ಸೇನಾ ಟ್ರಕ್ ಮೇಲೆ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆಗೆ ಎನ್.ಐ.ಎ ಸಾಥ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಸೇನಾ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಐವರು ಯೋಧರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಸೇವಕ್ ಸಿಂಗ್, ಹವಾಲ್ದಾರ್ ಮನದೀಪ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಶಿಶ್ ಬಸ್ವಾಲ್ ಹಾಗೂ ಸಿಪಾಯಿ ಹರಕೃಷ್ಣ ಸಿಂಗ್ ಮೃತಪಟ್ಟ ಯೋಧರು. ಯೋಧರು ಸಾಗುತ್ತಿದ್ದ ಟ್ರಕ್‌ಗೆ […]
ರಾಮ ಮಂದಿರದಲ್ಲಿ ಬಿಲ್ಲು ಬಾಣದಿಂದ ಶಸ್ತ್ರಸಜ್ಜಿತ ಬಾಲರಾಮ: ಅರುಣ್ ಯೋಗಿರಾಜ್ ಹೆಗಲಿಗೆ ವಿಗ್ರಹ ನಿರ್ಮಾಣ ಕಾರ್ಯ

ಅಯೋಧ್ಯಾ: ರಾಮಮಂದಿರದ ನಿರ್ಮಾಣದ 60 ಪ್ರತಿಶತದಷ್ಟು ಪೂರ್ಣಗೊಂಡಿದ್ದು 2024 ರಲ್ಲಿ ಜನವರಿಯಲ್ಲಿ ರಾಮನು ದೇವಾಲಯದ ಮೂಲ ಗರ್ಭಗುಡಿಯನ್ನು ಸೇರಲಿದ್ದಾನೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಲಿರುವ ಬಿಲ್ಲು ಬಾಣದಿಂದ ಶಸ್ತ್ರಸಜ್ಜಿತವಾದ ಐದು ವರ್ಷದ ಬಾಲರಾಮನ ವಿಗ್ರಹವು ಗರ್ಭಗುಡಿಯಲ್ಲಿ ಸ್ಥಳವನ್ನು ಪಡೆಯಲಿದೆ ಎಂದು ಅಯೋಧ್ಯೆಯ ವರದಿಗಳು ತಿಳಿಸಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆಯ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನಿನ್ನೆ ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರುಣ್ […]
ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ: ಕೆಳನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸೂರತ್ ಸೆಷನ್ಸ್ ನ್ಯಾಯಾಲಯ

ಸೂರತ್: 2019ರ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ಮತ್ತು ಅಮಾನತು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 13 ರಂದು ಎರಡೂ ಕಡೆಯ ವಾದವನ್ನು ಆಲಿಸಿತ್ತು ಮತ್ತು ತೀರ್ಪನ್ನು ಏಪ್ರಿಲ್ 20 ಕ್ಕೆ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯವು ರಾಹುಲ್ ಗಾಂಧಿಯ ದೋಷಾರೋಪಣೆಯನ್ನು ತಡೆಹಿಡಿದಿದ್ದರೆ ಅಥವಾ ಅಮಾನತುಗೊಳಿಸಿದ್ದರೆ, ಕಾಂಗ್ರೆಸ್ ನಾಯಕ ಸಂಸತ್ತಿಗೆ ಮರುಪ್ರವೇಶಿಸಬಹುದಿತ್ತು. ಕಾನೂನಿನಡಿಯಲ್ಲಿ ಇನ್ನೂ […]
ಇಂದು 20 ಏಪ್ರಿಲ್ 2023ರ ಮೊದಲ ಸೂರ್ಯ ಗ್ರಹಣ- ಇದು ಭಾರತದಲ್ಲಿ ಗೋಚರಿಸುತ್ತದೆಯೇ?

ಬೆಂಗಳೂರು: ಈ ವರ್ಷದ ಮೊದಲ ಸೂರ್ಯ ಗ್ರಹಣ ಇಂದು (ಏಪ್ರಿಲ್ 20) ಸಂಭವಿಸಲಿದೆ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರನ ಆಗಮನದ ಹಿನ್ನೆಲೆ ಭೂಮಿ ಮೇಲೆ ಚಂದ್ರನ ನೆರಳು ಹಾದುಹೋಗುವುದರಿಂದ ಉಂಗುರ ಆಕಾರ ಏರ್ಪಡಲಿದೆ. ಆದ ಕಾರಣ ಇದನ್ನು ಬೆಂಕಿಯ ಉಂಗುರ ಅಥವಾ ಹೈಬ್ರಿಡ್ ಸೂರ್ಯಗ್ರಹಣ ಎಂದೂ ಕರೆಯಲಾಗುತ್ತದೆ. ಅಪರೂಪದ ಹೈಬ್ರಿಡ್ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ದಕ್ಷಿಣ ಫೆಸಿಫಿಕ್‌ನಲ್ಲಿ ಗ್ರಹಣ ಗೋಚರಿಸಲಿದೆ. ಚಂದ್ರನ ನೆರಳು ಪಶ್ಚಿಮ ಆಸ್ಟ್ರೇ ಲಿಯಾ, ಪೂರ್ವ ತಿಮೋರ್, ಇಂಡೋನೇಷ್ಯಾ ಮೂಲಕ ಹಾದುಹೋಗಲಿದೆ.ಎಂದು ವಿಜ್ಞಾನಿಗಳು […]
142.86 ಕೋಟಿ ಜನಸಂಖ್ಯೆಯೊಂದಿಗೆ ಚೀನಾವನ್ನು ಹಿಂದಿಕ್ಕಿದ ಭಾರತ: ವಿಶ್ವಸಂಸ್ಥೆ

ಹೊಸದಿಲ್ಲಿ: ವಿಶ್ವಸಂಸ್ಥೆ ಇಂದು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಯುಎನ್ ಅಂದಾಜಿನ ಪ್ರಕಾರ, ಚೀನಾದ 142.57 ಕೋಟಿಯ ವಿರುದ್ಧ ಭಾರತದ ಜನಸಂಖ್ಯೆ 142.86 ಕೋಟಿ ತಲುಪಿದೆ ಎಂದು ಅದು ಹೇಳಿದೆ. ವಿಶ್ವಸಂಸ್ಥೆಯು 1950 ರಲ್ಲಿ ಜನಸಂಖ್ಯೆಯ ಅಂಕಿಅಂಶಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ ನಂತರ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಇದೇ ಮೊದಲು. ಚೀನಾವು ಕೆಲವು ಸಮಯದಿಂದ ಜನಸಂಖ್ಯಾ […]