ಕುನೋ ಅರಣ್ಯದಲ್ಲಿ ಚೀತಾಗಳ ಸಾವಿಗೆ ಕಾರಣದ ಮತ್ತು ಪರಿಹಾರಕ್ಕಾಗಿ ವಿದೇಶಿ ತಜ್ಞರ ಮೊರೆ

ನವದೆಹಲಿ: ಚಿರತೆಗಳ ಮೇಲಿನ ನಿಗಾಕ್ಕೆ ಇರುವ ಮಾನಿಟರಿಂಗ್ ಪ್ರೋಟೋಕಾಲ್‌ಗಳು, ರಕ್ಷಣೆಯ ಸ್ಥಿತಿಗಳು, ನಿರ್ವಹಣೆ, ಪಶುವೈದ್ಯಕೀಯ ಸೌಲಭ್ಯಗಳು, ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯ ಅಂಶಗಳ ಕುರಿತಂತೆ ರಾಷ್ಟ್ರೀಯ ತಜ್ಞರಿಂದ ಪ್ರಾಧಿಕಾರವು ಸಲಹೆಗಳನ್ನು ಪಡೆಯುತ್ತಿದೆ.ಮಧ್ಯಪ್ರದೇಶದ ಕುನೋ ಅರಣ್ಯಪ್ರದೇಶದಲ್ಲಿ ಬಿಡಲಾಗಿರುವ ಚೀತಾಗಳು ಒಂದರ ಹಿಂದೆ ಒಂದರಂತೆ ಪ್ರಾಣ ಕಳೆದುಕೊಳ್ಳುತ್ತಿದ್ದು, ಆತಂಕ ತಂದಿದೆ.ಚೀತಾಗಳು ಸಾವಿಗೆ ಕಾರಣ ಮತ್ತು ಪರಿಹಾರಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಅಂತಾರಾಷ್ಟ್ರೀಯ ಚಿರತೆ ತಜ್ಞರ ಮೊರೆ ಹೋಗಿದೆ. ಇದರ ಕಾರಣ ಪತ್ತೆ ಹಚ್ಚಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ […]
ದೂದ್ ಸಾಗರ್ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ರೆ ಶಿಕ್ಷೆ ನೈಋತ್ಯ ರೈಲ್ವೆ ಇಲಾಖೆಯಿಂದ ಎಚ್ಚರಿಕೆ

ಕಾರವಾರ: ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.ಅದರಲ್ಲಿಯೂ ಈಗ ಮಳೆ ಬರುತ್ತಿರುವುದರಿಂದ ಅದರ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಆದರೆ ಪ್ರವಾಸಕ್ಕೆಂದು ಬರುವ ಜನರು ಅಲ್ಲಿ ಮೋಜು ಮಸ್ತಿ ಮಾಡಿ ಪ್ರಕೃತಿಯನ್ನು ಹಾಳು ಮಾಡುವುದರಲ್ಲಿ ಹಿಂಜರಿಯುವುದಿಲ್ಲ. ಹೀಗಾಗಿ ಈ ಸಂಭ್ರಮಕ್ಕೆ ಕಡಿವಾಣ ಬೀಳಲಿದೆ. ಇನ್ಮುಂದೆ ಪ್ರವಾಸಿಗರು ದೂದ್ ಸಾಗರ್ನಲ್ಲಿ ಅಡ್ಡಾದಿಡ್ಡಿ ಓಡಾಡುವಂತಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.ರೈಲಿನ ಬೋಗಿಯೊಳಗಿನಿಂದಲೇ ಪ್ರವಾಸಿಗರು ದೂದ್ ಸಾಗರ್ ಸೌಂದರ್ಯವನ್ನು ವೀಕ್ಷಿಸುವಂತೆ ನೈಋತ್ಯ […]
Twitter ಸಾಲದ ಹೊರೆ ಹೆಚ್ಚಳ, ಆದಾಯ ಸಾಕಾಗುತ್ತಿಲ್ಲ ಎಂದು ಹೇಳಿಕೆ ನೀಡಿದ ಎಲೋನ್ ಮಸ್ಕ್

ನವದೆಹಲಿ :”ಸಾಧನ ಬಳಕೆದಾರರ ಸೆಕೆಂಡುಗಳ ಬಳಕೆ” (device user seconds usage) ವಿಷಯದಲ್ಲಿ ಟ್ವಿಟರ್ ಸಾರ್ವಕಾಲಿಕ ಎತ್ತರವನ್ನು ತಲುಪಿದೆ. ಬಹುತೇಕ ಎಲ್ಲ ಜಾಹೀರಾತುದಾರರು ಹಿಂತಿರುಗಿ ಬಂದಿದ್ದಾರೆ ಅಥವಾ ಶೀಘ್ರ ಬರುವುದಾಗಿ ಹೇಳಿದ್ದಾರೆ ಎಂದು ಮಸ್ಕ್ ತಿಳಿಸಿದ್ದಾರೆ. ಟ್ವಿಟರ್ ಜಾಹೀರಾತು ಆದಾಯ ಶೇಕಡಾ 50 ರಷ್ಟು ಕುಸಿತವಾಗಿದೆ ಮತ್ತು ಹಿಂದಿನಿಂದ ಬಂದ ಭಾರಿ ಸಾಲಗಳು ಇನ್ನೂ ಬಾಕಿ ಇವೆ ಎಂದು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಹೇಳಿದ್ದಾರೆತಾವು ಭರವಸೆ ನೀಡಿದಂತೆ ಟ್ವಿಟರ್ನ ಕಂಟೆಂಟ್ ಕ್ರಿಯೇಟರ್ಗಳಿಗೆ ಹಣ ಪಾವತಿಗಳನ್ನು ಜಾರಿಗೊಳಿಸಿದ […]
IT return ಫೈಲಿಂಗ್ಗೆ ಗಡುವು ಜುಲೈ 31 ಈ ಬಾರಿ ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ

ನವದೆಹಲಿ :2022-23ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನವಾದ ಕಳೆದ ವರ್ಷದ ಜುಲೈ 31 ರವರೆಗೆ ಸುಮಾರು 5.83 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಐಟಿಆರ್ ಫೈಲಿಂಗ್ ಕಳೆದ ವರ್ಷಕ್ಕಿಂತ ಹೆಚ್ಚು ವೇಗವಾಗಿರುವುದರಿಂದ ನಾವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಫೈಲಿಂಗ್ ಮಾಡಲು ಕೊನೆಯ ಕ್ಷಣದವರೆಗೆ ಕಾಯಬೇಡಿ ಮತ್ತು ಯಾವುದೇ ಅವಧಿ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಬೇಡಿ ಎಂದು ನಾವು ಅವರಿಗೆ ಸಲಹೆ ನೀಡುತ್ತೇವೆ ಎಂದು ಮಲ್ಹೋತ್ರಾ ಹೇಳಿದರು. ಐಟಿ ರಿಟರ್ನ್ […]
ಐದು ಮರಿಗಳಿಗೆ 75 ಗಂಟೆಗಳಲ್ಲಿ ಜನ್ಮ ನೀಡಿದ ಸಿಂಹಿಣಿ ಅದಾದ 48 ಗಂಟೆಗಳಲ್ಲಿ ನಾಲ್ಕು ಮರಿಗಳು ಸಾವು

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿ ಪಾರ್ಕ್ನಲ್ಲಿ ಸಿಂಹಿಣಿಯೊಂದು ಐದು ಮರಿಗಳು ಜನ್ಮ ನೀಡಿದೆ. ಈ ಪೈಕಿ ನಾಲ್ಕು ಮರಿಗಳು ಮೃತಪಟ್ಟಿವೆ.ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿ ಪಾರ್ಕ್ನ ‘ಸೋನಾ’ ಎಂಬ ಸಿಂಹಿಣಿ ಜುಲೈ 6ರಿಂದ ಜು.10ರ ನಡುವೆ ಐದು ಮರಿಗಳಿಗೆ ಜನ್ಮ ನೀಡಿದೆ. ಆದರೆ, ಈ ಪೈಕಿ ನಾಲ್ಕು ಮರಿಗಳು ಜು.11ರಿಂದ ಜು.13ರ ನಡುವೆ ಮೃತಪಟ್ಟಿವೆ. ಆದರೆ, ಇದೇ ಮೊದಲ ಬಾರಿ ಈ ಸಿಂಹಿಣಿ ಸುಮಾರು ಗಂಟೆಗಳ ಅಂತರದಲ್ಲಿ ಐದು ಮರಿಗಳಿಗೆ […]