ಮುಂಬೈನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಹೃದಯಾಘಾತದಿಂದ ನಿಧನ

ಮುಂಬೈ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ (59) ಅವರು ಗುರುವಾರ ಮುಂಬೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020 ಕ್ರಿಕೆಟ್ ವಿಶ್ಲೇಷಕರಾಗಿ ಸ್ಟಾರ್ ಸ್ಫೋರ್ಟ್ ಕಾಮೆಂಟೆಂಟರಿ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅವರು ಇಂದು ಖಾಸಗಿ ಹೋಟೆಲ್ ನಲ್ಲಿದ್ದಾಗಲೇ ಹೃದಯಾಘಾತವಾಗಿದೆ ಎನ್ನಲಾಗಿದೆ. ಪ್ರೊ ಡೀನೋ ಹೆಸರಿನಲ್ಲಿ ಹಾಸ್ಯಭರಿತವಾಗಿ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಿದ್ದ ಜೋನ್ಸ್ ಅವರು ಭಾರತದಲ್ಲಿ ಜನಪ್ರಿಯರಾಗಿದ್ದರು. ಆಸ್ಟ್ರೇಲಿಯಾ ಪರ 52 ಟೆಸ್ಟ್, 164 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 245 […]
ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೊನಾಗೆ ಬಲಿ

ಉಡುಪಿ: ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೊನಾ ಸೋಂಕಿನಿಂದ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ 12 ದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ರಾಜ್ಯಸಭೆ: ಮೂರು ಕಾರ್ಮಿಕ ಸುಧಾರಣಾ ಮಸೂದೆಗಳು ಅಂಗೀಕಾರ

ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆ ಬುಧವಾರ ರಾಜ್ಯಸಭೆಯಲ್ಲಿ ಮೂರು ಪ್ರಮುಖ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಕೈಗಾರಿಕಾ ವ್ಯವಹಾರಗಳ ಮಾರ್ಗದರ್ಶಿ ವಿಧೇಯಕ, ಸಾಮಾಜಿಕ ಸುರಕ್ಷತಾ ಮಾರ್ಗದರ್ಶಿ ವಿಧೇಯಕ ಹಾಗೂ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ವಾತಾವರಣ ಮಾರ್ಗದರ್ಶಿ ವಿಧೇಯಕಗಳಿಗೆ ಅನುಮೋದನೆ ಪಡೆಯಲಾಯಿತು. ಮಸೂದೆಗಳ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಗಾಂಗ್ವಾರ್ ಮಾತನಾಡಿ, ವಾಣಿಜ್ಯ ಕೇತ್ರದಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ಕಾರ್ಮಿಕ ಕಾಯ್ದೆಗಳಿಗೆ ಸುಧಾರಣೆ ತರಲಾಗುತ್ತಿದೆ ಎಂದರು. ದೇಶದ 16 ರಾಜ್ಯಗಳಲ್ಲಿ ಮುನ್ನೂರಕ್ಕಿಂತ […]
ಡ್ರಗ್ಸ್ ಪ್ರಕರಣ: ನಟಿ ರಿಯಾ ಚಕ್ರವರ್ತಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ

ಮುಂಬೈ: ಡ್ರಗ್ಸ್ ಆರೋಪದಡಿ ಎನ್ ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅಕ್ಟೋಬರ್ 6ರ ವರೆಗೆ ವಿಸ್ತರಣೆಗೊಂಡಿದೆ. ಮುಂಬೈನ ಎನ್‌ಡಿಪಿಎಸ್ ವಿಶೇಷ ಕೋರ್ಟ್ ರಿಯಾ ಅವರ ನ್ಯಾಯಾಂಗ ಬಂಧನ ವಿಸ್ತರಿಸಿ ಇಂದು ಆದೇಶ ನೀಡಿದೆ. ಡ್ರಗ್ಸ್ ಆರೋಪದಡಿ ರಿಯಾಳನ್ನು ಎನ್ ಸಿಬಿ ಸೆ. 9ರಂದು ಬಂಧಿಸಿದ್ದು, ನ್ಯಾಯಾಲಯವು 14 ದಿನಗಳ ಕಾಲ (ಸೆ.22 ರವರೆಗೆ ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ನ್ಯಾಯಾಂಗ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಮತ್ತೆ […]
ಡ್ರಗ್ಸ್ ದಂಧೆ: ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಗೆ ಎನ್ ಸಿಬಿಯಿಂದ ಸಮನ್ಸ್

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ಅವರಿಗೆ ವಿಚಾರಣೆ ಹಾಜರಾಗುವಂತೆ ಎನ್‌ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕರೀಶ್ಮಾ ಜೊತೆ 2017ರ ಅಕ್ಟೋಬರ್‌ನಲ್ಲಿ ಡ್ರಗ್ಸ್‌ಗೆ ಸಂಬಂಧಿಸಿ ದೀಪಿಕಾ ಜೊತೆ ವಾಟ್ಸ್‌ಆ್ಯಪ್ ಸಂವಹನ ನಡೆಸಿದ್ದರು ಎನ್ನಲಾಗಿದೆ. ಇದರ ಆಧಾರದಲ್ಲಿ ಎನ್ ಸಿಬಿ ತಂಡ ನೋಟಿಸ್ ನೋಡಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ನಟಿ ರಕುಲ್ […]