ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾದ ಟೈಟಾನಿಕ್ ನೋಡಲು ತೆರಳಿದ್ದ ಐವರು ನಾಪತ್ತೆ.. ಭರದಿಂದ ಸಾಗಿದ ರಕ್ಷಣಾ ಕಾರ್ಯ

ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಮುಳುಗಿದ ಸ್ಥಳವನ್ನು ಪತ್ತೆ ಮಾಡಲಾಗಿದೆ. ಅಲ್ಲಿಂದ ಮತ್ತೊಮ್ಮೆ ದೊಡ್ಡ ಅಪಘಾತದ ಸುದ್ದಿ ಬರುತ್ತಿದೆ. ವಾಸ್ತವವಾಗಿ, ಟೈಟಾನಿಕ್ ಹಡಗಿನ ಅವಶೇಷಗಳಿಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ.ಬೋಸ್ಟನ್, ಅಮೆರಿಕ: ಟೈಟಾನಿಕ್ ತನ್ನ ಮೊದಲ ಸಮುದ್ರಯಾನದಲ್ಲಿ ಅಪಘಾತಕ್ಕೀಡಾಗಿ ಮುಳುಗಿ ಹೋದ ಬೃಹತ್ ಹಡಗು. ‘ಮುಳುಗಲಾರದ ಹಡಗು’ ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್‌ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು ಈ ಬೃಹತ್ ಹಡಗು ಮುಳುಗಿ ವರ್ಷಗಳೇ ಕಳೆದರೂ […]
ವಿಶ್ವದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿದೆ ಭಾರತ: ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿಕೆ

ಹೈದರಾಬಾದ್ : ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿಕೆ ಯಾವುದೇ ದೇಶದ ವಿರುದ್ಧ ಅನ್ಯಾಯ ಮಾಡದೇ, ಭಾರತವು ವಿಶ್ವದಲ್ಲಿ ತನಗೆ ಸಿಗಬೇಕಾದ ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಭಾರತವು ಯಾವುದೇ ದೇಶದ ಮೇಲೆ ದಬ್ಬಾಳಿಕೆ ಎಸಗುತ್ತಿಲ್ಲ. ಆದರೆ ವಿಶ್ವದಲ್ಲಿ ತನಗೆ ಸಿಗಬೇಕಾದ ಸರಿಯಾದ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾ ಸಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತವು ಯಾವುದೇ ದೇಶದ ಮೇಲೆ ದಬ್ಬಾಳಿಕೆ ಎಸಗುವ ಮನಸ್ಥಿತಿ ಹೊಂದಿಲ್ಲ. ಭಾರತವು ವಿಶ್ವದಲ್ಲಿ ತನಗೆ ಸಿಗಬೇಕಾದ ಸೂಕ್ತ ಸ್ಥಾನಮಾನವನ್ನು […]
ಐಪಿಎಸ್ ಅಧಿಕಾರಿಯೊಂದಿಗೆ ಸಪ್ತಪದಿ ತುಳಿದ ಟೀನಾ ದಾಬಿ ಸಹೋದರಿಯರ ಫೋಟೋ ವೈರಲ್

ಜೈಪುರ(ರಾಜಸ್ಥಾನ): ಪ್ರೀತಿಸಿ ವಿವಾಹವಾದ ಜೋಡಿ: ಐಎಎಸ್ ರಿಯಾ ದಾಬಿ ಮತ್ತುಐಪಿಎಸ್ ಮನೀಶ್ ಕುಮಾರ್ ಇಬ್ಬರೂ ಯುಪಿಎಸ್ಸಿ-2021 ಬ್ಯಾಚ್‌ಗೆ ಸೇರಿದವರು. ಇಬ್ಬರ ನಡುವೆ ಮೊದಲು ಸ್ನೇಹವಿತ್ತು. ಬಳಿಕ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಇಬ್ಬರೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಸೋಷಿಯಲ್ ಮೀಡಿಯಾದಲ್ಲಿ ಜನಮನ ಸೆಳೆಯುತ್ತಿರುವ ಜೈಸಲ್ಮೇರ್ ಜಿಲ್ಲಾಧಿಕಾರಿ ಟೀನಾ ದಾಬಿ ಅವರ ತಂಗಿ ಐಎಎಸ್ ರಿಯಾ ದಾಬಿ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಮನೀಷ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ.ಕೇಂದ್ರ ಗೃಹ ಸಚಿವಾಲಯ […]
ಎಸ್ಬಿಐ ವರದಿ: 2000 ರೂ. ನೋಟು ಹಿಂಪಡೆಯುವಿಕೆಯಿಂದ ಬ್ಯಾಂಕ್ಗಳಲ್ಲಿ ಠೇವಣಿ ಹೆಚ್ಚಳ

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕರೆನ್ಸಿ ನಿರ್ವಹಣೆಯ ಭಾಗವಾಗಿ ಚಲಾವಣೆಯಲ್ಲಿರುವ 2000 ರೂಪಾಯಿಗಳ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ್ದರೂ, ಈ ಕ್ರಮವು ವಿವಿಧ ಸ್ಥೂಲ ಆರ್ಥಿಕ ನಿಯತಾಂಕಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. 2000 ರೂಪಾಯಿ ಮುಖಬೆಲೆಯ ಕರೆನ್ಸಿಗಳನ್ನು ಹಿಂಪಡೆಯಲು ನಿರ್ಧರಿಸಿದ ನಂತರ ಬ್ಯಾಂಕ್ಗಳಲ್ಲಿನ ಠೇವಣಿ ಮೊತ್ತದಲ್ಲಿ ಹೆಚ್ಚಳವಾಗಿದೆ ಎಂದು ಎಸ್ಬಿಐ ವರದಿ ತಿಳಿಸಿದೆ. 2000 ರೂ ಮುಖಬೆಲೆಯ ನೋಟುಗಳನ್ನು ನವೆಂಬರ್ 2016 ರಲ್ಲಿ RBI ಕಾಯಿದೆ, 1934 ರ ಸೆಕ್ಷನ್ 24 (1) ಅಡಿ ಪರಿಚಯಿಸಲಾಯಿತು. ಆ […]
ಭಾರತೀಯ ಸೇನೆಯನ್ನು ಸೇರಿಕೊಂಡ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ತಯಾರಿಸಿದ ಪ್ರಪ್ರಥಮ ಶಸ್ತ್ರಸಜ್ಜಿತ ಲಘು ವಿಶೇಷ ವಾಹನ: ಆರ್ಮಡೋ

ಹೊಸದಿಲ್ಲಿ: ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ (MDS) ಭಾರತೀಯ ಸಶಸ್ತ್ರ ಪಡೆಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಭಾರತದ ಪ್ರಪ್ರಥಮ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್ (ALSV) ‘ಆರ್ಮಡೋ’ ವಿತರಣೆಯನ್ನು ಪ್ರಾರಂಭಿಸಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. MDS ಮಹೀಂದ್ರಾ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹೊಸ ವಾಹನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ತಯಾರಿಸಲಾಗಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆರ್ಮಡೊ ಒಂದು ಲಘು ಶಸ್ತ್ರಸಜ್ಜಿತ ವಿಶೇಷ ವಾಹನವಾಗಿದ್ದು, ರಕ್ಷಣಾ ಪಡೆಗಳ ಬಳಕೆಗಾಗಿ ನಿರ್ಮಿಸಲಾಗಿದೆ. […]