50,000 ವರ್ಷಗಳ ನಂತರ ಭೂಮಿಗೆ ಭೇಟಿ ನೀಡಿದ ಹಸಿರು ಬಣ್ಣದ ಧೂಮಕೇತು

ಕಾಮೆಟ್ C/2022 E3 (ZTF) ಅಥವಾ ಹಸಿರು ಬಣ್ಣದ ಧೂಮಕೇತುವು ರಾತ್ರಿ ಆಗಸದಲ್ಲಿ ಬುಧವಾರದಂದು ಕಂಡುಬಂದಿದೆ. ಅಮೇರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಪ್ರಕಾರ, ಧೂಮಕೇತು ಸುಮಾರು 50,000 ವರ್ಷಗಳ ನಂತರ ನಮ್ಮ ಗ್ರಹಕ್ಕೆ ಭೇಟಿ ನೀಡಿದೆ. ಪ್ರಪಂಚದಾದ್ಯಂತದ ನಕ್ಷತ್ರ ವೀಕ್ಷಕರು ಮತ್ತು ಖಗೋಳಶಾಸ್ತ್ರಜ್ಞರು ಧೂಮಕೇತುವನ್ನು ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಧೂಮಕೇತುವು ಭೂಮಿಯಿಂದ ಕೇವಲ 26 ಮಿಲಿಯನ್ ಮೈಲುಗಳಷ್ಟು (ಅಥವಾ 42 ಮಿಲಿಯನ್ ಕಿಲೋಮೀಟರ್) ದೂರದಿಂದ ಹಾದುಹೋಗಿದೆ. ಕಳೆದ ಕೆಲವು ತಿಂಗಳಿನಿಂದ ಈ ಹಸಿರು ಧೂಮಕೇತು ಆಕಾಶದಲ್ಲಿದ್ದರೂ ಬುಧವಾರದಂದು […]
ಸಂಸದರ ನಿಧಿ ಬಳಕೆಯಲ್ಲಿ ಕರ್ನಾಟಕಕ್ಕೆ 16ನೇ ಸ್ಥಾನ

ನವದೆಹಲಿ: ಬಿಜೆಪಿಯ 25 ಸೇರಿದಂತೆ 28 ಸಂಸದರನ್ನು ಹೊಂದಿರುವ ಕರ್ನಾಟಕವು, ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಲೋಕಸಭಾ ಸದಸ್ಯರಿಗೆ ಮೀಸಲಿಟ್ಟ 140 ಕೋಟಿ ರೂ.ಗಳಲ್ಲಿ 20 ಕೋಟಿ (ಶೇ. 14) ಮಾತ್ರ ಬಳಸಿಕೊಂಡಿದೆ. ನಿಧಿ ಬಳಕೆಯಲ್ಲಿ ರಾಜ್ಯ 16ನೇ ಸ್ಥಾನದಲ್ಲಿದೆ. ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬುಧವಾರ ಕೇಂದ್ರ ಬಜೆಟ್ ಮಂಡನೆಗೆ ಮುನ್ನ 2022-2023ರಲ್ಲಿ ನಿಧಿಯ ಬಳಕೆಯ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಕರ್ನಾಟಕದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಇಬ್ಬರೂ ಒಟ್ಟಾಗಿ […]
ಈ ಬಾರಿಯ ಬಜೆಟ್ ನಲ್ಲಿ ಯಾವುದು ಅಗ್ಗ? ಯಾವುದು ದುಬಾರಿ?

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರದಂದು ಬಜೆಟ್ 2023 ಅನ್ನು ಮಂಡಿಸಿದ್ದು, ಕೆಲವು ಸುಂಕಗಳು ಮತ್ತು ತೆರಿಗೆಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದಾರೆ. ಇದರ ಪರಿಣಾಮವಾಗಿ ಕೆಲವು ವಸ್ತುಗಳು ಅಗ್ಗವಾಗುತ್ತವೆ ಮತ್ತು ಕೆಲವು ದುಬಾರಿಯಾಗುತ್ತವೆ. ಅವುಗಳು ಹೀಗಿವೆ: ಚಿನ್ನದ ಗಟ್ಟಿಗಳಿಂದ ತಯಾರಿಸಿದ ವಸ್ತುಗಳಿಗೆ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ. ಅಡುಗೆಮನೆಯ ಎಲೆಕ್ಟ್ರಿಕ್ ಚಿಮಣಿ ಮೇಲಿನ ಕಸ್ಟಮ್ಸ್ ಸುಂಕವನ್ನು 7.5% ರಿಂದ 15% ಕ್ಕೆ ಹೆಚ್ಚಿಸಲಾಗಿದೆ. ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳ ತಯಾರಿಕೆಯಲ್ಲಿ ಬಳಸುವ ಬೀಜಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು […]
ಅಯೋಧ್ಯೆಗೆ ಬಂದವು ನೇಪಾಳದ ಶಾಲಿಗ್ರಾಮ ಶಿಲೆಗಳು

ಅಯೋಧ್ಯಾ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಭವ್ಯ ದೇಗುಲಕ್ಕೆ ನೇಪಾಳದಿಂದ ಬಂದ ಶಾಲಿಗ್ರಾಮ ಶಿಲೆಗಳನ್ನು ಪ್ರಧಾನ ಅರ್ಚಕ ಯೋಗಿ ಕಮಲ್ ನಾಥ್ ಜೀ ಅವರು ಧಾರ್ಮಿಕ ವಿಧಿ ಪ್ರಕಾರ ಪೂಜೆ ಸಲ್ಲಿಸಿದ ನಂತರ ದೇವಾಲಯದ ಆವರಣದಲ್ಲಿ ಮುಂದಿನ ಪ್ರಯಾಣಕ್ಕೆ ಕಳುಹಿಸಿದರು.
ಕೇಂದ್ರ ಬಜೆಟ್ 2023: ಭದ್ರಾ ಮೇಲ್ದಂಡೆಗೆ 5300 ಕೋಟಿ; ಮತ್ಸ್ಯ ಸಂಪದ ಯೋಜನೆಗೆ 6,000 ಕೋಟಿ ರೂ. ಅನುದಾನ

ನವದೆಹಲಿ: ಮಧ್ಯಕರ್ನಾಟಕಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಭದ್ರ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 5300 ಕೋಟಿ ಅನುದಾನ ನೀಡುವ ಮೂಲಕ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಕರ್ನಾಟಕದ ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಇತರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು 5300 ಕೋಟಿ ಅನುದಾನ ನೀಡಿ, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದಾರೆ. ಈ ಯೋಜನೆಯಿಂದ 5,57,022 ಎಕರೆ ಭೂ ಪ್ರದೇಶ ನೀರಾವರಿಗೆ […]