ಎಸ್.ಎಫ್. ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿ: ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್. ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನದಡಿ ಪರಿಶಿಷ್ಟ ಜಾತಿಗೆ ಒಳಚರಂಡಿ ಜೋಡಣೆ, ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ನವೀಕರಣ, ಪರಿಶಿಷ್ಟ ಪಂಗಡಕ್ಕೆ ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ನವೀಕರಣ, ನಳ್ಳಿ ನೀರಿನ ಜೋಡಣೆ, ಶೌಚಾಲಯ ನಿರ್ಮಾಣ ಮತ್ತು ಸ್ವಂತ ಉದ್ಯೋಗ ಹೊಂದಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ […]
ಉದ್ಯೋಗ ಇಲಾಖೆ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಸಾಫ್ಟ್ ಸ್ಕಿಲ್ಸ್, ಬೇಸಿಕ್ ಕಂಪ್ಯೂಟರ್ ಮತ್ತು ಕನ್ನಡನುಡಿ ಟೈಪಿಂಗ್ ತರಬೇತಿಯನ್ನು ಪಡೆಯಲು ಯುವಕರು, ಯುವತಿಯರು ಹಾಗೂ ವಿದ್ಯಾರ್ಥಿಗಳು ನೋಂದಣಿ ಮಾಡಬಹುದಾಗಿದೆ. ತರಬೇತಿಯು ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಮೊ.ನಂ: 8197440155 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿ: ಪುಸ್ತಕ ಬಹುಮಾನಕ್ಕೆ ಜಾನಪದ ಕೃತಿಗಳ ಆಹ್ವಾನ

ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ 2021 ರ ಜನವರಿ 1 ರಿಂದ ಡಿಸೆಂಬರ್ 31 ರ ವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ ಹಾಗೂ ಜನಪದ ಸಂಕೀರ್ಣ ಪ್ರಕಾರಗಳ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿ ಲೇಖಕರು, ಪ್ರಕಾಶಕರು ಹಾಗೂ ಸಂಪಾದಕರಿಂದ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಪುಸ್ತಕಗಳನ್ನು ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, […]
ಭಾರತೀಯ ಅಂಚೆ ಇಲಾಖೆಯ ವತಿಯಿಂದ ಪತ್ರ ಲೇಖನ ಸ್ಪರ್ಧೆ

ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ 18 ವರ್ಷ ಮೇಲ್ಪಟ್ಟವರಿಗೆ, ‘ವಿಶನ್ ಫಾರ್ ಇಂಡಿಯಾ 2047’ ಎಂಬ ವಿಷಯದ ಕುರಿತು ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಪತ್ರಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಅಂತರ್ದೇಶೀಯ ಪತ್ರದಲ್ಲಿ ಬರೆದ ಕೈಬರಹದ ಪ್ರತಿಯನ್ನು ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಇವರಿಗೆ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.indiapost.gov.in, www.karnatakapost.gov.in ಅಥವಾ ದೂರವಾಣಿ ಸಂಖ್ಯೆ: 0820-2521780 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ವಿಭಾಗದ […]
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಾತಿ: ಬನ್ನಂಜೆ ಕಚೇರಿ ಭಾನುವಾರವೂ ಕಾರ್ಯಾಚರಣೆ

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಉಡುಪಿಯ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಪ್ರವೇಶಾತಿಗಳು ನಡೆಯುತ್ತಿರುವ ಹಿನ್ನೆಲೆ, 2 ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರದಂದು ಬನ್ನಂಜೆಯಲ್ಲಿರುವ ಪ್ರಾದೇಶಿಕ ಕೇಂದ್ರ ಕಚೇರಿ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.