ಐಟಿ ಬಿಟಿ ಕಂಪನಿಗಳಿಗಿಂತಲೂ ಶ್ರೀಮಂತ ತಿರುಮತಿ ತಿಮ್ಮಪ್ಪ: ದೇವಸ್ಥಾನದ ನಿವ್ವಳ ಮೌಲ್ಯ 2.5 ಲಕ್ಷ ಕೋಟಿ ರೂಪಾಯಿಗಳು

ಹೈದರಾಬಾದ್: ತಿರುಪತಿಯ ಜಗತ್ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಮೌಲ್ಯ ರೂ 2.5 ಲಕ್ಷ ಕೋಟಿ (ಸುಮಾರು 30 ಶತಕೋಟಿ ಡಾಲರ್) ಯಾಗಿದ್ದು ಇದು ದೇಶದ ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ಒ.ಎನ್.ಜಿ.ಸಿ ಮತ್ತು ಐಒಸಿ ಅಂತಹ ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ. 1933 ರಲ್ಲಿ ಸ್ಥಾಪನೆಯಾದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ಟ್ರಸ್ಟ್ ಇದೇ ಮೊದಲ ಬಾರಿಗೆ ತಿರುಪತಿಯ ಪ್ರಧಾನ ದೇವರ […]

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಕೋಟಾ ಕಾನೂನನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನಿವೃತ್ತರಾಗುವ ಒಂದು ದಿನದ ಮೊದಲು ನಿರ್ಣಾಯಕ ತೀರ್ಪಿನಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) 10 ಪ್ರತಿಶತ ಮೀಸಲಾತಿ ಪ್ರಯೋಜನಗಳಿಗಾಗಿ ಕೇಂದ್ರ ಕಾನೂನಿನ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತನ್ನ ತೀರ್ಪನ್ನು ನೀಡಿದೆ. “ಇಡಬ್ಲ್ಯೂಎಸ್ ಕೋಟಾವು ಕಾನೂನು ಆರ್ಥಿಕ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಭೂತ ರಚನೆ ಅಥವಾ ಸಮಾನತೆಯ ಕೋಡ್ ಅನ್ನು ಉಲ್ಲಂಘಿಸುವುದಿಲ್ಲ” ಎಂದು ಕಾನೂನನ್ನು ಎತ್ತಿ ಹಿಡಿಯುತ್ತಾ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ತೀರ್ಪಿತ್ತರು. ಇಡಬ್ಲ್ಯೂಎಸ್ ಕೋಟಾ ಕಾನೂನನ್ನು […]

ಉಪಚುನಾವಣಾ ಫಲಿತಾಂಶ: ಏಳರಲ್ಲಿ ನಾಲ್ಕು ಸ್ಥಾನ ಬಿಜೆಪಿಗೆ; ಆರ್.ಜೆ.ಡಿ, ಶಿವಸೇನೆ, ಟಿ.ಆರ್. ಎಸ್ ಗೆ ತಲಾ ಒಂದು ಸ್ಥಾನ

ನವದೆಹಲಿ: ಹರಿಯಾಣದ ಆದಂಪುರ, ಬಿಹಾರದ ಮೊಕಮಾ ಮತ್ತು ಗೋಪಾಲ್‌ಗಂಜ್, ಮಹಾರಾಷ್ಟ್ರದ ಅಂಧೇರಿ (ಪೂರ್ವ), ತೆಲಂಗಾಣದ ಮುನುಗೋಡೆ, ಉತ್ತರ ಪ್ರದೇಶದ ಗೋಲ ಗೋಕ್ರನಾಥ ಮತ್ತು ಒಡಿಶಾದ ಧಾಮ್‌ನಗರ ಈ ಏಳು ಕ್ಷೇತ್ರಗಳಲ್ಲಿ ನವೆಂಬರ್ 3 ರಂದು ತೆರವಾದ ಸ್ಥಾನಗಳಿಗೆ ಉಪ-ಚುನಾವಣೆ ನಡೆದಿತ್ತು. ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಿದ್ದು, ಒಡಿಶಾದ ಧಾಮ್‌ನಗರ, ಬಿಹಾರದ ಗೋಪಾಲ್‌ಗಂಜ್, ಹರಿಯಾಣದ ಆದಂಪುರ ಮತ್ತು ಉತ್ತರ ಪ್ರದೇಶದ ಗೋಲಾ ಗೋಕ್ರನಾಥದಲ್ಲಿ ಬಿಜೆಪಿ ಗೆದ್ದರೆ, ಅಂಧೇರಿಯಲ್ಲಿ (ಪೂರ್ವ) ಉದ್ಧವ್ ಠಾಕ್ರೆ ನೇತೃತ್ವದ ಸೇನೆಯ ರುತುಜಾ ಲಟ್ಕೆ […]

ಸ್ವತಂತ್ರ ಭಾರತದ ಪ್ರಥಮ ಮತದಾರ ಶ್ಯಾಮ್ ಸರನ್ ನೇಗಿ 106 ನೇ ವಯಸ್ಸಿನಲ್ಲಿ ನಿಧನ

ನವದೆಹಲಿ: ಸ್ವತಂತ್ರ ಭಾರತದ ಪ್ರಥಮ ಮತದಾರ ಶ್ಯಾಮ್ ಸರನ್ ನೇಗಿ ಶನಿವಾರ ಬೆಳಿಗ್ಗೆ ತಮ್ಮ 106 ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ದೇಶದ ಮೊದಲ ಚುನಾವಣೆಯಿಂದ ಪ್ರಸಕ್ತ ಚುನಾವಣೆವರೆಗೆ ಎಲ್ಲ ಚುನಾವಣೆಗಳಲ್ಲೂ ನೇಗಿ ಮತ ಚಲಾಯಿಸಿದ್ದಾರೆ. 106 ನೇ ವಯಸ್ಸಿನಲ್ಲಿಯೂ ಅವರು ಮತ ಚಲಾಯಿಸುವುದನ್ನು ಬಿಟ್ಟಿರಲಿಲ್ಲ. ನವೆಂಬರ್ 2 ರಂದು 34 ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಅಂಚೆ ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಶ್ಯಾಮ್ ಸರಣ್ ನೇಗಿ ಅವರು […]

ಮೋರ್ಬಿ ಸೇತುವೆ ದುರಂತ: ಸೇತುವೆ ದುರಸ್ತಿಗೆ ಮಂಜೂರಾದ 2 ಕೋಟಿ ರೂ.ಗಳಲ್ಲಿ ಕೇವಲ 12 ಲಕ್ಷ ರೂ ಖರ್ಚು ಮಾಡಿದ ಒರೆವಾ

ಮೋರ್ಬಿ: 130 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿ ತೂಗು ಸೇತುವೆ ದುರಂತದ ತನಿಖೆಯಲ್ಲಿ ಸೇತುವೆಯ ನವೀಕರಣದ ಜವಾಬ್ದಾರಿ ಹೊತ್ತ ಒರೆವಾ ಕಂಪನಿಯು ಮಂಜೂರಾದ 2 ಕೋಟಿ ರೂ.ಗಳಲ್ಲಿ ಕೇವಲ 12 ಲಕ್ಷ ರೂಗಳನ್ನು ಮಾತ್ರ ಖರ್ಚುಮಾಡಿದೆ ಎಂದು ಬಹಿರಂಗವಾಗಿದೆ. ಕಂಪನಿಯು ನವೀಕರಣದ ಗುತ್ತಿಗೆಯನ್ನು ಹೇಗೆ ಪಡೆದುಕೊಂಡಿದೆ ಮತ್ತು ಬ್ರಿಟಿಷರ ಕಾಲದ ಸೇತುವೆಯನ್ನು ಬಲಪಡಿಸಲು ಮಂಜೂರಾದ ಹಣದಲ್ಲಿ ಕೇವಲ ಒಂದು ಭಾಗವನ್ನು ಹೇಗೆ ಖರ್ಚು ಮಾಡಿದೆ ಎನ್ನುವುದನ್ನು ಪೊಲೀಸ್ ತನಿಖೆಯು ಬಹಿರಂಗಪಡಿಸಿದೆ. ಅಜಂತಾದ ಅಂಗಸಂಸ್ಥೆಯಾಗಿರುವ ಅಹಮದಾಬಾದ್ […]