ಶತಮಾನದ ಭೀಕರ ಕಾಡ್ಗಿಚ್ಚಿಗೆ ಹವಾಯಿ ದ್ವೀಪ ಭಸ್ಮ.. 89 ಮಂದಿ ಅಗ್ನಿಗಾಹುತಿ

ಲಹೈನಾ (ಹವಾಯಿ) : ಶತಮಾನಗಳಷ್ಟು ಹಳೆಯದಾದ ಲಹೈನಾ ಪಟ್ಟಣವನ್ನು ಕಾಡ್ಗಿಚ್ಚು ಸಂಪೂರ್ಣವಾಗಿ ಸುಟ್ಟು ಹಾಕಿದೆ. ನೂರಾರು ಮನೆಗಳು, ಸಮೃದ್ಧವಾದ ಕಾಡು ಸುಟ್ಟು ಕರಕಲಾಗಿದೆ. ಸ್ಮಶಾನದ ರೀತಿ ನಗರಗಳು ಭಾಸವಾಗುತ್ತಿರುವ ಭಯಾನಕ ದೃಶ್ಯಗಳು ಕರುಳು ಹಿಂಡುತ್ತಿವೆ. ಹವಾಯಿ ದ್ವೀಪ ಎದುರಿಸಿದ ಅತಿ ಭೀಕರ ನೈಸರ್ಗಿಕ ವಿಕೋಪವಾಗಿದೆ. ಅಗ್ನಿಜ್ವಾಲೆಗೆ ಸಿಲುಕಿ ಮೃತಪಟ್ಟವರನ್ನು ಗುರುತಿಸುವುದೂ ಸಾಧ್ಯವಾಗುತ್ತಿಲ್ಲ. ಪ್ರಕೃತಿ ರುದ್ರನರ್ತನಕ್ಕೆ ತಡೆ ಇಲ್ಲವಾಗಿದೆ. ಸರ್ಕಾರದ ಸದ್ಯದ ಗಮನ ಬದುಕುಳಿದವನ್ನು ಉಳಿಸಿಕೊಳ್ಳುವುದಾಗಿದೆ. ಅವರಿಗೆ ಸುರಕ್ಷಿತ ಪ್ರದೇಶದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇದೊಂದು ವಿನಾಶಕಾರಿ ಕಾಡ್ಗಿಚ್ಚು. […]
ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ತಂದೆ ಶಶಿಕಾಂತ್ ನಿಧನ

ನಟಿ ಅಂಕಿತಾ ಲೋಖಂಡೆ ಅವರ ಸಿನಿ ಸ್ನೇಹಿತರು, ಹಿತೈಷಿಗಳು ಸೇರಿದಂತೆ ಅಭಿಮಾನಿಗಳು ಲೋಖಂಡೆ ಕುಟುಂಬದ ದುಃಖವನ್ನು ಹಂಚಿಕೊಂಡಿದ್ದಾರೆ. ಅಂಕಿತಾರ ತಂದೆಯ ನಿಧನದ ಸುದ್ದಿ ಕೇಳಿದ ಸಹನಟರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.ಜನಪ್ರಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್ ಲೋಖಂಡೆ ಅವರು ಶನಿವಾರದಂದು (ಆಗಸ್ಟ್ 12) ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್ ಲೋಖಂಡೆ ವಿಧಿವಶರಾಗಿದ್ದಾರೆ. ಅಂತಿಮ ನಮನ ಸಲ್ಲಿಸಿದ ಸಿನಿ ಸ್ನೇಹಿತರು: ಜನಪ್ರಿಯ […]
ಗ್ರಾಂಡ್ ಮಾಸ್ಟರ್ ಬಿರುದು ಪಡೆದ ಕಲಬುರಗಿಯ ಬಾಲಕ: ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ದಾಖಲೆ

ಕಲಬುರಗಿ :ಕಲಬುರಗಿಯ ಖಾಸಗಿ ಇಂಟರ್ ನ್ಯಾಷನಲ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಧ್ರುವಂತ್ ಆಲೂರ್ ಎಂಬಾತ ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ತನ್ನ ಬುದ್ಧಿ ಶಕ್ತಿಯಿಂದ ಗ್ರಾಂಡ್ ಮಾಸ್ಟರ್ ಎಂಬ ಬಿರುದು ಪಡೆದಿದ್ದಾನೆ. ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಿ, ಗ್ರಾಂಡ್ ಮಾಸ್ಟರ್ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ಈ ಮುಂಚೆ ದಕ್ಷಿಣ ಅಂಡಮಾನ್ & ನಿಕೋಬಾರ್ನ ಶಿವಯೋಗಿತ ಐದು ನಿಮಿಷದಲ್ಲಿ 198 ಸ್ಪೆಲ್ಲಿಂಗ್ ಮತ್ತು ತಮಿಳುನಾಡಿನ ರಿಕ್ಷೀತ ಎಂಬ ಪ್ರತಿಭೆಗಳು ಮಾಡಿದ್ದ […]
ನೈಜ ಗುರುತನ್ನು ಮರೆಮಾಚಿ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಸ್ಥಾಪಿಸುವುದು ಅಪರಾಧ: ಅಮಿತ್ ಶಾ

ನವದೆಹಲಿ: ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ನವೀಕರಿಸಲು ಗೃಹ ಸಚಿವ ಅಮಿತ್ ಶಾ ಶುಕ್ರವಾರದಂದು 3 ಹೊಸ ಮಸೂದೆಗಳನ್ನು ಮಂಡಿಸಿದರು. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುತ್ತವೆ. ಹೊಸ ಮಸೂದೆಯಲ್ಲಿ ಮಹತ್ವದ ನಿಬಂಧನೆಯನ್ನು ಗೃಹ ಸಚಿವರು ಘೋಷಿಸಿದರು. ಹೊಸ ಕಾನೂನಿನಲ್ಲಿ ಹೊಸ ಅಪರಾಧವನ್ನು ಪರಿಚಯಿಸಲಾಗಿದ್ದು ಇದರ ಅಡಿಯಲ್ಲಿ, ಪುರುಷರು ತಮ್ಮ ‘ನೈಜ […]
47 ವರ್ಷದ ಬಳಿಕ ಚಂದ್ರನಲ್ಲಿಗೆ ಹಾರಿದ ರಷ್ಯಾ ನೌಕೆ

ಮಾಸ್ಕೋ :ರಷ್ಯಾದ ವೊಸ್ಟೊಚ್ನಿ ಉಡಾವಣಾ ಕೇಂದ್ರದಿಂದ ಲೂನಾ -25 ಬಾಹ್ಯಾಕಾಶ ನೌಕೆಯು ಮಾಸ್ಕೋ ಸಮಯ ಶುಕ್ರವಾರ ಮುಂಜಾನೆ 2:10 ಕ್ಕೆ (ಐಎಸ್ಟಿ ಕಾಲಮಾನ ಬೆಳಗ್ಗೆ 4:40) ಸೋಯುಜ್ -2.1 ಬಿ ರಾಕೆಟ್ ಮೂಲಕ ನಭಕ್ಕೆ ಹಾರಿದೆ. 47 ವರ್ಷಗಳ ಬಳಿಕ ರಷ್ಯಾ ತನ್ನ ಲೂನಾ-25 ಲ್ಯಾಂಡರ್ ಮಿಷನ್ ಮೂಲಕ ಮತ್ತೆ ಚಂದ್ರನತ್ತ ಮುಖ ಮಾಡಿದೆ. ದಶಕಗಳ ಬಳಿಕ ರಷ್ಯಾ ಮತ್ತೊಮ್ಮೆ ಚಂದ್ರನ ಮೇಲೆ ನೌಕೆ ಇಳಿಸಲು ಮುಂದಾಗಿದೆ. ರಷ್ಯಾದ ಲೂನಾ -25 ಬಾಹ್ಯಾಕಾಶ ನೌಕೆಯು ಶುಕ್ರವಾರ ಸೋಯುಜ್ […]