ಮೇ ತಿಂಗಳಲ್ಲಿ ಶೇ 2.3ರಷ್ಟು ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಚೆನ್ನೈ : ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್ಎ ಪ್ರಕಾರ, ಮೇ 2023 ರಲ್ಲಿದ್ದಂತೆ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ ಸುಮಾರು 131.8 ಲಕ್ಷ ಎಂದು ಅಂದಾಜಿಸಲಾಗಿದೆ. ಏಪ್ರಿಲ್ 2023 ರಲ್ಲಿ ಇದ್ದ ಸುಮಾರು 128.9 ಲಕ್ಷಕ್ಕೆ ಹೋಲಿಸಿದರೆ ಸುಮಾರು 2.3 ಶೇಕಡಾ ಹೆಚ್ಚಾಗಿದೆ.ಪ್ರಯಾಣಿಕರ ಸಂಖ್ಯೆಯ ವಿಷಯದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನಯಾನ ವಲಯ ಬೆಳವಣಿಗೆ ಸಾಧಿಸಿದೆ ಎಂದು (ICRA study) ಐಸಿಆರ್ಎ ವರದಿ ಹೇಳಿದೆ.ಮೇ 2023 ರಲ್ಲಿದ್ದಂತೆ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ ಸುಮಾರು 131.8 […]
ಭೋಪಾಲ್‌ನಲ್ಲಿ ಸರ್ಕಾರಿ ಕಚೇರಿಗಳಿರುವ ಬಹುಮಹಡಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

ಭೋಪಾಲ್ (ಮಧ್ಯಪ್ರದೇಶ): ಸರ್ಕಾರಿ ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಇಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ.ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಸಾತ್ಪುರ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಬೆಂಕಿಯು ಕ್ಷಣಾರ್ಧದಲ್ಲಿ ಬಹುದೊಡ್ಡ ರೂಪ ಪಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಆರು ವಾಹನಗಳ ಸಮೇತ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿನ ಆಡಳಿತ ಕಟ್ಟಡವಾದ ಸಾತ್ಪುರ ಭವನದ ಬುಡಕಟ್ಟು ಕಲ್ಯಾಣ […]
ಬಿಪರ್‌ಜೋಯ್ ಚಂಡಮಾರುತದ ಪರಿಸ್ಥಿತಿ ಕುರಿತು ಸಭೆ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಬಿಪರ್‌ಜೋಯ್ ಚಂಡಮಾರುತವು ಗುರುವಾರದ ವೇಳೆಗೆ ತೀವ್ರ ಸ್ವರೂಪ ಪಡೆದು ಗುಜರಾತ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಬಿಪರ್‌ಜೋಯ್ ಚಂಡಮಾರುತದ ಪರಿಸ್ಥಿತಿ ಮತ್ತು ಸನ್ನದ್ಧತೆಯ ಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಭೆ ನಡೆಸಿ ಅವಲೋಕಿಸಿದರು. ಬಿಪರ್‌ಜೋಯ್ ಚಂಡಮಾರುತದ ಪರಿಸ್ಥಿತಿ ಮತ್ತು ಸನ್ನದ್ಧತೆಯ ಸ್ಥಿತಿ ಕುರಿತು ಪ್ರಧಾನಿ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಮತ್ತೊಂದೆಡೆ, ಗುಜರಾತ್‌ನಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸುಮಾರು 1,300 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯ […]
ಬಿಪರ್‌ಜೋಯ್ ಚಂಡಮಾರುತ: ಮುಂಬೈ ವಿಮಾನ ಸಂಚಾರ ಅಸ್ತವ್ಯಸ್ತ; ಮುಂದಿನ ಪಯಣ ಗುಜರಾತ್ ನತ್ತ

ಮುಂಬೈ: ಬಿಪರ್‌ಜೋಯ್ ಚಂಡಮಾರುತ ಅರಬ್ಬಿ ಸಮುದ್ರದ ಮೇಲೆ ಬೀಸುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ನಿನ್ನೆ ಸಂಜೆ ಮುಂಬೈನಲ್ಲಿ ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದೆ. ಬಿಪರ್‌ಜೋಯ್ ಚಂಡಮಾರುತದ ತೀವ್ರತೆಯು “ಅತ್ಯಂತ ತೀವ್ರವಾದ ಚಂಡಮಾರುತ” ವಾಗಿ ಪರಿವರ್ತನೆ ಗೊಂಡಿದ್ದು, ಮುಂಬೈನಲ್ಲಿ ಭಾರೀ ಮಳೆ ಮತ್ತು ಗಾಳಿಯು ರಭಸದಿಂದ ಅಪ್ಪಳಿಸಿದೆ. ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ತಮ್ಮ ವಿಮಾನಗಳಿಗಾಗಿ ಕಾಯುತ್ತಿದ್ದರಿಂದ ಮುಂಬೈ ವಿಮಾನ ನಿಲ್ದಾಣವು ಆತಂಕ ಮತ್ತು ಅವ್ಯವಸ್ಥೆಯ ದೃಶ್ಯಗಳಿಗೆ ಸಾಕ್ಷಿಯಾಯಿತು. ಹವಾಮಾನದ ಕಾರಣದಿಂದ ಹಲವಾರು ವಿಮಾನಗಳು ವಿಳಂಬಗೊಂಡು ಕೆಲವು ರದ್ದುಗೊಂಡವು. ಮತ್ತೆ ಕೆಲವು ಲ್ಯಾಂಡಿಗ್ […]
ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್: ದಕ್ಷಿಣ ಕೊರಿಯಾವನ್ನು ಸೋಲಿಸಿ ಕಪ್ ಗೆದ್ದ ಭಾರತ

ಟೋಕಿಯೋ: ಜಪಾನ್‌ನಲ್ಲಿ ನಡೆದ 2023 ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ನಲ್ಲಿ ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸಿ ಭಾರತವು ಇದೇ ಮೊದಲ ಬಾರಿಗೆ ಕಪ್ ಗೆದ್ದುಕೊಂಡಿದೆ. ಜಪಾನಿನ ಗಿಫು ಪ್ರಾಂತ್ಯದ ಕಕಮಿಗಹರಾದಲ್ಲಿ ನಡೆದ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ -2023 ರಲ್ಲಿ ತನ್ನ ಅಮೋಘ ಪ್ರದರ್ಶನವನ್ನು ತೋರಿದ ಭಾರತೀಯ ಕ್ರೀಡಾಳುಗಳು ಕಪ್ ಗೆದ್ದಿದ್ದಾರೆ. ಇದಕ್ಕಾಗಿ ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 […]