ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಮದ್ರಾಸ್ ಐ ಸೋಂಕು ಹರಡುವಿಕೆ ಆತಂಕ
ವಿಜಯಪುರ/ ಧಾರವಾಡ :ಬಹುತೇಕರಲ್ಲಿ ಐ ಇನ್ಪೆಕ್ಷನ್ ಕಾಣಿಸಿಕೊಳ್ಳುತ್ತಿದ್ದು, ಜನರು ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್ ಸೆಂಟರ್ಗಳೇ ಹೆಚ್ಚಿರುವ ಇರುವ ವಿಜಯಪುರ ಮತ್ತು ಧಾರವಾಡ ನಗರಗಳಲ್ಲಿ ಮದ್ರಾಸ್ ಐ ಭಯ ಮತ್ತಷ್ಟು ಭೀತಿ ಮೂಡಿಸಿದೆ. ಕಾರಣ ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವ, ಹಾಸ್ಟೆಲ್ಗಳಲ್ಲಿ ಇರುವುದರಿಂದ ಮದ್ರಾಸ್ ಐ ಕಾಣಿಸಿಕೊಂಡಿದೆ. ಮದ್ರಾಸ್ ಐ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ರೋಗಿಗಳ ಪೈಕಿ ಶೇ.30 ರಷ್ಟು ಕೋಚಿಂಗ್ಗಾಗಿ ಬಂದ ವಿದ್ಯಾರ್ಥಿಗಳು, ಹಾಸ್ಟೆಲ್ಗಳಲ್ಲಿ ವಾಸವಿದ್ದಾರೆ. ರಾಜ್ಯದಲ್ಲಿ ಕೆಲವೆಡೆ ಕಾಣಿಸಿಕೊಂಡ ಮದ್ರಾಸ್ ಐ […]
ಟೊಮೆಟೊ ಬೆಲೆ ಆಯ್ತು, ಈಗ ಹುಣಸೆಯ ಬೆಲೆಯೂ ಹೆಚ್ಚಳ
ಬೆಂಗಳೂರು: ನೂರರ ಗಡಿಯಲ್ಲಿದ್ದ ಹುಣಸೆ ಬೆಲೆ ಇದೀಗ 200ರ ಗಡಿ ತಲುಪಿದೆ.ಟೊಮೆಟೊ ದರ ಗಗನಕ್ಕೇರಿರುವ ಬೆನ್ನಲ್ಲೇ ಇದೀಗ ಹುಣಸೆ ಹುಳಿ ಬೆಲೆಯೂ ಏಕಾಏಕಿ ಏರಿಕೆಯಾಗುತ್ತಿದೆ. ಇದರಿಂದ ದಿನನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳು ಒಂದೊಂದಾಗಿ ಜನಸಾಮಾನ್ಯರ ಕೈಗೆಟಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ವಾರದಿಂದೀಚೆಗೆ ಕೆಜಿಗೆ 90 ರೂ. ಇದ್ದ ಹುಣಸೆ ಬೆಲೆ ಈಗ 140ರಿಂದ 150 ರೂ.ಗೆ ಮಾರಾಟವಾಗುವ ಮೂಲಕ 50 ರೂ. ಹೆಚ್ಚಳವಾಗಿದೆ. ಇನ್ನು ಅತುಅತ್ತಮ ಗುಣಮಟ್ಟದ ಹುಣಸೆ ದರ 200ರಿಂದ 220 ರೂ ತಲುಪಿದೆ. ವರದಿಗಳ ಪ್ರಕಾರ, ಹುಳಿ ರುಚಿಯನ್ನು ಹೆಚ್ಚು […]
11 ದಿನದಲ್ಲಿ ಬೆಂಗಳೂರಿನಲ್ಲಿ 178 ಡೆಂಘೀ ಪ್ರಕರಣ ದಾಖಲು
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಈ ನಡುವೆ ಡೆಂಘೀ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಜನರು ಈ ಬಗ್ಗೆ ಎಚ್ಚರಿಕೆವಹಿಸುವಂತೆ ಸೂಚಿಸಿದೆ. ನಿಂತ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿ ಹೆಚ್ಚುವ ಹಿನ್ನೆಲೆಯಲ್ಲಿ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ ಎಂದಿದ್ದಾರೆ.ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಪ್ರಕರಣಗಳ ಏರಿಕೆ ಕಂಡಿದ್ದು, ಕಳೆದ 11 ದಿನಗಳಲ್ಲಿ ಒಟ್ಟು 178 ಹೊಸ ಪ್ರಕರಣಗಳು ವರದಿಯಾಗಿದೆ.ಕರ್ನಾಟಕದಲ್ಲಿ 900 ಡೆಂಘೀ ಪ್ರಕರಣಗಳು ದೃಢ ಪಟ್ಟಿದೆ. ಬೆಂಗಳೂರಿನಲ್ಲಿ ಇದುವರೆಗೆ […]
ಇಮ್ಯುನೊಥೆರಪಿಯಿಂದ ಮೂಲಕ ತೀವ್ರ ಹಂತದ ಯಕೃತ್ತಿನ ಕ್ಯಾನ್ಸರ್ ಗುಣ
ಹೈದರಾಬಾದ್: ಯಕೃತ್ತಿನ ಕ್ಯಾನ್ಸರ್ ಮೂರು ಮತ್ತು ನಾಲ್ಕನೇ ಹಂತಕ್ಕೆ ತಲುಪಿದ ರೋಗಿಗಳಲ್ಲಿ ಇಮ್ಯುನೊಥೆರಪಿ ಮೂಲಕ ರೋಗವನ್ನು ಗುಣಪಡಿಸಬಹುದು ಎಂದು ಅಧ್ಯನವೊಂದು ವಿವರಿಸಿದೆ.ಯಕೃತ್ತಿನ ಕ್ಯಾನ್ಸರ್ ಮೂರು ಮತ್ತು ನಾಲ್ಕನೇ ಹಂತಕ್ಕೆ ತಲುಪಿದ ರೋಗಿಗಳಲ್ಲಿ ಇಮ್ಯುನೊಥೆರಪಿ ಮೂಲಕ ರೋಗವನ್ನು ಗುಣಪಡಿಸಬಹುದು ಎಂದು ಅಧ್ಯನವೊಂದರಲ್ಲಿ ಕಂಡುಬಂದಿದೆ. ಈ ಅಧ್ಯಯನದ ವಿವರಗಳನ್ನು INASAL (ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಸ್ಟಡಿ ಆಫ್ ದಿ ಲಿವರ್) ದಿಂದ ಪ್ರಕಟವಾಗುವ ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸ್ಪೆರಿಮೆಂಟಲ್ ಹೆಪಟಾಲಜಿಯಲ್ಲಿ ಪ್ರಕಟಿಸಲಾಗಿದೆ. ಯಕೃತ್ತಿನ ಕ್ಯಾನ್ಸರ್ ಸಾಮಾನ್ಯವಾಗಿ ನಾಲ್ಕನೇ […]
ಟೊಮೊಟೊ ಬೆಲೆ ಸೇಬಿಗಿಂತ ದುಬಾರಿ
ಹಿಮಾಚಲ ಪ್ರದೇಶದಲ್ಲಿ ಇಲ್ಲಿನ ಆರ್ಥಿಕತೆಯ ಜೀವಾಳ. ಇಲ್ಲಿ ಪ್ರತಿ ಕೆಜಿ ಸೇಬು 70 ರಿಂದ 80 ರೂಪಾಯಿ ಬಿಕರಿಯಾಗುತ್ತಿದೆ. ಆದರೆ, ಅದಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ ಸೇಬಿನಂತೆ ಕೆಂಪಾಗಿರುವ ಟೊಮೆಟೊ. ಕೆಜಿ ಟೊಮೆಟೊ 90 ರಿಂದ 100 ರೂಪಾಯಿ ಬೆಲೆ ಇದೆ. ಹೀಗಾಗಿ ಹಿಮಪ್ರದೇಶದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಇದು ಇಲ್ಲಿನ ರೈತರಿಗೆ ಲಾಭವೂ ತಂದುಕೊಡುತ್ತಿದೆ. ಹಿಮಾಚಲ ಪ್ರದೇಶದ ಸೋಲನ್ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಸೇಬಿಗಿಂತ ದುಬಾರಿಯಾಗಿದೆ. ಪ್ರತಿ ಸೇಬು 70ರಿಂದ 80 ರೂಪಾಯಿಗೆ ಮಾರಾಟವಾದರೆ, ಟೊಮೆಟೊ 100ರ […]