್ಕ್ ಫ್ರಂ ಹೋಮ್ ಅವಧಿಯನ್ನು ವಿಸ್ತರಿಸಿದೆ. ಉದ್ಯೋಗಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚೈ, ಉದ್ಯೋಗಿಗಳಿಗೆ ಮುಂದೆ ಯೋಜಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಕಚೇರಿಯಲ್ಲಿ ಅಗತ್ಯವಿರುವ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಿದ್ದು, ನಮ್ಮ […]

ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆಯ ಮಾನವ ಪ್ರಯೋಗ ಆರಂಭ

ಭುವನೇಶ್ವರ: ಭಾರತದಲ್ಲಿ ಸಂಶೋಧಿಸಲ್ಪಟ್ಟ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಇದೀಗ ಮಾನವ ಪ್ರಯೋಗ ಆರಂಭವಾಗಿದೆ. ಭುವನೇಶ್ವರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ಈ ಲಸಿಕೆಯ ಮಾನವ ಪ್ರಯೋಗ ನಡೆಯುತ್ತಿದೆ. ಇದು ICMR ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾಗಿದೆ. ಭುವನೇಶ್ವರ ಹೊರತುಪಡಿಸಿ ಕ್ಲಿನಿಕಲ್ ಪ್ರಯೋಗಕ್ಕೆ ಆಯ್ಕೆಯಾದ ಇತರ ಸಂಸ್ಥೆಗಳಾಗಿ ವಿಶಾಖಪಟ್ಟಣಂ, ರೋಹ್ಟಕ್, ನವದೆಹಲಿ, ಪಾಟ್ನಾ, ಬೆಳಗಾವಿ, ನಾಗ್ಪುರ, ಗೋರಖ್‌ಪುರ, ಕಟ್ಟಂಕುಲಥೂರ್, ಹೈದರಾಬಾದ್, ಆರ್ಯ ನಗರ, ಕಾನ್ಪುರ್ ಮತ್ತು ಗೋವಾ ಆಯ್ಕೆಯಾಗಿದೆ. ಕೊವಾಕ್ಸಿನ್ ಮಾನವ ಪ್ರಯೋಗದ 1 […]

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆ ಕೊರೊನಾ ಪಾಸಿಟಿವ್

ಮಧ್ಯಪ್ರದೇಶ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚೌಹಾಣ್ ಅವರು ಇಂದು ಸ್ವತಃ ಟ್ವೀಟರ್ ಮೂಲಕ ತನಗೆ ಸೋಂಕು ತಗುಲಿದೆ ಎಂದು ದೃಢಪಡಿಸಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕಿತರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಅವರು ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ. ಚೌಹಾಣ್ ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.