ಕಬ್ಬು ಬೆಳೆಗಾರರಿಗೆ ಬಂಪರ್ ಕೊಡುಗೆ: ಕೇಂದ್ರದಿಂದ ಕ್ವಿಂಟಲ್‌ಗೆ 305 ರೂಗಳ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ನೀಡಲು ಅನುಮೋದನೆ

ನವದೆಹಲಿ: ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2022-23 (ಅಕ್ಟೋಬರ್-ಸೆಪ್ಟೆಂಬರ್)ನೇ ಸಾಲಿನ ಸಕ್ಕರೆ ಋತುವಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಅನುಮೋದಿಸಿದೆ. ಕಬ್ಬು ಬೆಳೆಗಾರರಿಗೆ ಕ್ವಿಂಟಲ್‌ಗೆ 305 ರೂಪಾಯಿಗಳ ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಇದಾಗಿದೆ. 2022-23 ರ ಸಕ್ಕರೆ ಋತುವಿನ ಎಫ್‌ಆರ್‌ಪಿಯು ಪ್ರಸ್ತುತ ಸಕ್ಕರೆ ಋತು 2021-22 ಕ್ಕಿಂತ 2.6 ಶೇಕಡಾ ಹೆಚ್ಚಾಗಿದೆ. ಕಬ್ಬು ಬೆಳೆಗಾರರಿಗೆ ಖಾತರಿ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಕಬ್ಬಿನ ಎಫ್‌ಆರ್‌ಪಿ ನಿಗದಿಪಡಿಸಲಾಗಿದೆ.ಈ ನಿರ್ಧಾರವು ಐದು ಕೋಟಿ ಕಬ್ಬು ಬೆಳೆಗಾರರು ಮತ್ತು […]
ಆಗಸ್ಟ್ 5 ರಿಂದ 15 ರವರೆಗೆ ದೇಶದ ಸಂರಕ್ಷಿತ ಸ್ಮಾರಕ ಹಾಗೂ ತಾಣಗಳಿಗೆ ಉಚಿತ ಪ್ರವೇಶ

ನವದೆಹಲಿ: ಆಗಸ್ಟ್ 5 ರಿಂದ 15 ರವರೆಗೆ ದೇಶಾದ್ಯಂತ ತನ್ನ ಎಲ್ಲಾ ಸಂರಕ್ಷಿತ ಸ್ಮಾರಕಗಳು ಮತ್ತು ತಾಣಗಳಿಗೆ ಸಂದರ್ಶಕರು ಮತ್ತು ಪ್ರವಾಸಿಗರಿಗೆ ಸರ್ಕಾರವು ಉಚಿತ ಪ್ರವೇಶವನ್ನು ನೀಡಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ವರ್ಷದ ಆಗಸ್ಟ್ 5 ರಿಂದ 15 ರವರೆಗೆ ಎಲ್ಲಾ ಟಿಕೆಟ್ ಹೊಂದಿರುವ ಕೇಂದ್ರ ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ […]
ಟೋಲ್ ಪ್ಲಾಜಾ, ಫಾಸ್ಟ್ ಟ್ಯಾಗ್, ಉದ್ದುದ್ದ ಲೈನ್ ಗಳಿಗೆ ಗುಡ್ ಬೈ: ವಾಹನಗಳ ಸುಗಮ ವಾಹನ ಸಂಚಾರಕ್ಕೆ ಮಹತ್ವದ ಬದಲಾವಣೆಗೆ ಸಜ್ಜಾದ ಕೇಂದ್ರ

ನವದೆಹಲಿ: ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ಟೋಲ್ ಪ್ಲಾಜಾಗಳನ್ನು ಬದಲಿಸಲು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಂದಿನ ಆರು ತಿಂಗಳಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಸರ್ಕಾರದ ಮುಂದೆ ಎರಡು ಆಯ್ಕೆಗಳಿವೆ. ಮೊದಲನೆಯದು ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಯಾಗಿದ್ದು, ಜಿಪಿಎಸ್ ವ್ಯವಸ್ಥೆಯ ಮೂಲಕ ಟೋಲ್ ಅನ್ನು ನೇರವಾಗಿ ಪ್ರಯಾಣಿಕರ ಬ್ಯಾಂಕ್ ಖಾತೆಗಳಿಂದ ತೆಗೆದುಕೊಳ್ಳಲಾಗುತ್ತದೆ. ಎರಡನೆಯದು ನೇರವಾಗಿ ವಾಹನಗಳ ನಂಬರ್ ಪ್ಲೇಟ್‌ಗಳ […]
ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್: ಕೊನೆಯ ದಿನ ದಾಖಲೆಯ 72.42 ಲಕ್ಷ ಐಟಿಆರ್ ಸಲ್ಲಿಕೆ; ಒಟ್ಟು 5 ಕೋಟಿ 83 ಲಕ್ಷ ಐಟಿಆರ್ ಗಳು

ನವದೆಹಲಿ: ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯದಿನವಾಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡಬೇಕೆಂದು ಕೂಗು ಕೇಳಿ ಬಂದಿದ್ದರೂ ವಿತ್ತ ಇಲಾಖೆಯು ದಿನಾಂಕ ವಿಸ್ತರಣೆಗೆ ಹಿಂದೇಟು ಹಾಕಿತ್ತು. ಆದಾಗೂ, ಕೊನೆಯ ದಿನವಾದ ಜುಲೈ 31 ರವರೆಗೆ 5 ಕೋಟಿ 83 ಲಕ್ಷ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಭಾನುವಾರ ಒಂದೇ ದಿನ 72 ಲಕ್ಷದ 42 ಸಾವಿರಕ್ಕೂ ಅಧಿಕ ಐಟಿಆರ್ ಸಲ್ಲಿಕೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಕ್ಲಪ್ತ ಸಮಯಕ್ಕೆ ಐಟಿಆರ್ […]
ದೇಶದ ಮೂಲ ರಾಷ್ಟ್ರಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಜನ್ಮಶತಮಾನೋತ್ಸವ ಆಚರಣೆ

ನವದೆಹಲಿ: ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಾಳಿ ವೆಂಕಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮಂಗಳವಾರ ದೆಹಲಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ತಿಳಿಸಿದ್ದಾರೆ. ವಿಜಯವಾಡದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕಿಶನ್ ರೆಡ್ಡಿ, ಪಿಂಗಾಳಿಯವರು ವಿನ್ಯಾಸಗೊಳಿಸಿದ ಮೂಲ ಧ್ವಜವನ್ನು ಅಂದು ಪ್ರದರ್ಶಿಸಲಾಗುವುದು. ಹೊಸದಿಲ್ಲಿಯಲ್ಲಿ ನಡೆಯಲಿರುವ ಶತಮಾನೋತ್ಸವ ಸಮಾರಂಭಕ್ಕೆ ಪಿಂಗಾಳಿ ವೆಂಕಯ್ಯನವರ ಹುಟ್ಟೂರಿಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಪ್ರಧಾನಿ ಪರವಾಗಿ ಆಹ್ವಾನಿಸುವುದಾಗಿ ತಿಳಿಸಿದ ಅವರು, ಪಿಂಗಾಳಿ ಅವರ ಹೆಸರಿನಲ್ಲಿ […]