ಜೆಡ್ಡಾಗೆ ತೆರಳಿತು ಭಾರತದ ಮೊದಲ ಸಂಪೂರ್ಣ ಮಹಿಳಾ ಹಜ್ ವಿಮಾನ: ಇತಿಹಾಸ ನಿರ್ಮಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್

ಕೋಝಿಕ್ಕೋಡ್: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಭಾರತದ ಮೊದಲ ಅಂತರರಾಷ್ಟ್ರೀಯ ಬಜೆಟ್ ಏರ್‌ಲೈನ್, ಭಾರತದ ಮೊದಲ ಸಂಪೂರ್ಣ ಮಹಿಳೆಯರ ಹಜ್ ವಿಮಾನವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಗುರುವಾರ ಇತಿಹಾಸ ನಿರ್ಮಿಸಿದೆ. ವಿಮಾನದಲ್ಲಿ ಮಹಿಳಾ ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯುವ ಹಜ್ ಕಮಿಟಿ ಆಫ್ ಇಂಡಿಯಾದ ಉಪಕ್ರಮಕ್ಕೆ ಪೂರಕವಾಗಿ, ಹಾರಾಟದ ಸಮಯದಲ್ಲಿ ಪ್ರತಿ ನಿರ್ಣಾಯಕ ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಿಕೊಂಡ ಎಲ್ಲಾ ಮಹಿಳಾ ಸಿಬ್ಬಂದಿಯಿಂದಾಗಿ ಈ ಗಮನಾರ್ಹ ಸಾಧನೆ ಸಾಧ್ಯವಾಗಿದೆ ಎಂದು ಡಿಡಿನ್ಯೂಸ್ ವರದಿ ಹೇಳಿದೆ. ವಿಮಾನ ಸಂಖ್ಯೆ IX 3025, ಕೋಝಿಕ್ಕೋಡ್‌ನಿಂದ […]
71ನೇ ವಿಶ್ವ ಸುಂದರಿ ಸ್ಪರ್ಧೆಯ ಆತಿಥೇಯ ಪ್ರತಿನಿಧಿಯಾಗಿ ಜಗತ್ತನ್ನು ಸ್ವಾಗತಿಸಲಿದ್ದಾರೆ ಸಿನಿಶೆಟ್ಟಿ

ನವದೆಹಲಿ: ಬರೋಬ್ಬರಿ 27 ವರ್ಷಗಳ ಬಳಿಕ 71ನೇ ವಿಶ್ವ ಸುಂದರಿ ಸ್ಪರ್ಧೆಯು ಭಾರತದಲ್ಲಿ ನಡೆಯಲಿದ್ದು, ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ವಿಜೇತೆ ಸಿನಿಶೆಟ್ಟಿ ಆತಿಥೇಯ ಪ್ರತಿನಿಧಿಯಾಗಿದ್ದು ಈ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಈ ಘಳಿಗೆಗೋಸ್ಕರ ತುಂಬಾ ಸಮಯದಿಂದ ಕಾಯುತ್ತಿದ್ದೆ, ನಾನು ಆತಿಥೇಯ ಪ್ರತಿನಿಧಿಯಾಗಿದ್ದು ಜಗತ್ತಿನ ಎಲ್ಲಾ ದೇಶಗಳನ್ನು ಭಾರತಕ್ಕೆ ಸ್ವಾಗತಿಸಲು, ಭಾರತದ ಸಂಸ್ಕೃತಿ, ಆಚಾರ ವಿಚಾರ ಹಾಗೂ ಆಹಾರದ ಪರಿಚಯವನ್ನು ಜಗತ್ತಿಗೆ ಪರಿಚಯಿಸಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ಸುದ್ದಿಸಂಸ್ಥೆ ಎ.ಎನ್.ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. […]
ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ

ಸಿಂಗಾಪುರ: ಇದೇ ಸೆಪ್ಟೆಂಬರ್ 13ರೊಳಗೆ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸಿಂಗಾಪುರದ ಹಿರಿಯ ಸಚಿವರಾಗಿರುವ ಥರ್ಮನ್ ಷಣ್ಮುಗರತ್ನಂ ಅವರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇವರು ಯಾರು? ಹಿನ್ನೆಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಭಾರತೀಯ ಮೂಲದ ಹಿರಿಯ ಸಚಿವ ಥರ್ಮನ್ ಷಣ್ಮುಗರತ್ನಂ ಅವರು ತಮ್ಮ ಇಂಗಿತವನ್ನು ಗುರುವಾರ ಪ್ರಕಟಿಸಿದ್ದಾರೆ. 22 ವರ್ಷಗಳ ನಂತರ ಸಕ್ರಿಯ ರಾಜಕೀಯದಿಂದ ದೂರ ಸರಿದು ಈ ವರ್ಷ ಅಧ್ಯಕೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ. 66 ವರ್ಷದ ಥರ್ಮನ್, […]
ಈ ಬಾರಿಯೂ ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್.ಬಿ.ಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಗುರುವಾರದಂದು ತನ್ನ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ರೆಪೊ ದರವನ್ನು ಕಳೆದ ಬಾರಿಯ ಶೇಕಡಾ 6.5ರಷ್ಟು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಮುಂಬೈನ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದರು. ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ರೆಪೋದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಸ್ಥಿರತೆಯನ್ನು ಮೊದಲ ಆದ್ಯತೆಯಾಗಿರಿಸಿಕೊಂಡು ಆರ್ ಬಿ ಐ ನೀತಿ ರೂಪಿಸಿದೆ. ದೇಶೀಯ ಆರ್ಥಿಕತೆಯ ಮೂಲಭೂತ […]
ಮಾರುಕಟ್ಟೆಗೆ ಬಂತು 5 ಬಾಗಿಲಿನ ಮಾರುತಿ ಸುಜುಕಿ ಜಿಮ್ನಿ: ದರ, ವಿಶೇಷತೆ ಹೀಗಿದೆ ನೋಡಿ

ಕಳೆದ ಕೆಲವು ತಿಂಗಳಿಂದ ಕಾರುಪ್ರಿಯರಲ್ಲಿ ಸಾಕಷ್ಟು ರೋಮಾಂಚನ, ನಿರೀಕ್ಷೆ ಹುಟ್ಟಿಸಿದ್ದ ಮಾರುತಿ ಸುಜುಕಿ ಜಿಮ್ನಿ ಕಾರು ಕೊನೆಗೂ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಮ್ನಿ ಎಸ್ಯುವಿ ಕಾರು ಬಿಡುಗಡೆಯಾಗಿದೆ. ಗ್ರಾಹಕರು ಆರ್ಡರ್‌ಗೆ ಮುಗಿಬೀಳುತ್ತಿದ್ದಾರೆ. ಅಂಥದ್ದೇನಿದೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಹೊಚ್ಚ ಹೊಸ ಅತ್ಯಾಧುನಿಕ ವಾಹನದ ಬೆಲೆಗಳನ್ನು ಪ್ರಕಟಿಸಲಾಗಿದೆ. ಈಗಾಗಲೇ ಇದರ ಬುಕ್ಕಿಂಗ್ ಸಹ ಆರಂಭವಾಗಿದೆ. ಈವರೆಗೆ 30 ಸಾವಿರ ಆರ್ಡರ್‌ಗಳು ಬಂದಿವೆ ಎಂದು ತಿಳಿದುಬಂದಿದೆ. ಜಿಮ್ನಿ ಬೆಲೆ 12.74 ಲಕ್ಷ ರೂಪಾಯಿಯಿಂದ ಶುರುವಾಗಿ 15.05 […]