ಕೋವಿಡ್-19 ಸಂಬಂಧಿತ ಆರೋಗ್ಯ ಸಮಸ್ಯೆ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಭಾನುವಾರ, ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೋವಿಡ್-19 ಸಂಬಂಧಿತ ಸಮಸ್ಯೆಗಳಿಗಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಸೋನಿಯಾ ಗಾಂಧಿ ಈ ತಿಂಗಳ ಆರಂಭದಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದ್ದರು. ಸೋನಿಯಾ ಗಾಂಧಿಗೆ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಜೂನ್ 23 ರಂದು ಹೊಸ ದಿನಾಂಕವನ್ನು ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರ […]
ಪ್ರತಿ ಒಂದು ಕಿ.ಗ್ರಾಂ ತೂಕ ಇಳಿಕೆಗೆ 1000 ಕೋಟಿ ರೂ ಅಭಿವೃದ್ದಿ ಪ್ಯಾಕೇಜ್: ಗಡ್ಕರಿ ಚಾಲೆಂಜಿಗೆ 15 ಕಿಲೋ ತೂಕ ಇಳಿಸಿಕೊಂಡ ಉಜ್ಜಯನಿ ಸಂಸದ

ನವದೆಹಲಿ: ಕ್ಷೇತ್ರದ ಅಭಿವೃದ್ಧಿಗಾಗಿ ಬಜೆಟ್ ನೀಡುವಂತೆ ಉಜ್ಜಯನಿ ಸಂಸದ ಅನಿಲ್ ಫಿರೋಜಿಯಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಆಗ ಗಡ್ಕರಿ, ಅನಿಲ್ ತಮ್ಮ ತೂಕ ಇಳಿಸಿಕೊಂಡರೆ ಪ್ರತಿ ಕಿಲೋಗ್ರಾಂಗೆ ಬದಲಾಗಿ 1000 ಸಾವಿರ ಕೋಟಿ ರೂಗಳ ಬಜೆಟ್ ಅನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡುವುದಾಗಿ ಷರತ್ತನ್ನು ಮುಂದಿಟ್ಟಿದ್ದರು. ಈ ಷರತ್ತನ್ನು ಸ್ವೀಕರಿಸಿರುವ ಅನಿಲ್, ಇದೀಗ 15 ಕಿಲೋ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಅನಿಲ್ ಕೇಂದ್ರ ಸಾರಿಗೆ ಸಚಿವ ಗಡ್ಕರಿಯವರಿಂದ 15 ಸಾವಿರ […]
ಜಮ್ಮು&ಕಾಶ್ಮೀರ: ಶೇಖ್ ನಗರಕ್ಕೆ ಶಿವನಗರ, ಅಂಫಲ್ಲಾ ಚೌಕ್ ಗೆ ಹನುಮಾನ್ ಚೌಕ್ ಎಂದು ಮರುನಾಮಕರಣ

ಜಮ್ಮು: ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಮೇಯರ್ ಚಂದರ್ ಮೋಹನ್ ಗುಪ್ತಾ ಶನಿವಾರ (ಜೂನ್ 11) ದಂದು ಈ ಪ್ರದೇಶದಲ್ಲಿ ಎರಡು ಚೌಕ್‌ಗಳ ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಜೆಎಂಸಿ ಅಂಗೀಕರಿಸಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ನಿರ್ಣಯದ ಪ್ರಕಾರ, ಪ್ರಸುತ ಶೇಖ್ ನಗರವೆಂದು ಗುರುತಿಸಲಾಗುವ ಸ್ಥಳವನ್ನು ಶಿವನಗರ ಎಂದೂ ಮತ್ತು ಅಂಫಲ್ಲಾ ಚೌಕ್ ಅನ್ನು ಇನ್ನು ಮುಂದೆ ಹನುಮಾನ್ ಚೌಕ್ ಎಂದೂ ಕರೆಯಲಾಗುತ್ತದೆ. ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ ಶೇಖ್ ನಗರವನ್ನು ಶಿವನಗರ ಮತ್ತು ಅಂಫಲ್ಲಾ ಚೌಕ್ ಅನ್ನು ಹನುಮಾನ್ […]
ಅಪರಾಧಿ ಮತ್ತು ಮಾಫಿಯಾಗಳ ಮೇಲಿನ ಬುಲ್ಡೋಜರ್ ಕಾರ್ಯಾಚರಣೆ ಮುಂದುವರಿಯಲಿದೆ: ಯೋಗಿ ಆದಿತ್ಯನಾಥ್

ಉತ್ತರಪ್ರದೇಶ: ಶುಕ್ರವಾರ ಜೂನ್ 10 ರಂದು ಉತ್ತರಪ್ರದೇಶಲ್ಲಿ ಭುಗಿಲೆದ್ದ ಪ್ರತಿಭಟನೆಯ ಹಿನ್ನಲೆಯಲ್ಲಿ, ಉತ್ತರಪ್ರದೇಶ ಸರಕಾರವು ದಂಡಂ ದಶಗುಣಂ ಭವೇತ್ ಎನ್ನುವ ನೀತಿಯನ್ನು ಅನುಸರಿಸಿದ್ದು, ಸಮಾಜದ ಶಾಂತಿ ಕದಡುವ ಸಮಾಜದ ಘಾತಕ ಶಕ್ತಿಗಳ ವಿರುದ್ದ ಸಮರ ಸಾರಿದೆ. ಜೂನ್ 10 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಪ್ರತಿಭಟನೆಗಳ ನಡುವೆ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಜನರನ್ನು ಗುರುತಿಸಲು ಮತ್ತು ಬಂಧಿಸಲು ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ರಾಜ್ಯದ ಏಳು ಜಿಲ್ಲೆಗಳಿಂದ ಸುಮಾರು 230 ಜನರನ್ನು ಬಂಧಿಸಲಾಗಿದೆ. ಹಿಂದಿನ […]
ರಾಜ್ಯಸಭಾ ಚುನಾವಣೆ: 2 ರಾಜ್ಯಗಳಿಂದ ತಲಾ 4 ಸ್ಥಾನಗಳನ್ನು ಗೆದ್ದ ಬಿಜಿಪಿ, ಕಾಂಗ್ರೆಸ್; ಮಹಾರಾಷ್ಟ್ರ, ಹರಿಯಾಣದಲ್ಲಿ ಫಲಿತಾಂಶ ವಿಳಂಬ

ಬೆಂಗಳೂರು: ಜಿದ್ದಾಜಿದ್ದಿ ರಾಜ್ಯಸಭಾ ಚುನಾವಣಾ ಹೋರಾಟದಲ್ಲಿ ಕರ್ನಾಟಕದ ಆಡಳಿತಾರೂಢ ಬಿಜೆಪಿ ಪಕ್ಷದ ಮೂರೂ ಅಭ್ಯರ್ಥಿಗಳು ನಿರೀಕ್ಷೆಯಂತೆಯೆ ಗೆದ್ದಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಲೆಹರ್ ಸಿಂಗ್ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆದ್ದು ಗೆಲುವಿನ ನಗೆ ಬೀರಿದ್ದರೆ, ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಜನತಾ ದಳ ಶೂನ್ಯ ಸಂಪಾದನೆ ಮಾಡಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಒಂದು ಸ್ಥಾನವನ್ನು ಗೆದ್ದಿದೆ. ಏತನ್ಮಧ್ಯೆ, ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ […]