ಸ್ಟಾರ್ಟ್ ಅಪ್ ಶ್ರೇಯಾಂಕ: ಗುಜರಾತ್, ಮೇಘಾಲಯ ಮತ್ತು ಕರ್ನಾಟಕ ಅತ್ಯುತ್ತಮ ಪ್ರದರ್ಶಕರು

ನವದೆಹಲಿ: ಉದ್ಯಮ ಮತ್ತು ಆಂತರಿಕ ವ್ಯಾಪಾರದ ಪ್ರಚಾರ ಇಲಾಖೆ (ಡಿಪಿಐಐಟಿ)ಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದ ಪ್ರಕಾರ, ಉದಯೋನ್ಮುಖ ಉದ್ಯಮಿಗಳಿಗಾಗಿ(ಸ್ಟಾರ್ಟ್ ಅಪ್) ಆರಂಭಿಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್, ಮೇಘಾಲಯ ಮತ್ತು ಕರ್ನಾಟಕವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಾಗಿ ಹೊರಹೊಮ್ಮಿವೆ. ಕೇರಳ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣವನ್ನು ಉನ್ನತ ಪ್ರದರ್ಶನಕಾರರು ಎಂದು ವರ್ಗೀಕರಿಸಲಾಗಿದೆ. ರಾಜ್ಯಗಳ ಸ್ಟಾರ್ಟಪ್ ಶ್ರೇಯಾಂಕ 2021 ಅನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ಬಿಡುಗಡೆ ಮಾಡಿದರು. ಒಟ್ಟು 24 […]
ಸ್ವಾತಂತ್ರ್ಯ ಯೋಧ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನ: ಹುಟ್ಟೂರಿನಲ್ಲಿ 30 ಅಡಿ ಕಂಚಿನ ಪ್ರತಿಮೆ ಅನಾವರಣ

ಭೀಮಾವರಂ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆಂಧ್ರಪ್ರದೇಶದ ಭೀಮಾವರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ಸಲ್ಲಿಸಲಿದ್ದಾರೆ. ಪ್ರಧಾನಿಯ ಭೀಮಾವರಂ ಭೇಟಿಯು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿದೆ. ಈ ಸಂದರ್ಭದಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನಾಚರಣೆ ಮತ್ತು ಅವರು ನೇತೃತ್ವದ ರಾಂಪ ಬಂಡಾಯದ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಪಂಡ್ರಂಗಿಯಲ್ಲಿರುವ ಅಲ್ಲೂರಿ […]
ಇಂದು ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಲಿದ್ದಾರೆ. ತಂತ್ರಜ್ಞಾನದ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ, ಜೀವನ ಸುಲಭವಾಗುವುದನ್ನು ಖಚಿತಪಡಿಸಿಕೊಳ್ಳಲು ಸೇವಾ ವಿತರಣೆಯನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ಬಹು ಡಿಜಿಟಲ್ ಉಪಕ್ರಮಗಳನ್ನು ಅವರು ಪ್ರಾರಂಭಿಸಲಿದ್ದಾರೆ. ಡಿಜಿಟಲ್ ಇಂಡಿಯಾ ವೀಕ್‌ನ ಥೀಮ್ ನ್ಯೂ ಇಂಡಿಯಾಸ್ ಟೆಕ್ಕೇಡ್ ನ ವೇಗವರ್ಧನೆ ಎಂದಾಗಿದೆ. ಈ ಸಂದರ್ಭದಲ್ಲಿ, ‘ಡಿಜಿಟಲ್ ಇಂಡಿಯಾ ಭಾಷಿಣಿ’ ಅನ್ನು ಪ್ರಧಾನ ಮಂತ್ರಿಯವರು ಅನಾವರಣಗೊಳಿಸಲಿದ್ದಾರೆ, ಇದು ಧ್ವನಿ ಆಧಾರಿತ […]
2002 ಗೋಧ್ರಾ ರೈಲು ಹತ್ಯಾಕಾಂಡ: ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಜೀವಾವಧಿ ಶಿಕ್ಷೆ

ಗೋಧ್ರಾ: 2002 ರ ಭೀಬತ್ಸ ಗೋದ್ರಾ ರೈಲು ಹತ್ಯಾಕಾಂಡದ ಘಟನೆಯ ಸುಮಾರು ಎರಡು ದಶಕಗಳ ಬಳಿಕ, ಗುಜರಾತ್‌ನ ಗೋಧ್ರಾ ನ್ಯಾಯಾಲಯವು ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಕೊಲೆ ಆರೋಪದ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್‌ಸಿ ಕೊಡೇಕರ್ ಹೇಳಿದ್ದಾರೆ. ಕಳೆದ ವರ್ಷ ರಫೀಕ್ ಹುಸೇನ್ ಬಂಧನದ ನಂತರ ಪ್ರಕರಣದಲ್ಲಿ ಆತನ ವಿರುದ್ಧದ ವಿಚಾರಣೆ ಪ್ರಾರಂಭವಾಗಿತ್ತು. ರೈಲಿನಲ್ಲಿದ್ದ ಒಟ್ಟು 59 ಕರಸೇವಕರನ್ನು ಸಜೀವ ಸುಟ್ಟು ಗೋಧ್ರೋತ್ತರ ಗಲಭೆಗೆ ಕಾರನಾದ ಆರೋಪಿ ರಫೀಕ್ […]
ಮನೆ ಬಾಗಿಲಲ್ಲೆ ಪಡೆಯಬಹುದು ಬಾಬಾ ಬರ್ಫಾನಿ ಪ್ರಸಾದ: ಆನ್ ಲೈನ್ ಪೂಜೆ ಸೇವೆ ಪ್ರಾರಂಭಿಸಿದ ಅಮರನಾಥ ಆಡಳಿತ ಮಂಡಳಿ

ಜಮ್ಮು: ಶ್ರೀ ಅಮರನಾಥ ದೇವಾಲಯ ಮಂಡಳಿಯು ಈ ವರ್ಷ ಹಿಮಾಲಯದ ಗುಹಾ ದೇಗುಲಕ್ಕೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್‌ಲೈನ್ ಪೂಜೆ, ಹವನ ಮತ್ತು ಪ್ರಸಾದ ಸೇವೆಗಳನ್ನು ಘೋಷಿಸಿದೆ. ಆನ್‌ಲೈನ್ ಸೇವೆಗಳನ್ನು ತನ್ನ www.shriamarnathjishrine.com ವೆಬ್‌ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾದ ಅದರ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು ಆಡಳಿತ ಮಂಡಳಿ ತಿಳಿಸಿದೆ. ಪೂಜೆಗೆ 1,100 ರೂ ನಿಗದಿಪಡಿಸಲಾಗಿದೆ. ಭಕ್ತಾದಿಗಳ ಹೆಸರಿನಲ್ಲಿ ಪುರೋಹಿತರು ಪೂಜೆ ಮತ್ತು ಹವನಗಳನ್ನು ನಡೆಸುತ್ತಾರೆ ಮತ್ತು ಭಕ್ತರು ಆನ್‌ಲೈನ್ ಮೂಲಕ […]