ಭಾರತದಲ್ಲಿ ಬಡತನ ಮಟ್ಟ 5% ಅಥವಾ ಅದಕ್ಕಿಂತ ಕಡಿಮೆ: ಬಿವಿಆರ್ ಸುಬ್ರಹ್ಮಣ್ಯಂ

ನವದೆಹಲಿ: ಭಾರತದಲ್ಲಿ ಬಡತನವು ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಇತ್ತೀಚಿನ ಗೃಹಬಳಕೆಯ ವೆಚ್ಚ ಸಮೀಕ್ಷೆಯನ್ನು (HCES) ಉಲ್ಲೇಖಿಸಿ ಹೇಳಿದ್ದಾರೆ. ಆಗಸ್ಟ್ 2022 ಮತ್ತು ಜುಲೈ 2023 ರ ನಡುವೆ ನಡೆಸಲಾದ ಸಮೀಕ್ಷೆಯು ಮನೆಯ ಬಳಕೆಯ ಒಳನೋಟಗಳನ್ನು ಒದಗಿಸಿ, ಬಡತನ ಮಟ್ಟಗಳು ಮತ್ತು ಸರ್ಕಾರವು ಜಾರಿಗೆ ತಂದಿರುವ ಬಡತನ ನಿರ್ಮೂಲನೆ ಕ್ರಮಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸುತ್ತದೆ. ಬಡತನ ಕಡಿಮೆಗೊಳಿಸುವ ಉಪಕ್ರಮಗಳ ಯಶಸ್ಸಿನ ಮೌಲ್ಯಮಾಪನಕ್ಕೆ ಮನೆಯ ಬಳಕೆಯ ಮೇಲಿನ ಸಮೀಕ್ಷೆಯ […]
ಭಾರತ್ ರಾಷ್ಟ್ರ ಸಮಿತಿ ಶಾಸಕಿ ಲಾಸ್ಯ ನಂದಿತಾ ಅಫಘಾತದಲ್ಲಿ ನಿಧನ

ನವದೆಹಲಿ: ಭಾರತ್ ರಾಷ್ಟ್ರ ಸಮಿತಿ ಶಾಸಕಿ ಲಾಸ್ಯ ನಂದಿತಾ ಹೈದರಾಬಾದ್‌ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೊದಲ ಬಾರಿಗೆ ಶಾಸಕಿಯಾಗಿದ್ದ 37 ವರ್ಷದ ಅವರು ತಮ್ಮ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಲಾಸ್ಯ ನಂದಿತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸಿಲುಕಿರುವ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ರಾಜಕೀಯ ಕ್ಷೇತ್ರದ ಪ್ರಮುಖ […]
ಬಾಹ್ಯಾಕಾಶ ಕ್ಷೇತ್ರದಲ್ಲಿ 100% FDI ಗೆ ಅನುಮತಿ: ಮೋದಿ ಕ್ಯಾಬಿನೆಟ್ ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇದರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಗೆ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ. “ತಿದ್ದುಪಡಿಗೊಂಡ ಎಫ್‌ಡಿಐ ನೀತಿಯ ಅಡಿಯಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ 100% ಎಫ್‌ಡಿಐ ಅನ್ನು ಅನುಮತಿಸಲಾಗಿದೆ. ತಿದ್ದುಪಡಿ ನೀತಿಯಡಿಯಲ್ಲಿ ಉದಾರೀಕರಣಗೊಂಡ ಪ್ರವೇಶ ಮಾರ್ಗಗಳು ಬಾಹ್ಯಾಕಾಶದಲ್ಲಿ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿವೆ” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. […]
ಕಬ್ಬಿನ FRP ಕ್ವಿಂಟಲ್‌ಗೆ 315 ರಿಂದ 340 ಹೆಚ್ಚಿಸಿದ ಕೇಂದ್ರ ಸರ್ಕಾರ: 5 ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರಿಗೆ ಪ್ರಯೋಜನ

ನವದೆಹಲಿ: ಫೆಬ್ರವರಿ 21 ರಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2024-25 (ಅಕ್ಟೋಬರ್-ಸೆಪ್ಟೆಂಬರ್) ಹಂಗಾಮಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಕ್ವಿಂಟಲ್‌ಗೆ 315 ರಿಂದ 340 ರೂ.ಗೆ ಹೆಚ್ಚಿಸಲು ಅನುಮೋದಿಸಿತು. ಕಬ್ಬಿನ ಎಫ್‌ಆರ್‌ಪಿಯಲ್ಲಿ ಪ್ರತಿ ಕ್ವಿಂಟಲ್‌ಗೆ ರೂ 25 ಹೆಚ್ಚಳವು ಕಳೆದ ವರ್ಷ ಘೋಷಿಸಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ವಿಶ್ವದಲ್ಲಿಯೇ ಕಬ್ಬಿಗೆ ಭಾರತ ಅತಿ ಹೆಚ್ಚು ಬೆಲೆ ನೀಡುತ್ತಿದೆ. ಈ ವರ್ಷವೂ ಮೋದಿ ಸರಕಾರ ಶೇ.8ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಇದು ರೈತರ ಹಿತಾಸಕ್ತಿಯಾಗಿದೆ ಎಂದು […]
ರಾಷ್ಟ್ರೀಯ ಕಾಂಗ್ರೆಸ್‌ನಿಂದ 65 ಕೋಟಿ ರೂ. ತೆರಿಗೆ ಬಾಕಿ ವಸೂಲಾತಿ ನಡೆಸಿದ ಆದಾಯ ತೆರಿಗೆ ಇಲಾಖೆ

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ(INC) 115 ಕೋಟಿ ರೂ.ಗಳ ಒಟ್ಟು ತೆರಿಗೆಯಲ್ಲಿ 65 ಕೋಟಿ ರೂ.ಗಳನ್ನು ಯಶಸ್ವಿಯಾಗಿ ವಸೂಲಿ ಮಾಡಿದೆ ಎಂದು ವರದಿಯಾಗಿದೆ. ಮಂಗಳವಾರ ಕಾಂಗ್ರೆಸ್ ಪಕ್ಷದ ಖಾತೆಗಳಿಗೆ ಇಲಾಖೆ ಸ್ವಾಧೀನತೆ ಹೇರಿದ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯಿಂದ ವಸೂಲಾತಿ ನಡೆದಿದೆ. ಸ್ವಾಧೀನತೆಯು ಕಾನೂನು ಹಕ್ಕು ಅಥವಾ ಸ್ವತ್ತುಗಳ ವಿರುದ್ಧದ ಹಕ್ಕಾಗಿದ್ದು ಸಾಮಾನ್ಯವಾಗಿ ಖಾತೆಯಲ್ಲಿನ ಶುಲ್ಕಗಳು ಅಥವಾ ಸಾಲಗಳ ಮರುಪಡೆಯುವಿಕೆಗೆ ಅನ್ವಯಿಸುತ್ತದೆ. ಕಾಂಗ್ರೆಸ್ ಪಕ್ಷದ ಖಾತೆಯಲ್ಲಿ 115 ಕೋಟಿ ರೂಗಳ ಸ್ವಾದೀನತೆಗಾಗಿ ಆದಾಯ ತೆರಿಗೆ […]