ಪಾಕಿಸ್ತಾನದಲ್ಲಿ ‘ಹಜಾರಾ’ ರೈಲು ಹಳಿತಪ್ಪಿದ ಹಿನ್ನೆಲೆ : 30 ಸಾವು, 100 ಅಧಿಕ ಮಂದಿಗೆ ಗಾಯ

ಇಸ್ಲಾಮಾಬಾದ್: ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ದುರಂತ ಜರುಗಿತು.ಪಾಕಿಸ್ತಾನದಲ್ಲಿ ಭಾನುವಾರ ಸಂಭವಿಸಿದ ಭೀಕರ ರೈಲು ಅವಘಡದಲ್ಲಿ 30 ಪ್ರಯಾಣಿಕರು ಅಸುನೀಗಿದ್ದಾರೆ. ಘಟನೆಯಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ಹಜಾರಾ ಎಂಬ ಹೆಸರಿನ ರೈಲು ಹಳಿ ತಪ್ಪಿದ್ದು, ಸಾವುನೋವು ಸಂಭವಿಸಿದೆ “ಶಹಜಾದ್‌ಪುರ ಮತ್ತು ನವಾಬ್‌ಶಾ ನಡುವಿನ ಸಹಾರಾ ರೈಲು ನಿಲ್ದಾಣದ ಬಳಿ ಹಜಾರಾ ರೈಲು ಹೊರಡುತ್ತಿದ್ದಾಗ ಅಚಾನಕ್ಕಾಗಿ ಹಳಿ ತಪ್ಪಿದೆ. 8 ರಿಂದ 10 ಬೋಗಿಗಳು ಅಪಘಾತಕ್ಕೀಡಾಗಿವೆ. ಕನಿಷ್ಠ 30 ಜನರು […]
ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ: ಕರ್ನಾಟಕದ 13 ಸೇರಿ 508 ರೈಲು ನಿಲ್ದಾಣಗಳ ನವೀಕರಣ

ನವದೆಹಲಿ: ಅಮೃತ್ ಯೋಜನೆಯಡಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಮೂಲಕ ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಲಾಯಿತು. ದೇಶದ ಜನರಿಗೆ ರೈಲ್ವೇ ಆದ್ಯತೆಯ ಸಾರಿಗೆಯಾಗಿದೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಹೇಳಿದರು.ಅಮೃತ ಯೋಜನೆಯಡಿ ದೇಶಾದ್ಯಂತ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದೇ ವೇಳೆ ಅಭಿವೃದ್ಧಿ ಕಾರ್ಯಗಳನ್ನು ಟೀಕಿಸಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ತರಾಟೆಗೆ […]
ಆಗಸ್ಟ್ 23 ರ ಲ್ಯಾಂಡಿಂಗ್ನದ್ದೇ ಕೌತುಕ: ಚಂದ್ರನ ಗುರುತ್ವದತ್ತ ಚಂದ್ರಯಾನ-3 ನೌಕೆ

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಚಂದ್ರನತ್ತ ಐತಿಹಾಸಿಕ ಪಯಣ ಆರಂಭಿಸಿರುವ ಇಸ್ರೋ ನಿನ್ನೆಯಷ್ಟೇ ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿ ವಿಕ್ರಮ ಮೆರೆದಿದೆ. ಚಂದ್ರನ ಕಕ್ಷೆ ಸೇರಿಸುವ ಕಾರ್ಯ ಮುಗಿದಿದ್ದು, ಆಗಸ್ಟ್ 6 (ಭಾನುವಾರ) ರಾತ್ರಿ 11 ಗಂಟೆಗೆ ಕಕ್ಷೆ ಇಳಿಸುವ ಯತ್ನ ನಡೆಸಲಾಗುವುದು. ಈ ಮೂಲಕ ಚಂದ್ರನಲ್ಲಿಗೆ ಇನ್ನೂ ಹತ್ತಿರಕ್ಕೆ ತೆರಳಲಿದೆ ಎಂದು ವಿಜ್ಞಾನಿಗಳು ತಿಳಿಸಿದರು. ಈಗ ಅದು ಚಂದ್ರನ ಪರಿಭ್ರಮಣೆ ಶುರು ಮಾಡಿದ್ದು, ಮೂರನೇ ಎರಡರಷ್ಟು ಹತ್ತಿರಕ್ಕೆ ತೆರಳಿದೆ ಎಂದು ಇಸ್ರೋ ತಿಳಿಸಿದೆ.ನಮ್ಮ […]
ಚಾರ್ಮಿನಾರ್: ಪ್ರತಿದಿನ ಸಂಜೆ ದೀಪಾಲಂಕಾರದಿಂದ ಕಂಗೊಳಿಸಲಿದೆ

ಹೈದರಾಬಾದ್ (ತೆಲಂಗಾಣ) : “ರಾಷ್ಟ್ರೀಯ ಸಂಸ್ಕೃತಿ ನಿಧಿ (ಎನ್ಸಿಎಫ್) ಮತ್ತು ಇಂಡಿಯನ್ ಆಯಿಲ್ ಫೌಂಡೇಶನ್ (ಐಒಎಫ್) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣ (ಎಎಸ್‌ಐ) ಇಲಾಖೆ ಇವುಗಳ ಕ್ರಮದಿಂದ ಇನ್ನೂ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಈ ಐತಿಹಾಸಿಕ ಸ್ಥಳಕ್ಕೆ ಆಗಮಿಸಲಿದ್ದಾರೆ” ಎಂದು ಕಿಶನ್ ರೆಡ್ಡಿ ಹೇಳಿದರು. ಐಒಎಫ್ ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು ಇಂಡಿಯನ್ ಆಯಿಲ್ ಕಂಪನಿ ಸ್ಥಾಪಿಸಿದ ಲಾಭರಹಿತ ಟ್ರಸ್ಟ್ ಆಗಿದೆ. ಹೈದರಾಬಾದ್ನ ಐತಿಹಾಸಿಕ ಸಂಕೇತವಾದ ಚಾರ್ ಮಿನಾರ್ ಇನ್ನು […]
ಚಂದ್ರಯಾನ-3: 3ನೇ ಎರಡರಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದ ಇಸ್ರೋ ಬಾಹ್ಯಾಕಾಶ ನೌಕೆ

ನವದೆಹಲಿ:ಜು.14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ಮಾರ್ಕ್ 3 (ಎಲ್‌ವಿಎಂ 3) ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಯಶಸ್ವಿಯಾಗಿ ಉಡಾವಣೆಯಾದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸುಮಾರು ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿದೆ. ಲೂನಾರ್ ಆರ್ಬಿಟ್ ಇಂಜೆಕ್ಷನ್ (LOI) ಅನ್ನು ಆಗಸ್ಟ್ 5, 2023ರಂದು ಸುಮಾರು 19:00(ಭಾರತೀಯ ಕಾಲಮಾನ- IST) ಗಂಟೆಗಳಿಗೆ ಹೊಂದಿಸಲಾಗಿದೆ ಎಂದು ಇಸ್ರೋ ತನ್ನ ಟ್ಬೀಟ್ನಲ್ಲಿ ತಿಳಿಸಿದೆ. ಭಾರತದ ಚಂದ್ರಯಾನ-3 ನೌಕೆ ಶುಕ್ರವಾರದ ವೇಳೆಗೆ ಭೂಮಿ ಮತ್ತು ಚಂದ್ರನ ನಡುವಿನ ಅಂತರದ […]