ಲೊಟ್ಟೆಯಲ್ಲ, ಮೊಟ್ಟೆಯ ಈ ಪ್ರಯೋಜನಗಳು: ದಿನಕ್ಕೊಂದು ಮೊಟ್ಟೆ ತಿಂದ್ರೆ ಏನಾಗುತ್ತೆ?

ಮೊಟ್ಟೆ ಅಂದ್ರೆ ಪೌಷ್ಟಿಕಾಂಶಗಳ ಆಗರ. ಇದರಲ್ಲಿರುವ ಜೀವಸತ್ವಗಳಲ್ಲಿ ಆರೋಗ್ಯಕ್ಕೆ ಪೂರಕವಾಗುವ ಅಂಶಗಳಿವೆ. ಪ್ರೋಟೀನ್, ಆರೋಗ್ಯಕರ ಕೊಬ್ಬು ಎಲ್ಲವೂ ಮೊಟ್ಟೆಯಲ್ಲಿದೆ. ಮೊಟ್ಟೆಯ ನಿಯಮಿತ ಸೇವನೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ, ಕೋಲೀನ್‌ನೊಂದಿಗೆ ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ.  ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಪೂರಕ ಬದಲಾವಣೆಗಳೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಕಣ್ಣಿನ ಆರೋಗ್ಯಕ್ಕೆ ಮೊಟ್ಟೆ ಬೆಸ್ಟ್: ಕಣ್ಣಿನ ಆರೋಗ್ಯಕ್ಕೆ ಮೊಟ್ಟೆ ಬೆಸ್ಟ್ ಎನ್ನುತ್ತದೆ ಅಧ್ಯಯನ. ಮೊಟ್ಟೆಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಿಂದ ರಕ್ಷಿಸುತ್ತದೆ. ನಿಯಮಿತ ಮೊಟ್ಟೆ ಸೇವನೆಯು ಉತ್ತಮ […]

ತಾಮ್ರದ ಬಾಟಲಿಯಲ್ಲಿ ನೀರು ಕುಡಿದು ನೋಡಿ, ಕೆಲವೇ ಸಮಯದಲ್ಲಿ ಗೊತ್ತಾಗುತ್ತೆ ಆರೋಗ್ಯದಲ್ಲಾಗೋ ಈ ಪಾಸಿಟಿವ್ ಬದಲಾವಣೆಗಳು!

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಪ್ರಾಚೀನ ಜೀವನಶೈಲಿಯ ಒಂದು ಭಾಗವಾಗಿತ್ತು.ಇದೊಂದು ಆರೋಗ್ಯಕರ ಮಾರ್ಗ ಎಂದು ಹಿರಿಯರು ನಂಬಿದ್ದರು.  ತಾಮ್ರದಲ್ಲಿಆಂಟಿಮೈಕ್ರೊಬಿಯಲ್  ಗುಣವು ದೇಹದ ಶಕ್ತಿಯನ್ನು ಸಮತೋಲನಗೊಳಿಸುತ್ತದೆ ಎನ್ನುವ ನಂಬಿಕೆ ಇಂದು ನಿನ್ನೆಯದ್ದಲ್ಲ. ಆದರೆ ಕ್ರಮೇಣ ತಾಮ್ರದ ಪಾತ್ರೆಗಳು ಕಾಣೆಯಾದವು, ಮೂಲೆಗುಂಪಾದವು. ಆದರೆ ಈಗ ತಾಮ್ರದ ಟ್ರೆಂಡ್ ಮತ್ತೆ ಶುರುವಾಗಿದೆ. ತಾಮ್ರದ ಬಾಟಲಿಗಳು ಅಥವಾ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವ ಬಳಕೆ ಅಲ್ಲಲ್ಲಿ ಶುರುವಾಗಿದೆ. ಹಾಗಾದ್ರೆ ಬನ್ನಿ ತಾಮ್ರದ ಬಾಟಲಿ ಅಥವಾ ಪಾತ್ರೆಯಲ್ಲಿ ನೀರನ್ನು ಸೇವಿಸುದರಿಂದ ಆಗುವ ಉಪಯೋಗಗಳೇನು ತಿಳಿದುಕೊಳ್ಳೋಣ. […]

ಅಗರಬತ್ತಿ ಹೊಗೆಯಲ್ಲಿದೆ, ಸಿಗರೇಟ್ ಹೊಗೆಗಿಂತಲೂ ಮಾರಕವಾದ ಅಂಶ: ಅಗರಬತ್ತಿ ಹೊಗೆ ಭಾರೀ ಅಪಾಯಕಾರಿ! ಅಧ್ಯಯನ ಬಿಚ್ಚಿಟ್ಟ ಭಯಾನಕ ಸತ್ಯ!

ಧಾರ್ಮಿಕ ಕಾರ್ಯಕ್ರಮಗಳಿಗೆ ಅಗರಬತ್ತಿಗಳನ್ನು ಬಳಸೋದು ಎಲ್ಲೆಡೆ ಮಾಮೂಲು. ಕೆಲವರು ಮನೆ ಮನಸ್ಸು ಪರಿಮಳವಾಗಿರಲಿ ಎನ್ನುವ ಕಾರಣಕ್ಕೂ ಊದುಬತ್ತಿಗಳನ್ನು ಹಚ್ಚಿಡುತ್ತಾರೆ. ಆದರೆ ಊದುಬತ್ತಿಯ ಹೊಗೆಯ ಬಗ್ಗೆ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದ್ದು ಇದರಲ್ಲಿ ಊದುಬತ್ತಿ ಆರೋಗ್ಯದ ಮೇಲೆ ಗಂಭೀರಾದ ಪರಿಣಾಮ ಬೀರುತ್ತೆ ಎನ್ನುವ ಬಗ್ಗೆ ವೈಜ್ಞಾನಿಕ ಅಂಶ ಸಾಬೀತಾಗಿದೆ. ಹೌದು. ದಕ್ಷಿಣ ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನವು, ಅಗರಬತ್ತಿಯ ಹೊಗೆಯು ಸಿಗರೇಟ್ ಧೂಮಕ್ಕಿಂತಲೂ ಹೆಚ್ಚು ವಿಷಕಾರಿ ಎನ್ನುವ ಆತಂಕಕಾರಿ ಮಾಹಿತಿ ದೊರೆತಿದೆ. ಅಂತದ್ದೇನಿದೆ ಅಗರಬತ್ತಿಯಲ್ಲಿ? ಅಗರಬತ್ತಿ ಹೊಗೆಯಲ್ಲಿ […]

ಹೃದಯಾಘಾತದ ಬಗ್ಗೆ ಮೊದಲೇ ಸಿಗುತ್ತೆ ಸುಳಿವು: ಆಗ ನೀವು ಈ ಮುನ್ನೆಚ್ಚರಿಕೆ ಪಾಲಿಸಲೇಬೇಕು

ಹೃದಯಾಘಾತದಿಂದ ಸಾವನ್ನಪ್ಪುವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಹೃದಯಾಘಾತ ಸಡನ್ನಾಗಿ ಕಾಣಿಸಿಕೊಂಡರೂ, ಹೃದಯಾಘಾತದ ಲಕ್ಷಣಗಳು ತಿಂಗಳ ಮೊದಲೇ ಅಥವಾ ಕೆಲವು ವಾರಗಳ ಮೊದಲೇ ಸಣ್ಣದ್ದಾಗಿ ಗೋಚರಿಸಲು ಶುರುವಾಗುತ್ತದಂತೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ನಿರ್ಲಕ್ಷ ಬೇಡ: ಈ ಮುನ್ನೆಚ್ಚರಿಕೆ ಇರಲಿ ಹೃದಯಾಘಾತಕ್ಕೆ ಕಾರಣವಾಗುವವರ ಹಲವಾರು ದೈಹಿಕ, ಭಾವನಾತ್ಮಕ ಲಕ್ಷಣಗಳು ನಮಗೆ ತಿಂಗಳು ಅಥವಾ ಕೆಲವು ವಾರಗಳ ಮುಂಚೆಯೇ ಸಂಕೇತಗಳನ್ನು ಕಳುಹಿಸುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.  ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ಎಂ. ನಾಗೇಶ್ ಅವರ […]

ನೀವು ಚಿಕನ್ ಪ್ರಿಯರೇ? ಕೋಳಿಯ ಕಾಲು ಸವಿಯಲು ಭಾರೀ ಇಷ್ಟನಾ? ಹಾಗಾದ್ರೆ ಒಮ್ಮೆ ಈ ವಿಷ್ಯ ತಿಳ್ಕೊಳ್ಳಿ

ಕೋಳಿ ಮಾಂಸಕ್ಕೆ ನಮ್ಮಲ್ಲಿ ವರ್ಷಪೂರ್ತಿ ಬೇಡಿಕೆ ಇದ್ದೇ ಇರುತ್ತದೆ. ದಿನಾಲೂ ಚಿಕನ್ ತಿನ್ನುವ ನಾನ್ ವೆಜ್ ಪ್ರಿಯರಿಗೇನೂ ಕಡಿಮೆ ಇಲ್ಲ. ಕೋಳಿ ಮಾಂಸದಲ್ಲಿ ಪ್ರೋಟೀನ್ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ತಿನ್ನುವವರೂ ಇದ್ದಾರೆ. ಆದರೆ  ಅತೀಯಾಗಿ ಚಿಕನ್ ತಿನ್ನುವುದರಿಂದ ಹೃದಯಾಘಾತವಾಗುತ್ತದೆ ಎನ್ನುವ ವದಂತಿಯೊಂದು ಈಗ ಹರಿದಾಡುತ್ತಿದೆ. ಆದರೆ ಇದಕ್ಕೆ ಪುರಾವೆ ಏನೂ ಸಿಕ್ಕಿಲ್ಲವಾದರೂ ಅತೀಯಾದ ಚಿಕನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಬಹುತೇಕ ವೈದ್ಯರ ಅಭಿಮತ. ಆದರೆ ಫಾರಂ ಗಳಲ್ಲಿ ಕಡಿಮೆ ಸಮಯದಲ್ಲಿ ಕೋಳಿಯ ತೂಕ ಹೆಚ್ಚಿಸಲು […]