ಕೆನಡಾಕ್ಕೆ ಹಾರಲಿವೆ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಬೀದಿ ನಾಯಿಗಳು

ಅಮೃತಸರ (ಪಂಜಾಬ್​): ಇತ್ತೀಚೆಗೆ ದೇಶದ ಹಲವೆಡೆ ಬೀದಿ ನಾಯಿಗಳ ಹಾವಳಿ ಬಗ್ಗೆ ನಿರಂತರವಾಗಿ ಸುದ್ದಿಗಳು ಆಗುತ್ತಿದೆ.ಮಕ್ಕಳು ಮೇಲೆ ದಾಳಿ ಮಾಡುವುದು ಹಾಗೂ ಕಚ್ಚಿ ಗಾಯಗೊಳಿಸಿ ಸಾಯಿಸಿದ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆ ಪಂಜಾಬ್​ನ ಅಮೃತಸರದಿಂದ ಎರಡು ಬೀದಿ ನಾಯಿಗಳು ಕೆನಾಡಕ್ಕೆ ವಿಮಾನದಲ್ಲಿ ಹಾರಲು ಸಜ್ಜಾಗಿವೆ.! ಪ್ರಾಣಿ ಕಲ್ಯಾಣ ಮತ್ತು ಆರೈಕೆ ಸೊಸೈಟಿ ಎಂಬ ಮೂಲಕ ಅಮೃತಸರದ ಎರಡು ಬೀದಿ ಬೀದಿಗಳನ್ನು ಕೆನಡಾ ಮಹಿಳೆಯೊಬ್ಬರು ದತ್ತು ಪಡೆದಿದ್ದಾರೆ. ಈ ಶ್ವಾನಗಳು ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿ ಕೆನಡಾ […]

ಮೂವರು ರೈಲ್ವೆ ಸಿಬ್ಬಂದಿಗಳ ಬಂಧನ: ಸಿಬಿಐ

ನವದೆಹಲಿ : ಆರೋಪಿ ರೈಲ್ವೇ ನೌಕರರು ಸಾಕ್ಷ್ಯಾಧಾರಗಳ ತಿರುಚುವಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ಬಾಲಸೋರ್ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿದೆ ಬಂಧಿತ ಆರೋಪಿಗಳನ್ನು ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆರೋಪಿಗಳನ್ನು ವಿಚಾರಣೆಗಾಗಿ ತನ್ನ ಕಸ್ಟಡಿಗೆ ನೀಡುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಲಿದೆ. ರೈಲ್ವೇ ಮಂಡಳಿಯು ಅಪಘಾತದ ಬಗ್ಗೆ ಕೇಂದ್ರೀಯ ತನಿಖಾ ದಳದ ತನಿಖೆಗೆ ಶಿಫಾರಸು ಮಾಡಿದ್ದು, ಜೂನ್ 6 ರಂದು ಸಿಬಿಐ […]

ಫಲಕ್ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಭಾರಿ ಬೆಂಕಿ; 4 ಬೋಗಿಗಳು ಸಂಪೂರ್ಣ ಭಸ್ಮ

ಹೈದರಾಬಾದ್ (ತೆಲಂಗಾಣ):ಯಾದಾದ್ರಿ ಭುವನಗಿರಿ ಜಿಲ್ಲೆಯ ಪಗಿಡಿಪಲ್ಲಿ ಮತ್ತು ಬೊಮ್ಮಾಯಿಪಲ್ಲಿ ನಡುವೆ ಅವಘಡ ಸಂಭವಿಸಿತು. ಫಲಕ್ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ನಾಲ್ಕು ಬೋಗಿಗಳು ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ.ಫಲಕ್ನುಮಾ ಎಕ್ಸ್‌ಪ್ರೆಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಾಲ್ಕು ಬೋಗಿಗಳು ಸಂಪೂರ್ಣ ಸುಟ್ಟು ಹೋಗಿವೆ. ವಿಷಯ ತಿಳಿದ ತಕ್ಷಣ ರೈಲ್ವೇ ಸಿಬ್ಬಂದಿ ರೈಲು ನಿಲ್ಲಿಸಿ ಎರಡೂ ಬೋಗಿಗಳಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಪ್ರಾಣಾಪಾಯ ತಪ್ಪಿದೆ. ಅಪಾರ ಪ್ರಮಾಣದ ಬೆಂಕಿ 5 ಮತ್ತು 6ನೇ ಬೋಗಿಗೆ ಹರಡಿಕೊಂಡಿತು. ಕೂಡಲೇ […]

ಮಾನನಷ್ಟ ಮೊಕದ್ದಮೆ: ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಗಾಂಧಿನಗರ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಸಾಮಾನ್ಯ ಜೈಲು ಶಿಕ್ಷೆ ವಿಧಿಸಲಾಗಿದ್ದು, ತಮ್ಮ ದೋಷಾರೋಪಣೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್, ತೀರ್ಪಿನ ಆಪರೇಟಿವ್ ಭಾಗವನ್ನು ಗಟ್ಟಿಯಾಗಿ ಓದುವಾಗ, ಈ ಹಿಂದೆ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವು “ನ್ಯಾಯಯುತ ಮತ್ತು ಕಾನೂನುಬದ್ದವಾಗಿದೆ” ಎಂದು ಹೇಳಿದರು. ಅಂತಹ ತಡೆಗಳು ಒಂದು ಅಪವಾದ ಎಂದು ಗಮನಿಸಿದರೆ, ನ್ಯಾಯಾಲಯವು […]

ಆಗಸ್ಟ್ 31 ಕ್ಕೆ ಯಾತ್ರೆ ಮುಕ್ತಾಯ : 5 ದಿನದಲ್ಲಿ 67 ಸಾವಿರ ಯಾತ್ರಿಗಳಿಂದ ಅಮರನಾಥನ ದರ್ಶನ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜುಲೈ ಮೊದಲಿನಿಂದ ಆರಂಭವಾಗಿರುವ ಅಮರನಾಥ ಯಾತ್ರೆಯಲ್ಲಿ ಈವರೆಗೂ 67 ಸಾವಿರ ಭಕ್ತರು ಹಿಮಲಿಂಗದ ದರ್ಶನ ಮಾಡಿದ್ದಾರೆ. ಜುಲೈ 1 ರಿಂದ ಆರಂಭವಾಗಿರುವ ಹಿಂದುಗಳ ಪವಿತ್ರ ಅಮರನಾಥ ಯಾತ್ರೆಯಲ್ಲಿ ಈವರೆಗೂ 67,566 ಯಾತ್ರಾರ್ಥಿಗಳು ಅಮರನಾಥ ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಅಮರನಾಥ ದೇಗುಲ ಮಂಡಳಿ ಮಾಹಿತಿ ನೀಡಿದೆ. ಪೊಲೀಸ್, ಎಸ್‌ಡಿಆರ್‌ಎಫ್, ಸೈನ್ಯ, ಅರೆಸೇನೆ, ಆರೋಗ್ಯ, ಪಿಡಿಡಿ, ಪಿಎಚ್‌ಇ, ಯುಎಲ್‌ಬಿ, ಮಾಹಿತಿ, ಕಾರ್ಮಿಕ, ಅಗ್ನಿಶಾಮಕ ಮತ್ತು ತುರ್ತು, ಶಿಕ್ಷಣ ಮತ್ತು ಪಶುಸಂಗೋಪನೆ ಸೇರಿದಂತೆ […]