ನಿಮಗೆ ಗೊತ್ತಿರಲಿ ಬಿಪಿ ಇದ್ದವರಿಗೆ, ಇಂತಹ ಹಣ್ಣು- ತರಕಾರಿಗಳು ಬಹಳ ಒಳ್ಳೆಯದು!

How to lower blood pressure naturally: ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸುಲಭವಾದ ಮಾರ್ಗವೆಂದರೆ ಆರೋಗ್ಯಕಾರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರವಾದ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ, ಈ ಕಾಯಿಲೆಯನ್ನು ಅಚ್ಚುಕಟ್ಟಾಗಿ ನಿಯಂತ್ರಿಸಬಹುದು. ವೈದ್ಯರೇ ಹೇಳುವ ಪ್ರಕಾರ ಮನುಷ್ಯನ ರಕ್ತಸಂಚಾರದಲ್ಲಿ ಯಾವತ್ತಿಗೂ ಕೂಡ ಏರುಪೇರು ಉಂಟಾಗಬಾರದು. ಒಂದು ವೇಳೆ ರಕ್ತದಲ್ಲಿ ಏರುಪೇರು ಉಂಟಾದರೆ, ಅಧಿಕ ರಕ್ತದೊತ್ತಡದಂತಹ ಕಾಯಿಲೆ, ಕಂಡು ಬರಲು ಶುರು ವಾಗುತ್ತದೆ. ಅದರಲ್ಲೂ ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ […]
Udupi:ಮಹಿಳೆಯರಿಗಾಗಿ ಏಂಜೆಲ್ಸ್ zumba ಫಿಟ್ ನೆಸ್ ಕ್ಲಾಸ್

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ನ 5 ನೇ ಮಹಡಿಯಲ್ಲಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 11.30 ಮತ್ತು ಸಂಜೆ 6.30 ರಿಂದ 7.30 ರವರೆಗೆ ಮಹಿಳೆಯರಿಗಾಗಿ zumba ಫಿಟ್ ನೆಸ್ ತರಗತಿಗಳು ನಡೆಯುತ್ತಿದ್ದು ಆಸಕ್ತರು 9380323108 ಅನ್ನು ಸಂಪರ್ಕಿಸಬಹುದು. https://g.co/kgs/dW2VsH https://instagram.com/ange_lsfitness?igshid=MzRlODBiNWFlZA==
ಆರೋಗ್ಯವೇ ಭಾಗ್ಯ: ನಿಮ್ಮ ಕುಟುಂಬಕ್ಕಾಗಿ ಸರಿಯಾದ ಆರೋಗ್ಯ ವಿಮೆಯನ್ನೇ ಆಯ್ಕೆ ಮಾಡಿಕೊಳ್ಳಿ

ಆರೋಗ್ಯವೇ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಆರೋಗ್ಯವನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಾಕೃತಿಕವಾಗಿ ಕಾಪಾಡಿಕೊಂಡರೆ ಒಳಿತು. ಆದಾಗ್ಯೂ, ಕೆಲವೊಮ್ಮೆ ಕೈಮೀರಿದ ಸಂದರ್ಭಗಳಲ್ಲಿ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಬೇಕಾಗಿ ಚಿಕಿತ್ಸೆ ಪಡೆದುಕೊಂಡಾಗ ಕೈಗೆ ನೀಡಲಾಗುವ ಆಸ್ಪತ್ರೆ ಬಿಲ್ ಗಳನ್ನು ಕಂಡು ಮತ್ತೊಮ್ಮೆ ಆಸ್ಪತ್ರೆ ಸೇರುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಇಂತಹ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳಲು ಹೆಲ್ತ್ ಇನ್ಶೂರೆನ್ಸ್(ಆರೋಗ್ಯ ವಿಮೆ)ಗಳನ್ನು ಮಾಡಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ತರಹೇವಾರಿ ಆರೋಗ್ಯ ವಿಮೆಗಳಿದ್ದು ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲ ಎಲ್ಲರನ್ನೂ ಕಾಡುತ್ತವೆ. ಕಂಪನಿಗಳು ಕೂಡಾ […]
ಮನೆಯೊಳಗಿನ ರಾಸಾಯನಿಕಗಳನ್ನು ತೊಡೆದು ಗಾಳಿಯನ್ನು ಶುದ್ದೀಕರಿಸುವ ಕಡಿಮೆ ಖರ್ಚಿನ ಒಳಾಂಗಣ ಸಸ್ಯಗಳು

ಮನೆಯ ಒಳಾಂಗಣದಲ್ಲಿ ಬೆಳೆಸುವ ಗಿಡಗಳು ಗಾಳಿಯಿಂದ ಹಾನಿಕಾರಕ ವಿಷವನ್ನು ಹೀರಿಕೊಳ್ಳುತ್ತವೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ 1989 ರಲ್ಲಿ ಕಂಡುಕೊಂಡಿದೆ. ವಿಶೇಷವಾಗಿ ಕಡಿಮೆ ಗಾಳಿಯ ಹರಿವಿನೊಂದಿಗೆ ಸುತ್ತುವರಿದ ಸ್ಥಳಗಳಲ್ಲಿ ಈ ಗಿಡಗಳನ್ನು ಬೆಳೆಸುವುದು ಗಾಳಿಯನ್ನು ಶುದ್ದೀಕರಿಸುತ್ತದೆ ಎಂದು ನಾಸಾ ಕಂಡುಕೊಂಡಿದೆ. ಈ ಅಧ್ಯಯನವು ಒಳಾಂಗಣ ಸಸ್ಯಗಳು ಮತ್ತು ಅವುಗಳ ಗಾಳಿಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯಗಳ ಬಗ್ಗೆ ಹೊಸ ಅಧ್ಯಯನಗಳಿಗೆ ಆಧಾರವಾಗಿದೆ. ಸಸ್ಯಗಳು ಹೆಚ್ಚು ನೈಸರ್ಗಿಕ, ವೆಚ್ಚ ಪರಿಣಾಮಕಾರಿ ಮತ್ತು ಚಿಕಿತ್ಸಕ ವಾಯು ಶುದ್ದಿಕಾರಕಗಳಾಗಿವೆ. ಒಳಾಂಗಣ ಸಸ್ಯಗಳ ಪ್ರಯೋಜನಗಳು […]
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ

ಡಿ.22 ರಂದು ಉತ್ತರಾಯಣವು ಆರಂಭವಾಗಿದ್ದು, ದೇಶದ ಹಲವು ರಾಜ್ಯಗಳು ಚಳಿಗಾಲವನ್ನು ಎದುರಿಸಲು ಸಜ್ಜಾಗುತ್ತಿವೆ. ಚಳಿಗಾಲದಲ್ಲಿ ಚರ್ಮ, ಕೂದಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ. ಮಾತ್ರವಲ್ಲದೆ, ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳು ಬರುತ್ತಿದ್ದು, ಭಾರತವೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ದಿನನಿತ್ಯದ ಆಹಾರಪದ್ದತಿಯಲ್ಲಿ ಅಳವಡಿಸಿಕೊಳ್ಳುವುದು ಕ್ಷೇಮ. ಚಳಿಗಾಲದಲ್ಲಿ ಸೇವಿಸಬಹುದಾದ ಆಹಾರಗಳು ಬೆಲ್ಲ ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದ ಭಾಗವಾಗಿಸುವುದು ಉಪಯುಕ್ತ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, […]