ಮುಂದಿನ ವರ್ಷ ಏಪ್ರಿಲ್ ನಿಂದ ಹೊಸ ವಿದ್ಯುತ್ ದರ ನೀತಿ: ದಿನದ ಸಮಯ ಮತ್ತು ರಾತ್ರಿ ಸಮಯದ ವಿದ್ಯುತ್ ದರ ಪರಿಚಯಿಸಿದ ಕೇಂದ್ರ

ನವದೆಹಲಿ: ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020 ರ ತಿದ್ದುಪಡಿಯ ಮೂಲಕ ಭಾರತ ಸರ್ಕಾರವು ಚಾಲ್ತಿಯಲ್ಲಿರುವ ವಿದ್ಯುತ್ ದರ ವ್ಯವಸ್ಥೆಗೆ ಎರಡು ಬದಲಾವಣೆಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳೆಂದರೆ: ದಿನದ ಸಮಯದ (ToD) ದರ ಪರಿಚಯ ಮತ್ತು ಸ್ಮಾರ್ಟ್ ಮೀಟರಿಂಗ್ ನಿಬಂಧನೆಯ ತರ್ಕಬದ್ಧಗೊಳಿಸುವಿಕೆ. ದಿನದ ಸಮಯದ (ToD) ದರ ಎಂದರೇನು? ದಿನದ ದರವು ಹಗಲು ಮತ್ತು ರಾತ್ರಿಯ ಸಮಯದ ವಿದ್ಯುತ್ ಬಳಕೆಗೆ ವಿಭಿನ್ನ ಬೆಲೆಗಳನ್ನು ಹೊಂದಿದೆ. ದಿನದ ಎಲ್ಲಾ ಸಮಯದಲ್ಲೂ ಒಂದೇ ದರದಲ್ಲಿ ವಿದ್ಯುಚ್ಛಕ್ತಿಗೆ ಶುಲ್ಕ ವಿಧಿಸುವುದಕ್ಕಿಂತ ಹೆಚ್ಚಾಗಿ, […]

ಭಾರತೀಯ ಷೇರು ಮಾರುಕಟ್ಟೆ ಏರಿಕೆಯೊಂದಿಗೆ ವಹಿವಾಟು ಆರಂಭ

ನವದೆಹಲಿ : ಭಾರತೀಯ ಷೇರು ಸೂಚ್ಯಂಕಗಳು ಹಿಂದಿನ ವಹಿವಾಟು ಅವಧಿಯಲ್ಲಿ ಇಳಿಕೆಯೊಂದಿಗೆ ಮುಕ್ತಾಯಗೊಂಡಿದ್ದವು. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇಕಡಾ 0.2 ರಿಂದ 0.3 ರಷ್ಟು ಹೆಚ್ಚಾಗಿವೆ.. ಪ್ರಸ್ತುತ ಸೆನ್ಸೆಕ್ಸ್ 8.70 ಪಾಯಿಂಟ್ ಅಥವಾ ಶೇ 0.01ರಷ್ಟು ಏರಿಕೆಯಾಗಿ 62,988.07 ಕ್ಕೆ ತಲುಪಿದೆ ಮತ್ತು ನಿಫ್ಟಿ 17.80 ಪಾಯಿಂಟ್ ಅಥವಾ ಶೇ 0.10 ರಷ್ಟು ಏರಿಕೆಯಾಗಿ 18,683.30 ಕ್ಕೆ ತಲುಪಿದೆ. ಸುಮಾರು 1714 ಷೇರುಗಳು ಏರಿಕೆಯಲ್ಲಿವೆ ಮತ್ತು 1480 ಷೇರುಗಳು ಇಳಿಕೆಯಲ್ಲಿದ್ದವು. 144 ಷೇರುಗಳ ಬೆಲೆಗಳು ಸ್ಥಿರವಾಗಿವೆ.ಆದರೆ […]

ಅಮೇರಿಕಾಗೆ ಬರುವ ವಿಶೇಷ ಆಹ್ವಾನಿತರಿಗೆ ರುಚಿ ರುಚಿ ಅಡುಗೆ ಬಡಿಸುವ ಆಲೂರು ಆನಂದ ಪೂಜಾರಿ ಎಂಬ ಹೆಮ್ಮೆಯ ಕನ್ನಡಿಗ

ವಾಷಿಂಗ್ಟನ್ ಡಿಸಿ: ಕಳೆದ ಮೂರು ದಶಕಗಳಿಂದ ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಬೈಂದೂರು ಮೂಲದ ಅನಿವಾಸಿ ಭಾರತೀಯ ಆಲೂರು ಆನಂದ್ ಪೂಜಾರಿ ಅವರು ವುಡ್‌ಲ್ಯಾಂಡ್ಸ್, ಜ್ಯುವೆಲ್ ಆಫ್ ಇಂಡಿಯಾ ಮತ್ತು ಐ.ಬಿ.ಎಚ್ ನಂತಹ ಸಂಸ್ಥೆಗಳ ಪ್ರವರ್ತಕ. ವಾಷಿಂಗ್ಟನ್ ಡಿಸಿಯಲ್ಲಿರುವ ‘ವುಡ್‌ಲ್ಯಾಂಡ್ಸ್ ರೆಸ್ಟೊರೆಂಟ್’ ಸಸ್ಯಾಹಾರಿ ರೆಸ್ಟೋರೆಂಟ್ ರುಚಿಯನ್ನು ಸವಿಯದ ಭಾರತೀಯ ವಿವಿಐಪಿಗಳು ತೀರಾ ಕಡಿಮೆ. ಪ್ರಧಾನಮಂತ್ರಿ ನರೇಂದ್ರ ಮೋದಿಯಾಗಿರಲಿ ಅಥವಾ ಇನ್ನಾವ ರಾಜತಾಂತ್ರಿಕ ಅಧಿಕಾರಿಯೇ ಆಗಿರಲಿ ಇವರೆಲ್ಲರಿಗೂ ರುಚಿರುಚಿಯಾದ ಸಸ್ಯಾಹಾರಿ ಸವಿ ಭೋಜನ ತಯಾರಾಗುವುದು ಆನಂದ ಪೂಜಾರಿಯವರ ಹೋಟಲಿನಲ್ಲಿಯೆ. […]

ಪಶ್ಚಿಮ ಬಂಗಾಳ: ಎರಡು ಗೂಡ್ಸ್ ರೈಲುಗಳ ಮಧ್ಯೆ ಅಪಘಾತ; ಚಾಲಕರು ಪ್ರಾಣಾಪಾಯದಿಂದ ಪಾರು

ಕೋಲ್ಕತಾ: ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಪಶ್ಚಿಮ ಬಂಗಾಳದ ಬಂಕುರಾ ಬಳಿ ಎರಡು ರೈಲು ಇಂಜಿನ್‌ಗಳ ನಡುವೆ ಡಿಕ್ಕಿ ಸಂಭವಿಸಿದ ನಂತರ ಎರಡು ಸರಕು ರೈಲುಗಳ ಹಲವಾರು ಬೋಗಿಗಳು ಹಳಿ ತಪ್ಪಿದವು. ಒಂದು ಗೂಡ್ಸ್ ರೈಲು ಇನ್ನೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿ ತಪ್ಪಿವೆ. ಓಂಡಾ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಗೂಡ್ಸ್ ರೈಲಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮಂಗಳೂರು ಪಿಲಿಕುಳ ಸಂತಾನೋತ್ಪತ್ತಿಯಲ್ಲಿ ದೇಶದಲ್ಲಿಯೇ ಟಾಪ್ 1 ಮೃಗಾಲಯ

ಮಂಗಳೂರು (ದಕ್ಷಿಣ ಕನ್ನಡ): ದೇಶದ ಅತೀ ದೊಡ್ಡ 17 ಮೃಗಾಲಯಗಳ ಪೈಕಿ ಒಂದಾಗಿರುವ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಗೌರವಕ್ಕೆ ಪಾತ್ರವಾಗಿದೆ. ಅದರಲ್ಲೂ ದೇಶದಲ್ಲಿ ಅಪರೂಪದ ಹುಲಿ, ಕಾಡು, ಶ್ವಾನ, ಕಾಳಿಂಗ, ರಿಯಾ ಜಾತಿಯ ಹಕ್ಕಿಯ ಸಂತಾನಾಭಿವೃದ್ಧಿಯಲ್ಲಿ ಪಿಲಿಕುಳ ಮೃಗಾಲಯ ಹೆಚ್ಚು ಪ್ರಸಿದ್ಧಿ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಗೌರವಕ್ಕೆ ಪಾತ್ರವಾಗಿದೆ. ರಾಜ್ಯ ಸರಕಾರದ […]