ದೇಶದ ಮೊದಲನೇ ಬುಡಕಟ್ಟು ಜನಾಂಗದ ಹಾಗೂ ಎರಡನೇ ಮಹಿಳಾ ರಾಷ್ಟ್ರಪತಿ: ದ್ರೌಪದಿ ಮುರ್ಮು

ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಎನ್.ಡಿ.ಎ ಪಕ್ಷದ ಅಭ್ಯರ್ಥಿ ದ್ರೌಪದಿ ಮುರ್ಮು ವಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಅವರನ್ನು ಸೋಲಿಸಿ ದೇಶದ 15ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಪದವಿಯನ್ನು ಅಲಂಕರಿಸಿದ್ದಾರೆ. ಮೂರನೇ ಸುತ್ತಿನವರೆಗೆ 8,38,839  ಮೌಲ್ಯದ 3219 ಮಾನ್ಯ ಮತಗಳಲ್ಲಿ ದ್ರೌಪದಿ ಮುರ್ಮು 5,77,777 ಮೌಲ್ಯದ 2161 ಮತಗಳನ್ನು ಪಡೆದಿದ್ದಾರೆ. ಯಶವಂತ್ ಸಿನ್ಹಾ 2,61,062 ಮೌಲ್ಯದ 1058 […]

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ

ನವದೆಹಲಿ: ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂದು ದೆಹಲಿಯ ಸಂಸತ್ ಭವನದಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೆಗ್ಗಡೆಯವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಭಾರತ ನಮ್ಮ ಆಪ್ತ ಮಿತ್ರ! ಹೀಗೆಂದರು 69% ಅಫ್ಘನ್ ಜನರು!! ಸಮೀಕ್ಷೆಯಲ್ಲಿ ಬಯಲಾಯ್ತು ಅಫ್ಘನ್ನರ ಭಾರತ ಪ್ರೇಮ

ಕಾಬುಲ್: ಇತ್ತೀಚಿನ ಸಮೀಕ್ಷೆಯ ಪ್ರಕಾರ ಅಫ್ಘಾನಿಸ್ತಾನದ ಶೇಕಡ 69 ರಷ್ಟು ಜನರು ಭಾರತವನ್ನು ಅಫ್ಘಾನಿಸ್ತಾನದ ‘ಬೆಸ್ಟ್ ಫ್ರೆಂಡ್’ ದೇಶವಾಗಿ ಆಯ್ಕೆ ಮಾಡಿದ್ದಾರೆ. ಬ್ರಸೆಲ್ಸ್ ಮೂಲದ ಸುದ್ದಿ ವೆಬ್‌ಸೈಟ್ ಇಯು ರಿಪೋರ್ಟರ್, ಅಫ್ಘಾನಿಸ್ತಾನದ ಜನರ ಒಳನೋಟವನ್ನು ಪಡೆಯಲು, ಅವರ ಹಿಂದಿನ, ಪ್ರಸ್ತುತ ಸನ್ನಿವೇಶ ಮತ್ತು ಅವರ ಭವಿಷ್ಯದ ಆಕಾಂಕ್ಷೆಗಳ ಸಾಮಾನ್ಯ ಜನರ ಮೌಲ್ಯಮಾಪನದ ತಿಳುವಳಿಕೆಯನ್ನು ಸಂಗ್ರಹಿಸುವ ಸಮೀಕ್ಷೆಯನ್ನು ನಡೆಸಲಾಯಿತು ಎಂದು ಹೇಳಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 67 ಕ್ಕಿಂತ ಹೆಚ್ಚು ಅಫ್ಘಾನ್ ಜನರು ಸಂಯುಕ್ತ ಅಮೇರಿಕಾದ ತಪ್ಪಾದ ಸಮಯದಲ್ಲಿ […]

ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ: ದೇಶಾದ್ಯಂತ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ ಮಂಜೂರು

ನವದೆಹಲಿ: ಫೇಮ್ ಇಂಡಿಯಾ ಯೋಜನೆಯ ಹಂತ-2 ಅಡಿಯಲ್ಲಿ ದೇಶಾದ್ಯಂತ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರವು 25 ರಾಜ್ಯ ಹಾಗೂ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ 68 ನಗರಗಳಲ್ಲಿ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಿದೆ. ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ(ಫೇಮ್) ಯೋಜನೆಯಡಿ ಇವುಗಳನ್ನು ಮಂಜೂರು ಮಾಡಲಾಗಿದೆ. ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಫೇಮ್ ಇಂಡಿಯಾ […]

ಖಾದ್ಯ ತೈಲ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ: ನಾಲ್ಕು ತಿಂಗಳಲ್ಲಿ 15-25ರೂ ಪ್ರತಿ ಲೀಟರ್ ಇಳಿಕೆ

ನವದೆಹಲಿ: ದಿನನಿತ್ಯದ ಅಡುಗೆ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ನಿರುಮ್ಮಳತೆಯನ್ನು ತಂದುಕೊಟ್ಟಿದೆ. ಸರಕಾರದ ಡೇಟಾಗಳ ಪ್ರಕಾರ ಕಳೆದ ನಾಲ್ಕು ತಿಂಗಳಿನಲ್ಲಿ ಖಾದ್ಯ ತೈಲ ಬೆಲೆಯು ಪ್ರತಿ ಲೀಟರಿಗೆ 15-25ರೂ ಗಳಷ್ಟು ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇಂಡೋನೇಷ್ಯಾವು ಆಗಸ್ಟ್ 31 ರವರೆಗೆ ಎಲ್ಲಾ ತಾಳೆ ಎಣ್ಣೆ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕುವುದರೊಂದಿಗೆ, ಭಾರತದ ಖಾದ್ಯ ತೈಲ ತಯಾರಕರು ಇಳಿಕೆಯಾದ […]