ತೆರಿಗೆ ರಿಯಾಯತಿ ಮಿತಿ 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಳ: ಏಳು ಆದ್ಯತೆಗಳನ್ನು ಹೊಂದಿರುವ ಸಪ್ತರ್ಷಿ ಬಜೆಟ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ತಮ್ಮ ಐದನೇ ಬಜೆಟ್ ಭಾಷಣವನ್ನು ಮಂಡಿಸಿದರು. ಸಚಿವೆಯು ಇದನ್ನು ‘ಅಮೃತ್ ಕಾಲದ ಮೊದಲ ಬಜೆಟ್’ ಮತ್ತು ಭಾರತ @ 100 ರ ನೀಲನಕ್ಷೆ ಎಂದು ಕರೆಯುತ್ತಾ, ಬಜೆಟ್ ಏಳು ಆದ್ಯತೆಗಳನ್ನು ಹೊಂದಿರುತ್ತದೆ ಹಾಗಾಗಿ ಇದು ‘ಸಪ್ತರ್ಷಿ’ ಬಜೆಟ್ ಎಂದು ಅವರು ಹೇಳಿದರು. ಬಜೆಟ್ ಪ್ರಮುಖ ಅಂಶಗಳು ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಸರ್ಕಾರ ಹೆಚ್ಚಿಸಿದೆ. ಹೊಸ ತೆರಿಗೆ […]
ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ಸ್ ಇನ್ನು ಮುಂದು ‘ಅಮೃತ ಉದ್ಯಾನ’: ಮರುನಾಮಕರಣಕ್ಕೆ ಮುರ್ಮು ಅಸ್ತು

ಹೊಸದಿಲ್ಲಿ: “ಆಜಾದಿ ಕಾ ಅಮೃತ್ ಮಹೋತ್ಸವ್” ಆಚರಣೆಯ ಅಂಗವಾಗಿ ರಾಷ್ಟ್ರಪತಿಗಳ ಅಧಿಕೃತ ನಿವಾಸ, ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನಗಳಿಗೆ “ಅಮೃತ ಉದ್ಯಾನ” ಎಂದು ಮರುನಾಮಕರಣ ಮಾಡಲಾಗಿದೆ. ಇದುವರೆಗೂ ಇಲ್ಲಿ ತೂಗುಹಾಕಲಾಗಿದ್ದ “ಮೊಘಲ್ ಗಾರ್ಡನ್ಸ್” ಎಂಬ ಹಳೆಯ ರಸ್ತೆ ಫಲಕವನ್ನು ತೆಗೆದು ಹಾಕಲಾಗಿದೆ. ಸ್ವಾತಂತ್ರ್ಯದ 75ನೇ ವರ್ಷವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸುವ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ ಅಮೃತ್ ಉದ್ಯಾನ್ ಎಂದು ಸಾಮಾನ್ಯ ಹೆಸರನ್ನು ನೀಡಿದ್ದಾರೆ ಎಂದು ಅಧ್ಯಕ್ಷರ ಉಪ ಪತ್ರಿಕಾ ಕಾರ್ಯದರ್ಶಿ […]
ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವಕ್ಕೆ ಮತ್ತೊಮ್ಮೆ ಬಹುಮತ

ನವದೆಹಲಿ: ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆಯು ಮೂಡ್ ಆಫ್ ದಿ ನೇಷನ್ ಸರ್ವೆ ನಡೆಸಿದೆ. ಅದರಂತೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆಯೇನಾದರೂ ನಡೆದರೆ 67% ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರಕ್ಕೆ ಬಹುಮತ ನೀಡಲಿದ್ದಾರೆ ಎಂದು ಸರ್ವೆ ತಿಳಿಸಿದೆ. ಸರ್ವೆಯಲ್ಲಿ ಬಿಜೆಪಿಗೆ- 284, ಕಾಂಗ್ರೆಸ್ ಗೆ- 68, ಇತರರಿಗೆ- 191 ಸ್ಥಾನಗಳು ಲಭಿಸಿವೆ. ಉತ್ತಮ ಪ್ರಧಾನಿ ನರೇಂದ್ರ ಮೋದಿ: 47% ಅಟಲ್ ಬಿಹಾರಿ ವಾಜಪೇಯಿ: 16% ಇಂದಿರಾ ಗಾಂಧಿ: 12% ಮನಮೋಹನ್ ಸಿಂಗ್: 08% ಕಳೆದ ಎಂಟು […]
ಹಲವು ಪ್ರಥಮಗಳಿಗೆ ಸಾಕ್ಷಿಯಾದ ಕರ್ತವ್ಯಪಥದ ಗಣರಾಜ್ಯೋತ್ಸವದ ಪಥಸಂಚಲನ

ನವದೆಹಲಿ: ಗುರುವಾರದಂದು ದೇಶವು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಹಲವಾರು ‘ಪ್ರಥಮ’ಗಳಿಗೆ ಸಾಕ್ಷಿಯಾಗಿದೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾಗರಿಕರು ಇದೇ ‘ಮೊದಲ’ ಬಾರಿಗೆ ಹಲವು ವಿಷಯಗಳನ್ನು ನೋಡಿದ್ದಾರೆ. ಇದೇ ಮೊದಲ ಬಾರಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ. ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಧ್ವಜವನ್ನು ಬಿಚ್ಚಿ, ಮೆರವಣಿಗೆ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ. ಕಳೆದ ವರ್ಷ ಕರ್ತವ್ಯ ಪಥ್ ಎಂದು ಮರುನಾಮಕರಣಗೊಂಡ ರಾಜಪಥದಲ್ಲಿ ಮೊದಲ ಬಾರಿಗೆ ಭಾರತ […]
ಆತ್ಮನಿರ್ಭರ ಭಾರತದ ಭರವಸೆಯ ಆಪರೇಟಿಂಗ್ ಸಿಸ್ಟಮ್ “ಭರೋಸ್”

ನವದೆಹಲಿ: ಭರೋಸ್(BharOS)- ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಐಐಟಿ ಮದ್ರಾಸ್ ಅಭಿವೃದ್ದಿಪಡಿಸಿದ್ದು, ಇದು ಗೂಗಲ್ ಗೆ ಪ್ರತಿಸ್ಪರ್ಧೆ ಒಡ್ಡಲಿದೆ. ಸಾಧನ ತಯಾರಕರ ಮೇಲೆ ಅನ್ಯಾಯದ ಪರಿಸ್ಥಿತಿಗಳನ್ನು ಹೇರುವ ಮೂಲಕ ಆಂಡ್ರಾಯ್ಡ್ ನಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಗೂಗಲ್ ಏಕಸ್ವಾಮ್ಯವನ್ನು ಮುರಿಯಲು ಭಾರತದ ಸ್ಪರ್ಧಾತ್ಮಕ ಆಯೋಗವು ಮುಂದಾಗಿದೆ. ಭಾರತದ ಸ್ಪರ್ಧಾತ್ಮಕ ಆಯೋಗದ ಆಂಟಿಟ್ರಸ್ಟ್ ಆದೇಶವನ್ನು ನಿರ್ಬಂಧಿಸುವ ಗೂಗಲ್ ನ ಮನವಿಯನ್ನು ಭಾರತದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದರ ಅರ್ಥವೇನೆಂದರೆ, ಟೆಕ್ ದೈತ್ಯ ಈಗ ಭಾರತದಲ್ಲಿ ಆಂಡ್ರಾಯ್ಡ್ […]