ಆಹಾರದ ಮೇಲಿನ ತೆರಿಗೆ (GST) ಶೇ 5% ಕ್ಕೆ ಇಳಿಕೆ ಸಿನಿಮಾ ಮಂದಿರಕ್ಕೆ ತೆರಳುವವರಿಗೆ ಸಿಹಿ ಸುದ್ದಿ

ನವದೆಹಲಿ:ಸಿನೆಮಾ ಟಿಕೆಟ್ ಮಾರಾಟ ಮತ್ತು ಪಾಪ್ಕಾರ್ನ್ ಅಥವಾ ತಂಪು ಪಾನೀಯಗಳಂತಹ ತಿನ್ನಬಹುದಾದ ವಸ್ತುಗಳ ಸರಬರಾಜು. ಒಟ್ಟುಗೂಡಿಸಿ ಮಾರಾಟ ಮಾಡಿದರೆ, ಸಂಪೂರ್ಣ ಪೂರೈಕೆಯನ್ನು ಸಂಯೋಜಿತ ಪೂರೈಕೆ ಎಂದು ಪರಿಗಣಿಸಬೇಕು ಮತ್ತು ಪ್ರಧಾನ ಪೂರೈಕೆಯ ಅನ್ವಯವಾಗುವ ದರದ ಪ್ರಕಾರ ತೆರಿಗೆ ವಿಧಿಸಬೇಕು, ಪ್ರಸ್ತುತ, 100 ರೂ.ಗಿಂತ ಕಡಿಮೆ ಬೆಲೆಯ ಚಲನಚಿತ್ರ ಟಿಕೆಟ್ಗಳಿಗೆ ಶೇಕಡಾ 12 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಮಿತಿಗಿಂತ ಹೆಚ್ಚಿನದಕ್ಕೆ ಶೇಕಡಾ 18 ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಜುಲೈ 11 ರಂದು ನಡೆದ ಸರಕು ಮತ್ತು ಸೇವಾ ತೆರಿಗೆ […]
ಶ್ರೀಲಂಕಾದಿಂದ ಬೆಂಗಳೂರಿಗೆ ಶಿಫ್ಟ್: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ಗೆ ಲಘು ಹೃದಯಾಘಾತ

ಬೆಂಗಳೂರು: ಶ್ರೀಲಂಕಾದ ಕೊಲಂಬೊಗೆ ತೆರಳಿದ್ದ ಕಸ್ತೂರಿ ರಂಗನ್ ಅವರಿಗೆ ಲಘು ಹೃದಯಾಘಾತವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಶೇಷ ವಿಮಾನದ ಮೂಲಕ ಅವರನ್ನು ಬೆಂಗಳೂರಿಗೆ ಬಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸಂಜೆ 5.30ಕ್ಕೆ ಕೊಲಂಬೊದಿಂದ ಹೆಚ್ಎಎಲ್ ನಿಲ್ದಾಣಕ್ಕೆ ವಿಮಾನಕ್ಕೆ ಬರಬೇಕಿತ್ತು. ಆದರೆ, ಕೆಲ ಕಾರಣಗಳಿಂದ 8 ಗಂಟೆಗೆ ರಂಗನ್ ಅವರಿರುವ ವಿಮಾನ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ರವಾನಿಸಲು ಬೆಂಗಳೂರಿನ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಟ್ವೀಟ್: ”ಭಾರತೀಯ […]
ಯುಕೆಯ ಕೆಂಟ್‌ನಲ್ಲಿ 3ಲಕ್ಷ ವರ್ಷಗಳಷ್ಟು ಹಳೆಯದಾದ ಬೃಹತ್ ಕೈ ಕೊಡಲಿಗಳನ್ನು ಪತ್ತೆ ಮಾಡಿದ ಪುರಾತತ್ತ್ವ ಶಾಸ್ತ್ರಜ್ಞರು!!

ಕೆಂಟ್: ಯುಕೆಯ ಕೆಂಟ್‌ನಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಗಮನಾರ್ಹವಾದ ಆವಿಷ್ಕಾರವನ್ನು ಮಾಡಿದ್ದಾರೆ. ಮಾನವನ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಾಗೈತಿಹಾಸಿಕ ಕೈ ಕೊಡಲಿಗಳನ್ನು ಪತ್ತೆ ಮಾಡಲಾಗಿದ್ದು, ಇವುಗಳ ಗಾತ್ರ ಪುರಾತತ್ವ ಶಾಸ್ತ್ರಜ್ಞರನ್ನು ಬೆಚ್ಚಿ ಬೀಳಿಸಿವೆ. ಯುಸಿಎಲ್ ಆರ್ಕಿಯಾಲಜಿ ಸೌತ್-ಈಸ್ಟ್‌ನ ಸಂಶೋಧಕರು ನಡೆಸಿದ ಉತ್ಖನದಲ್ಲಿ 800 ಕ್ಕೂ ಹೆಚ್ಚು ಕಲ್ಲಿನ ಉಪಕರಣಗಳು ದೊರೆತಿವೆ. ಈ ಕಲಾಕೃತಿಗಳು 300,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಬ್ರಿಟನ್ ನ ಮೆಡ್ವೇ ಕಣಿವೆಯ ಮೇಲಿರುವ ಬೆಟ್ಟದ ಮೇಲೆ ಹಿಮಯುಗದ ಕೆಸರುಗಳಲ್ಲಿ ಸುರಕ್ಷಿತವಾಗಿ ಹುದುಗಿದ್ದ ಈ ಕಲ್ಲಿನ ಉಪಕರಣಗಳು […]
ಧಾರಾಕಾರ ಮಳೆಗೆ ತತ್ತರಿಸಿದ ಉತ್ತರ: ಹಿಮಾಚಲದಲ್ಲಿ ಕೊಚ್ಚಿ ಹೋದ ಕಾರುಗಳು; ದೆಹಲಿಯಲ್ಲಿಯೂ ವರುಣನ ಅಬ್ಬರ

ನವದೆಹಲಿ: ಭಾರೀ ಮಳೆಯಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಉಂಟಾಗಿದ್ದು, ಕಳೆದ ಮೂರು ದಿನಗಳಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. ಹೆಚ್ಚು ಹಾನಿಗೊಳಗಾದ ಹಿಮಾಚಲ ಪ್ರದೇಶದಲ್ಲಿ, ರೆಡ್ ಅಲರ್ಟ್ ಘೋಷಿಸಲಾಗಿದೆ ಮತ್ತು ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಎರಡು ದಿನಗಳ ಕಾಲ ಮುಚ್ಚಲ್ಪಟ್ಟಿವೆ. ಎಲ್ಲಾ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಸ್ಥಗಿತಗೊಂಡಿದೆ. Fierce Parvati River at Manikaran !Stay away from rives and streams 🌧️#Heavyrainfall pic.twitter.com/2IcfCbpxoZ […]
ಬಂಟ್ವಾಳದ ಭಕ್ತರು ಸೇರಿದಂತೆ ಕರಾವಳಿಯ 20 ಮಂದಿ ಸೇಫ್: ಅಮರನಾಥ ಯಾತ್ರೆ

ಬಂಟ್ವಾಳ (ದಕ್ಷಿಣ ಕನ್ನಡ) :ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಯಿಂದ ನಾವು 20 ಮಂದಿ ಇದ್ದೇವೆ ಎಂದು ಹೇಳಿರುವ ಸಂತೋಷ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಿಂದ ಒಟ್ಟು 5 ಯಾತ್ರಾರ್ಥಿಗಳು, ಮಂಗಳೂರು ಅಡ್ಯಾರಿನಿಂದ 8, ಪುತ್ತೂರು, ಉಡುಪಿ, ಮೂಡಬಿದಿರೆಯಿಂದ ತಲಾ ಒಬ್ಬರು, ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ ಒಬ್ಬರು ಹೀಗೆ ಒಟ್ಟು 20 ಯಾತ್ರಾರ್ಥಿಗಳು ಯಾತ್ರೆಗೆ ತೆರಳಿದ್ದಾಗಿ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ ಮತ್ತು ಭೂಕುಸಿತ ಉಂಟಾಗುತ್ತಿದ್ದು, ಅಮರನಾಥ […]