ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ರೈಲ್ವೇ ರಕ್ಷಣಾ ಪಡೆ ಕಾನ್‌ಸ್ಟೆಬಲ್

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್ ಸೋಮವಾರ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗಿನ ಜಾವ 5 ಗಂಟೆಯ ನಂತರ, ಕಾನ್ಸ್‌ಟೇಬಲ್ ತನ್ನ ಸ್ವಯಂಚಾಲಿತ ಆಯುಧದಿಂದ ಗುಂಡು ಹಾರಿಸಿ ರೈಲಿನಲ್ಲಿದ್ದ ಆರ್‌ಪಿಎಫ್ ಎಎಸ್‌ಐ ಮತ್ತು ಇತರ ಮೂವರು ಪ್ರಯಾಣಿಕರನ್ನು ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪಾಲ್ಘರ್ ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿದೆ. […]

ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಭಾರತದ 486 ಅತ್ಯಮೂಲ್ಯ ಪುರಾತನ ವಸ್ತುಗಳು ಕಳವು

ನವದೆಹಲಿ: ಕಳುವಾದ ಪುರಾತನ ವಸ್ತುಗಳನ್ನು ಮರಳಿ ದೇಶಕ್ಕೆ ತರುವ ಪ್ರಯತ್ನದ ನಡುವೆ ಇನ್ನೂ 486 ಐತಿಹಾಸಿಕ ವಸ್ತುಗಳು ಮಾಯವಾಗಿವೆ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ. ಅದರಲ್ಲೂ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಪುರಾತನ ವಸ್ತುಗಳು ಕಾಣೆಯಾಗಿವೆ ಎಂದು ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೀಡಿದ ಅಂಕಿಅಂಶದಲ್ಲಿ ಗೊತ್ತಾಗಿದೆ.ಭಾರತ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ರಾಷ್ಟ್ರ. ದೇಶದ ಐತಿಹ್ಯವನ್ನು ಹೇಳುವ ಅತ್ಯಮೂಲ್ಯ ಪುರಾತನ ವಸ್ತುಗಳು ಕಳ್ಳತನವಾಗಿದ್ದು, ಅವುಗಳನ್ನು ಮರಳಿ ಪಡೆಯವ ಪ್ರಕ್ರಿಯೆ ನಡೆಯುತ್ತಿದೆ. ಆದಾಗ್ಯೂ, ಇನ್ನೂ 486 ಅತ್ಯಮೂಲ್ಯ […]

ಇದು ದೊಡ್ಡ ಪರಿವರ್ತನೆ ಹಾದಿ :ಮೆಹ್ರಮ್ ಇಲ್ಲದೆ 4 ಸಾವಿರ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆ ಮೋದಿ ಮೆಚ್ಚುಗೆ

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ತಮ್ಮ ಸರ್ಕಾರವು ಹಜ್ ನೀತಿಯಲ್ಲಿ ಮಾಡಿದ ಬದಲಾವಣೆಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಯಾತ್ರೆಗೆ ಹೋಗಲು ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಮೆಹ್ರಮ್ (ಪುರುಷರ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಅತಿ ದೊಡ್ಡ ಪರಿವರ್ತನೆಯಾಗಿದೆ. ಪ್ರಧಾನಿ ಮೋದಿ ಇಂದು ದೇಶವನ್ನುದ್ದೇಶಿಸಿ ತಮ್ಮ ಮನ್​​ ಕಿ ಬಾತ್ ಕಾರ್ಯಕ್ರಮದ 103ನೇ ಮಾಸಿಕ ರೇಡಿಯೋ ಭಾಷಣವನ್ನು ಮಾಡಿದರು ಇಂದು […]

ಭಾರತೀಯ ಸೇನೆಯಿಂದ ತೆಂಗಾ ಕಣಿವೆಯಲ್ಲಿ ‘ಅಮೃತ ಸರೋವರ’ ಉದ್ಘಾಟನೆ

ಪಶ್ಚಿಮ ಕಮೆಂಗ್ (ಅರುಣಾಚಲ ಪ್ರದೇಶ): ಮಿಷನ್ ಅಮೃತ ಸರೋವರ ಕೇಂದ್ರ ಸರ್ಕಾರದ ಉಪಕ್ರಮ.ಇದರ ಭಾಗವಾಗಿ ಭಾರತೀಯ ಸೇನೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಅರುಣಾಚಲ ಪ್ರದೇಶದ ತೆಂಗಾ ಕಣಿವೆಯಲ್ಲಿರುವ ಅಮೃತ ಸರೋವರವನ್ನು ಲೋಕಾರ್ಪಣೆ ಮಾಡಿದೆ.ಭಾರತೀಯ ಸೇನೆ ಅರುಣಾಚಲದ ತೆಂಗಾ ಕಣಿವೆಯಲ್ಲಿ ಅಮೃತ ಸರೋವರವನ್ನು ಉದ್ಘಾಟಿಸಿದೆ. ಇದು ಮಳೆನೀರು ಕೊಯ್ಲು ಯೋಜನೆಗೆ ಒತ್ತು ನೀಡುತ್ತದೆ. ಯೋಜನೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಮುದಾಯ ಸಬಲೀಕರಣದ ಜತೆಗೆ ಮಳೆನೀರು ಕೊಯ್ಲು ಮಾಡುವ ಗುರಿಯನ್ನು ಹೊಂದಿದೆ. ಸ್ಥಳೀಯ ಆಡಳಿತದ ಬೆಂಬಲದೊಂದಿಗೆ ಸೇನೆಯು ನಿರ್ಮಿಸಿದ […]

ಹುಲಿ ಗಣತಿ: ಭಾರತದಲ್ಲಿ ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ , ಕರ್ನಾಟಕಕ್ಕೆ ಎರಡನೇ ಸ್ಥಾನದ ಪಟ್ಟ

ನಿರಂತರವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಸಂಖ್ಯೆಯನ್ನು ನಿಯಂತ್ರಿಸಲು ಜುಲೈ 29 ರ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ಭಾರತಕ್ಕೆ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ವಿಶ್ವದ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿ ಕಂಡುಬರುತ್ತವೆ. ನವದೆಹಲಿ: ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಹುಲಿ ಗಣತಿ 2022 ರ ರಾಜ್ಯವಾರು ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಂಕಿ – ಅಂಶಗಳ ಪ್ರಕಾರ, ಭಾರತದಲ್ಲಿ 3167 ಹುಲಿಗಳಿವೆ. 563 ಹುಲಿಗಳನ್ನು ಹೊಂದಿರುವ ಕರ್ನಾಟಕವು ಮಧ್ಯಪ್ರದೇಶದ ನಂತರ ಎರಡನೇ […]