ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದೆ: ಪಾಕ್ ಪತ್ರಕರ್ತನ ಹೇಳಿಕೆಯಿಂದ ದೇಶದಲ್ಲಿ ಸಂಚಲನ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತನ್ನನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದರು ಎಂಬ ಪಾಕ್ ಪತ್ರಕರ್ತನ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಯಿಂದ ದೇಶದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದೆ ಮತ್ತು ಆ ಸಮಯದಲ್ಲಿ ಪಾಕಿಸ್ತಾನದ ಐಎಸ್‌ಐ ಜೊತೆ ಭಾರತಕ್ಕೆ ಸಂಬಂಧಿಸಿದ ಹಲವು ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾಗಿ ಪಾಕಿಸ್ತಾನಿ ಪತ್ರಕರ್ತರೊಬ್ಬರ ಸಂದರ್ಶನದಿಂದ ಈ ವಿವಾದ ಹುಟ್ಟಿಕೊಂಡಿದೆ. “ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು […]

ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣ ತೀವ್ರ ಏರಿಕೆ: ರಟ್ಜರ್ಸ್ ವಿಶ್ವವಿದ್ಯಾಲಯದ ವಿಶ್ಲೇಷಣೆ

ಇತ್ತೀಚೆಗೆ, ಅಮೇರಿಕಾದ ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣಗಳಲ್ಲಿ ತೀವ್ರ ಏರಿಕೆಯ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಅವರ 1 ಮಿಲಿಯನ್ ಟ್ವೀಟ್‌ಗಳ ವಿಶ್ಲೇಷಣೆಯ ಪ್ರಕಾರ, ಇರಾನಿನ ಟ್ರೋಲ್‌ಗಳು ಹಿಂದೂ ಸಮುದಾಯವು ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ಆರೋಪಿಸುವ ಅಭಿಯಾನದ ಭಾಗವಾಗಿ ವಿಭಜನೆಯನ್ನು ಸೃಷ್ಟಿಸಲು ಮೀಮ್‌ಗಳು, ಹಿಂದೂ ವಿರೋಧಿ ರೂಢಿಬದ್ದ ಧಾರಣೆಗಳನ್ನು ಹರಡುತ್ತಿದೆ. “ದುರದೃಷ್ಟವಶಾತ್, ಹಿಂದೂ ಜನಸಂಖ್ಯೆಯು ಎದುರಿಸುತ್ತಿರುವ ಮತಾಂಧತೆ ಮತ್ತು ಹಿಂಸಾಚಾರದಲ್ಲಿ ಹೊಸದೇನೂ ಇಲ್ಲ. ಹೊಸದೇನೆಂದರೆ ಸಾಮಾಜಿಕ ಮಾಧ್ಯಮದಲ್ಲಿ […]

ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಕುರಿತು ಸಭೆ: ವೈಯಕ್ತಿಕ ಭೇಟಿಗಾಗಿ ವಿದೇಶಕ್ಕೆ ತೆರಳಿದ ರಾಹುಲ್ ಗಾಂಧಿ

ನವದೆಹಲಿ: ಮಂಗಳವಾರದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಸಣ್ಣ ವೈಯಕ್ತಿಕ ಭೇಟಿಗೆ’ ವಿದೇಶಕ್ಕೆ ತೆರಳಿದ್ದು, ರಾಷ್ಟ್ರಪತಿ ಚುನಾವಣೆ ಮತ್ತು ಜುಲೈ 18 ರಂದು ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಮುನ್ನ ಭಾನುವಾರದ ವೇಳೆಗೆ ಹಿಂತಿರುಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಪಕ್ಷವು ಅವರ ಭೇಟಿಯ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ ಮತ್ತು ಅದನ್ನು ವೈಯಕ್ತಿಕ ಭೇಟಿ ಎಂದಷ್ಟೆ ಹೇಳಿದೆ. ಪದೇ ಪದೇ ವಿದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಬಿಜೆಪಿಯಿಂದ ಆಗಾಗ್ಗೆ ಟೀಕೆಗೆ ಒಳಗಾಗಿರುವ ರಾಹುಲ್, ಗುರುವಾರ ನಡೆಯಲಿರುವ ‘ಭಾರತ್ […]

ಬಳಕೆದಾರರ ಒಪ್ಪಿಗೆ ಇಲ್ಲದೆ ಯುಪಿಐ ಆ್ಯಪ್‌ ಗಳು ಲೊಕೇಶನ್ ಡೇಟಾ ಸಂಗ್ರಹಿಸುವಂತಿಲ್ಲ: ಎನ್.ಪಿ.ಸಿ.ಐ

ನೆವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ) ಎಲ್ಲಾ ಯುಪಿಐ-ಆಧಾರಿತ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರ ಲೊಕೇಶನ್ ಡೇಟಾವನ್ನು ಸಂಗ್ರಹಿಸುವ ಮೊದಲು ಇದಕ್ಕೆ ಬಳಕೆದಾರರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ತಮ್ಮ ಲೊಕೇಶನ್ ಹಂಚಿಕೊಳ್ಳಲು ಸಮ್ಮತಿಯನ್ನು ಸಕ್ರಿಯಗೊಳಿಸುವ ಅಥವಾ ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರಿಗೆ ಕಡ್ಡಾಯವಾಗಿ ಒದಗಿಸಬೇಕು ಎಂದು ಅದು ಹೇಳಿದೆ. “ಸೇವೆಗಳನ್ನು ಪಡೆದುಕೊಳ್ಳುವಾಗ ಆರಂಭದಲ್ಲಿ ಯುಪಿಐ ಅಪ್ಲಿಕೇಶನ್‌ಗಳಿಗೆ ಲೊಕೇಶನ್ ಹಂಚಿಕೊಳ್ಳಲು ಗ್ರಾಹಕರು ಈಗಾಗಲೇ ಒಪ್ಪಿಗೆ ನೀಡಿದ್ದರೆ ಮತ್ತು ನಂತರ ಸಮ್ಮತಿಯನ್ನು ಹಿಂಪಡೆಯಲು ಬಯಸಿದ್ದರೂ ಸಹ, ಗ್ರಾಹಕರಿಗೆ […]

ರೂಪಾಯಿಯಲ್ಲೆ ಅಂತರರಾಷ್ಟ್ರೀಯ ವ್ಯಾಪಾರ ಪಾವತಿ: ರೂಪಾಯಿ ಬಲವರ್ಧನೆಗೆ ಆರ್‌ಬಿಐ ಉಪಕ್ರಮ

ನವದೆಹಲಿ: ಇನ್ನು ಮುಂದೆ ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ಪಾವತಿಗಳನ್ನು ಮಾಡಲು ಆರ್‌ಬಿಐ ಒಂದು ಕಾರ್ಯವಿಧಾನವನ್ನು ಸ್ಥಾಪಿಸಿದೆ. ರೂಪಾಯಿಯಲ್ಲೇ ರಫ್ತು ಮತ್ತು ಆಮದುಗಳ ಇನ್‌ವಾಯ್ಸ್, ಪಾವತಿ ಮತ್ತು ಸೆಟಲ್ ಮೆಂಟ್ ಗಳನ್ನು ನಡೆಸಲು ಕೇಂದ್ರ ಬ್ಯಾಂಕ್ ಈ ಹೆಚ್ಚುವರಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಕ್ರಮವು ಭಾರತದ ರಫ್ತಿಗೆ ಒತ್ತು ನೀಡುವ ಮೂಲಕ ಜಾಗತಿಕ ವ್ಯಾಪಾರದ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತೀಯ ರೂಪಾಯಿಯಲ್ಲಿ ಜಾಗತಿಕ ವ್ಯಾಪಾರ ಸಮುದಾಯದ ಹೆಚ್ಚುತ್ತಿರುವ ಆಸಕ್ತಿಯನ್ನು ಬೆಂಬಲಿಸುತ್ತದೆ. ಈ ಕಾರ್ಯವಿಧಾನವನ್ನು ಜಾರಿಗೆ […]