ಲೋಕಸಭೆಯಲ್ಲಿ 22, ರಾಜ್ಯಸಭೆಯಲ್ಲಿ 25 ಮಸೂದೆ ಅಂಗೀಕಾರ : ಮುಂಗಾರು ಅಧಿವೇಶನ ಅಂತ್ಯ

ನವದೆಹಲಿ : ಸಂಸತ್ತಿನ ಉಭಯ ಸದನಗಳನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಕೆಳಮನೆಯಲ್ಲಿ ಶೇ 45 ಮತ್ತು ಮೇಲ್ಮನೆಯಲ್ಲಿ ಶೇ 63ರಷ್ಟು ಉತ್ಪಾದಕತೆಯನ್ನು ದಾಖಲಿಸಿದ್ದ ಮುಂಗಾರು ಅಧಿವೇಶನಕ್ಕೆ ಅಂತ್ಯ ಹಾಡಲಾಗಿದೆ.ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, 23 ದಿನಗಳ ಸುದೀರ್ಘ ಅಧಿವೇಶನದಲ್ಲಿ ಒಟ್ಟು 17 ಅಧಿವೇಶನಗಳು (sittings) ನಡೆದಿವೆ ಎಂದು ಹೇಳಿದರು. ಸಂಸತ್​ ಕಲಾಪ ಇಂದು ಅಂತ್ಯಗೊಂಡಿದ್ದು, ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಲೋಕಸಭೆಯ ಉತ್ಪಾದಕತೆಯು ಶೇಕಡಾ 45 ಮತ್ತು ರಾಜ್ಯಸಭೆಯ ಉತ್ಪಾದಕತೆ […]

ಇಡೀ ದೇಶವೇ ಮಣಿಪುರದ ಮಹಿಳೆಯರ ಜೊತೆ ನಿಂತಿದೆ; ಶಾಂತಿ ಪುನಸ್ಥಾಪನೆ ಶತಸಿದ್ದ: ಮೋದಿ ಸರ್ಕಾರದ ಮೇಲೆ ಪುನಃಸ್ಥಾಪಿಸಿತು ವಿಶ್ವಾಸ

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು ತಮ್ಮ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಉತ್ತರಿಸಿದರು. ಕಳೆದ ಎರಡು ದಿನಗಳಿಂದ, ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯ ಬಗ್ಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಾಯಕರು ಭಾರೀ ಚರ್ಚೆಗಳನ್ನು ಮಾಡುತ್ತಿದ್ದು, ಅವಿಶ್ವಾಸ ಮಂಡನೆಯ ಧ್ವನಿ ಮತದ ದಿನವಾದ ಗುರುವಾರದಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು. ಆದರೆ, ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದ ಕಾಂಗ್ರೆಸ್ ಹಾಗೂ ಅದರ […]

ಇಂದು ವಿಶ್ವ ಸಿಂಹ ದಿನದ ಹಿನ್ನೆಲೆ : ಸಿಂಹಗಳ ಆವಾಸಸ್ಥಾನ ಸುರಕ್ಷತೆಗೆ ಶ್ರಮಿಸುತ್ತಿರುವವರ ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಸಿಂಹಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಟ್ವೀಟ್ ಮಾಡುವ​ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಂಹಗಳ ಆವಾಸಸ್ಥಾನದ ಸುರಕ್ಷತೆಗೆ ಕೆಲಸ ಮಾಡುತ್ತಿರುವವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಂದಿನ ಪೀಳಿಗೆಗೆ ಸಿಂಹಗಳ ಸಂಖ್ಯೆ ಅಭಿವೃದ್ಧಿ ಆಗುತ್ತಿರುವುದ್ನು ಖಾತ್ರಿಪಡಿಸಿಕೊಳ್ಳುವುದರ ಮೂಲಕ ಸಿಂಹವನ್ನು ಗೌರವಿಸಿ, ರಕ್ಷಿಸುವುದನ್ನು ಮುಂದುವರಿಸೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ. ಇಂದು ವಿಶ್ವ ಸಿಂಹ ದಿನ. ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖವಾಗಿರುವ ಸಿಂಹಗಳ ಸಂಖ್ಯೆ ಇಳಿಕೆಯಾಗಿದ್ದು, ಈ […]

ಸೆನ್ಸೆಕ್ಸ್​ 308 & ನಿಫ್ಟಿ 89 ಅಂಕ ಕುಸಿತ: ಹಣದುಬ್ಬರ ಹೆಚ್ಚಳ

ಮುಂಬೈ: ಬಿಎಸ್‌ಇ ಬೆಂಚ್​ ಮಾರ್ಕ್​ ಸೆನ್ಸೆಕ್ಸ್ 307.63 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಕುಸಿದು 65,688.18 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 89.45 ಪಾಯಿಂಟ್ಸ್ ಅಥವಾ ಶೇಕಡಾ 0.46 ರಷ್ಟು ಕುಸಿದು 19,543.10 ಕ್ಕೆ ತಲುಪಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಹಣಕಾಸು ನೀತಿ ಸಮಿತಿಯು ಪ್ರಮುಖ ಬಡ್ಡಿ ದರಗಳನ್ನು ಶೇಕಡಾ 6.50 ಕ್ಕೆ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡ ನಂತರ ದೇಶೀಯ ಶೇರು ಮಾರುಕಟ್ಟೆಗಳು ಗುರುವಾರ ಕುಸಿದವು. ಇಂದಿನ ಶೇರು ಮಾರುಕಟ್ಟೆ ವಹಿವಾಟಿನಲ್ಲಿ ಸೆನ್ಸೆಕ್ಸ್​ 308 ಅಂಕ […]

ಕೆಜಿಗೆ 70 ರೂ : ಈ ರಾಜ್ಯದಲ್ಲಿ ದಿಢೀರ್​ ಇಳಿಕೆಯಾದ ಟೊಮ್ಯಾಟೊ ಬೆಲೆ

ನವದೆಹಲಿ : ದುಬಾರಿಯಾಗಿರುವ ಟೊಮ್ಯಾಟೊ ಬೆಲೆಯ ಹೊರೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ನೆರವು ನೀಡಲು ಸೂಕ್ತ ಕ್ರಮ ಕೈಗೊಂಡಿದೆ. ಈ ಭಾಗವಾಗಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF) ಪ್ರತಿ ಕೆಜಿಗೆ 70 ರೂ.ಗೆ ಟೊಮ್ಯಾಟೊ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದರು.: ಕಳೆದ ಎರಡು ತಿಂಗಳಿನಿಂದ ದೇಶದ ಹಲವು ರಾಜ್ಯಗಳಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿತ್ತು. ಕೆಜಿಗೆ ಬರೋಬ್ಬರಿ 190-250 ರೂ. ಏರಿಕೆಯಾಗುವ ಮೂಲಕ ಜನಸಾಮಾನ್ಯರ […]