CET-NEET 2023 ರ 2 ನೇ ಸುತ್ತಿನ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ, KEA ಕರ್ನಾಟಕ CET, NEET 2023 ರ 2 ನೇ ಸುತ್ತಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರವೇಶಕ್ಕಾಗಿ 2 ನೇ ಸುತ್ತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು KEA ಯ ಅಧಿಕೃತ ಸೈಟ್‌ kea.kar.nic.in ನಲ್ಲಿ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ಅಧಿಕೃತ ವೇಳಾಪಟ್ಟಿಯ ಪ್ರಕಾರ, ಸೀಟ್ ಮ್ಯಾಟ್ರಿಕ್ಸ್‌ನ ಪ್ರದರ್ಶನವನ್ನು ಆಗಸ್ಟ್ 30, 2023 ರಂದು ಮಾಡಲಾಗುತ್ತದೆ. ಆಯ್ಕೆಗಳ ಮರುಜೋಡಣೆ-ಮಾರ್ಪಡಿಕೆ/ ಅಳಿಸುವಿಕೆ/ ಮರು-ಆರ್ಡರ್ ಆಯ್ಕೆಗಳು ಯಾವುದಾದರೂ ಇದ್ದರೆ ಅರ್ಹ ಅಭ್ಯರ್ಥಿಗಳು ಆಗಸ್ಟ್ 30 ರಿಂದ […]

ರಕ್ಷಾಬಂಧನದಂದು ಗೃಹಿಣಿಯರಿಗೆ ಕೇಂದ್ರದಿಂದ ಭರ್ಜರಿ ಉಡುಗೊರೆ: ಗ್ಯಾಸ್ ಸಿಲಿಂಡರ್ ಬೆಲೆ 200ರೂ ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಗೃಹಬಳಕೆಯ ಅಡುಗೆ ಅನಿಲ (LPG) ದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂ. ಇಳಿಕೆ ಮಾಡಿ ಗೃಹಿಣಿಯರಿಗೆ ರಕ್ಷಾಬಂಧನದ ಉಡುಗೊರೆ ನೀಡಿದೆ. ಬುಧವಾರದಿಂದ ಜಾರಿಗೆ ಬರಲಿರುವ ಈ ನಿರ್ಧಾರವು ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಎಲ್ಲಾ 33 ಕೋಟಿ ದೇಶೀಯ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಉಜ್ವಲ ಯೋಜನೆಯಡಿ ಒಳಪಡುವ ಸುಮಾರು 10 ಕೋಟಿ ಬಡ ಕುಟುಂಬಗಳಿಗೆ, ಪ್ರತಿ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿಗೆ ಹೆಚ್ಚುವರಿಯಾಗಿ ಬೆಲೆ ಕಡಿತಗೊಳಿಸಲಾಗಿದ್ದು, ಇದರ ಪರಿಣಾಮವಾಗಿ ಪ್ರತಿ ಸಿಲಿಂಡರ್‌ಗೆ […]

ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಬುಧವಾರದಿಂದ ಕಾರ್ಯಾರಂಭ

ಬೆಂಗಳೂರು : ಶಿವಮೊಗ್ಗದಲ್ಲಿ ನಿರ್ಮಿಸಲಾಗಿರುವ ನೂತನ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಬುಧವಾರದಿಂದ ಆರಂಭವಾಗಲಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಎತ್ತರವನ್ನು ತಲುಪಲಿದೆ. ಮೊದಲ ಯಾನದಲ್ಲಿ ತಾವೂ ಪ್ರಯಾಣಿಸಲಿದ್ದು, ಜೊತೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ‌ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶಿವಮೊಗ್ಗ […]

ಆದಿತ್ಯ ಎಲ್​-1 ಭರದಿಂದ ಸಾಗಿದ ರಾಕೆಟ್​ ಜೋಡಣೆ ಕಾರ್ಯ : ಸಿದ್ಧತೆ ಪೂರ್ಣ

ಬೆಂಗಳೂರು: ಸೂರ್ಯನ ಅಧ್ಯಯನ ತುಂಬಾ ಕ್ಲಿಷ್ಟಕರ, ಈ ಹಿನ್ನಲೆ ನಿರ್ದಿಷ್ಟ ಸ್ಥಳದಲ್ಲಿ ಅಂದರೆ, ಭೂಮಿಯಿಂದ 15 ಲಕ್ಷ ದೂರುದಲ್ಲಿ ಈ ಉಪಗ್ರಹ ನಿಂತು ಸೂರ್ಯನ ಅಧ್ಯಯನ ನಡೆಸಲಿದೆ. ಇದೇ ಶನಿವಾರ ಸತೀಶ್​ ಧವನ್​ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಗೆ ಸಜ್ಜಾಗಿದ್ದು, ಇದರ ಯಶಸ್ವಿ ಉಡ್ಡಯನಕ್ಕೆ ಸಿದ್ಧತೆ ಸರಾಗವಾಗಿ ನಡೆಸಲಾಗಿದೆ. ಇದಕ್ಕಾಗಿ ಪಿಎಸ್​ಎಲ್​ವಿ ರಾಕೆಟ್​ ಜೋಡಣೆಯ ಕಡೆಯ ಹಂತದ ಪರಿಶೀಲನೆಯನ್ನು ತಂಡ ನಡೆಸಿದೆ ಎಂದು ರಕ್ಷಣಾ ಮತ್ತು ಬಾಹ್ಯಕಾಶ ತಜ್ಞ ಗಿರೀಶ್​ ಲಿಂಗಣ್ಣ ತಿಳಿಸಿದ್ದಾರೆ.ಈ ಬಗ್ಗೆ ರಕ್ಷಣಾ ಮತ್ತು ಬಾಹ್ಯಕಾಶ […]

ಅಮೆರಿಕ ಅಧ್ಯಕ್ಷ ಜೋ ಬೈಡನ್​​​​​​​​​​​ ನಾಲ್ಕು ದಿನಗಳ ಭಾರತ ಪ್ರವಾಸ: ನವದೆಹಲಿಯಲ್ಲಿ ಜಿ20 ಶೃಂಗ

ವಾಷಿಂಗ್ಟನ್: ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ G20 ಶೃಂಗಸಭೆ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್​​ ಪ್ರಸ್ತಾಪಿಸುವ ವಿಷಯಗಳ ಬಗ್ಗೆ ಶ್ವೇತಭವನದ ವಕ್ತಾರರು ಮಾಹಿತಿ ನೀಡಿದ್ದಾರೆ. ಈ ಬಾರಿಯ ಜಿ-20 ಶೃಂಗಸಭೆಯಲ್ಲಿ ಉಕ್ರೇನ್‌ – ರಷ್ಯಾ ಯುದ್ಧದ ಸಾಮಾಜಿಕ ಪರಿಣಾಮಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅಮೆರಿಕ ಅಧ್ಯಕ್ಷರು ಮಾತನಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಮಂಗಳವಾರ ಈ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. […]