ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಲ್ಕು ದಿನಗಳ ಭಾರತ ಪ್ರವಾಸ: ನವದೆಹಲಿಯಲ್ಲಿ ಜಿ20 ಶೃಂಗ

ವಾಷಿಂಗ್ಟನ್: ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ G20 ಶೃಂಗಸಭೆ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸ್ತಾಪಿಸುವ ವಿಷಯಗಳ ಬಗ್ಗೆ ಶ್ವೇತಭವನದ ವಕ್ತಾರರು ಮಾಹಿತಿ ನೀಡಿದ್ದಾರೆ. ಈ ಬಾರಿಯ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ – ರಷ್ಯಾ ಯುದ್ಧದ ಸಾಮಾಜಿಕ ಪರಿಣಾಮಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅಮೆರಿಕ ಅಧ್ಯಕ್ಷರು ಮಾತನಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಮಂಗಳವಾರ ಈ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. […]
ಜಮ್ಮು ಕಾಶ್ಮೀರದ 35A ವಿಧಿಯು ಇತರ ನಾಗರಿಕರನ್ನು ಪ್ರಮುಖ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿಸಿದೆ: ಜ. ಚಂದ್ರಚೂಡ್

ಹೊಸದಿಲ್ಲಿ: ಸಂವಿಧಾನದ 35A ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸದ ಜನರನ್ನು ಕೆಲವು ಪ್ರಮುಖ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. “ಸಮಾನತೆಯ ಅವಕಾಶ, ರಾಜ್ಯ ಸರ್ಕಾರದಲ್ಲಿ ಉದ್ಯೋಗ ಮತ್ತು ಭೂಮಿ ಖರೀದಿಸುವ ಹಕ್ಕು -ಈ ವಿಧಿಯು ನಾಗರಿಕರಿಂದ ಇವೆಲ್ಲವನ್ನೂ ಕಸಿದುಕೊಳ್ಳುತ್ತದೆ. ಏಕೆಂದರೆ ನಿವಾಸಿಗಳು (ಜಮ್ಮು ಮತ್ತು ಕಾಶ್ಮೀರದ) ವಿಶೇಷ ಹಕ್ಕುಗಳನ್ನು ಹೊಂದಿದ್ದರಿಂದ, ಅನಿವಾಸಿಗಳನ್ನು ಹೊರಗಿಡಲಾಗಿತ್ತು” ಎಂದು ಅವರು ಹೇಳಿದ್ದಾರೆ. ಭಾರತೀಯ ಸಂವಿಧಾನವು “ಜಮ್ಮು ಮತ್ತು ಕಾಶ್ಮೀರದ ಸಂವಿಧಾನಕ್ಕಿಂತ ಉನ್ನತ […]
ಜನಧನ ಖಾತೆ : ‘ದೇಶದಲ್ಲೀಗ 50 ಕೋಟಿ ಗಳನ್ನು ಖಾತೆ ತೆರೆಯಲಾಗಿದೆ”: ನಿರ್ಮಲಾ ಸೀತಾರಾಮನ್ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಜನ್ ಧನ್” ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡಿದೆ ಎಂದು ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. 50 ಕೋಟಿಗೂ ಹೆಚ್ಚು ಜನರನ್ನು ಔಪಚಾರಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಕರೆ ತರಲಾಗಿದೆ.ಶೇ. 55.5 ರಷ್ಟು ಮಹಿಳೆಯರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಶೇ. 67 ರಷ್ಟು ಗ್ರಾಮೀಣ, ಅರೆ ನಗರ ಪ್ರದೇಶಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.2 ಲಕ್ಷ ಕೋಟಿಗೂ ಅಧಿಕ ಸಂಚಿತ ಠೇವಣಿಯೊಂದಿಗೆ 50 ಕೋಟಿಗೂ ಹೆಚ್ಚು […]
ಗಣೇಶ ಚತುರ್ಥಿ ಹಬ್ಬದಂದು Jio AirFiber ಸೇವೆಗೆ ಚಾಲನೆ: ಮುಕೇಶ್ ಅಂಬಾನಿ

ಮುಂಬೈ: ಬಹುನಿರೀಕ್ಷಿತ Jio AirFiber ಸೇವೆಯು ಅಂತಿಮವಾಗಿ ಮುಂದಿನ ತಿಂಗಳಿನಿಂದ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ ಎಂದು RIL ಅಧ್ಯಕ್ಷ ಮುಕೇಶ್ ಅಂಬಾನಿ ದೃಢಪಡಿಸಿದರು. ಕಂಪನಿಯು ಹಬ್ಬಗಳ ಸಮಯದಲ್ಲಿ ದೊಡ್ಡ ಉತ್ಪನ್ನಗಳನ್ನು ಹೊರತರುತ್ತದೆ. ಈ ವರ್ಷ, ಗಣೇಶ ಚತುರ್ಥಿ ಹಬ್ಬದ ದಿನ ಸೆಪ್ಟೆಂಬರ್ 19 ರಂದು AirFiber ಅನ್ನು ಪ್ರಾರಂಭಿಸಲು ಯೋಜಿಸಲಾಗಿದೆ. AirFiber ಸೇವೆ ಬಗ್ಗೆ ತಿಳಿದಿರಬೇಕಾದ ಪ್ರಮುಖ ಅಂಶಗಳು ಗ್ರಾಹಕರು Jio AirFiber ರೂಟರ್ ಬಾಕ್ಸ್ ಅನ್ನು ಖರೀದಿಸಬೇಕು ಮತ್ತು ಅದನ್ನು ಪವರ್ ಪಾಯಿಂಟ್‌ಗೆ ಸಂಪರ್ಕಿಸಬೇಕು. ಸಾಧನವು […]
ಸೆಪ್ಟೆಂಬರ್ ಮೊದಲ ವಾರ ಆದಿತ್ಯ ಎಲ್ 1 ಉಡಾವಣೆ : ಚಂದ್ರನ ಬಳಿಕ ಸೂರ್ಯನತ್ತ ಚಿತ್ತ ಹರಿಸಿದ ಇಸ್ರೋ

ತಿರುವನಂತಪುರಂ (ಕೇರಳ) :ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಗಗನನೌಕೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ. ಚಂದ್ರಯಾನ-3 ಬಾಹ್ಯಾಕಾಶ ಯೋಜನೆಯ ಲ್ಯಾಂಡರ್ ‘ವಿಕ್ರಮ್’ ಈಗಾಗಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ವೈಜ್ಞಾನಿಕ ಸಂಶೋಧನೆಗಳ ಕೆಲಸ ಪ್ರಾರಂಭಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥರು, “ಆದಿತ್ಯ ಎಲ್ 1 ಉಪಗ್ರಹ ಸಿದ್ಧವಾಗಿದೆ. ಈಗಾಗಲೇ ಶ್ರೀಹರಿಕೋಟಾವನ್ನು ತಲುಪಿದ್ದು, ಪಿಎಸ್‌ಎಲ್‌ವಿಗೆ ಸಂಪರ್ಕ ಹೊಂದಿದೆ. ಇಸ್ರೋದ ಮುಂದಿನ […]