ಸ್ಟಾಫ್ ಸೆಲೆಕ್ಷನ್ ಕಮೀಷನ್: ದೆಹಲಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ಚಾಲಕರ ಹುದ್ದೆಗೆ ಆನ್ಲೈನ್ ಅರ್ಜಿ ಆಹ್ವಾನ

ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರದ ವತಿಯಿಂದ ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಚಾಲಕರ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ, 21 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ www.ssckkr.kar.nic.in, https://ssc.nic.in, ಸಹಾಯವಾಣಿ ಸಂಖ್ಯೆ: 080-25502520, ಮೊ.ನಂ: 9483862020 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ […]
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೇನಾ ತರಬೇತಿ: ಅರ್ಜಿ ಆಹ್ವಾನ

ಉಡುಪಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಭಾರತೀಯ ಸೇನೆ ಹಾಗೂ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3 (ಬಿ) ಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಇಲಾಖಾ ವೆಬ್ಸೈಟ್ https://bcwd.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ […]
ಬೂದು ನೀರು ನಿರ್ವಹಣೆ ಕುರಿತ ಕಿರು ಚಿತ್ರ ನಿರ್ಮಾಣ ಸ್ಪರ್ಧೆ

ಉಡುಪಿ: ಜಿಲ್ಲಾ ಪಂಚಾಯತ್ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲಿ ಬೂದು ನೀರು ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜೀವ ಜಲ-ಜಲ ನಿಧಿ ವಿಷಯದ ಬಗ್ಗೆ ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಕನ್ನಡ, ತುಳು ಹಾಗೂ ಆಂಗ್ಲ ಭಾಷೆಯಲ್ಲಿ ಆಯೋಜಿಸಲಾಗಿದೆ. ಸಿದ್ಧಪಡಿಸಿದ ವೀಡಿಯೋಗಳನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾ) ಇ-ಮೇಲ್ [email protected] ಗೆ ಸಲ್ಲಿಸಲು ಆಗಸ್ಟ್ 18 ಕೊನೆಯ ದಿನ. ಪ್ರಶಸ್ತಿಯು ನಗದು ಬಹುಮಾನ ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ: […]
ಅತಿವೃಷ್ಟಿಯಿಂದ ಬೆಳೆ ಹಾನಿ: ಮರುಬಿತ್ತನೆಗೆ ಅಲ್ಪಾವಧಿ ತಳಿಗಳ ಬೀಜ ಲಭ್ಯ

ಉಡುಪಿ: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಉಂಟಾದ ಅತಿವೃಷ್ಠಿಯಿಂದಾಗಿ ಭತ್ತದ ಬೆಳೆ ಹಾನಿಯಾಗಿದ್ದು, ಭತ್ತದ ಬೆಳೆ ಹಾನಿಯಾದ ತಾಕುಗಳಲ್ಲಿ ರೈತರು ಅಲ್ಪಾವಧಿ ತಳಿಗಳಾದ ಜ್ಯೋತಿ ಹಾಗೂ ಮಧ್ಯಮಾವಧಿ ತಳಿಯಾದ ಉಮಾ ಬಿತ್ತನೆ ಬೀಜಗಳನ್ನು ಮರುಬಿತ್ತನೆಗೆ ಬಳಸಬಹುದಾಗಿದ್ದು, ಈ ತಳಿಗಳ ಬಳಕೆಯಿಂದ ನಿಗದಿತ ಅವಧಿಯಲ್ಲಿ ಬೆಳೆ ಪಡೆದು ಕಟಾವು ಕಾರ್ಯ ಕೈಗೊಳ್ಳಬಹುದಾಗಿದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜವನ್ನು ಪಡೆಯದ ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ, ಅಲ್ಪಾವಧಿ ತಳಿಗಳನ್ನು ಪಡೆದು ಮರು ಬಿತ್ತನೆ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ […]
ಕಾಪು ಸರ್ಕಾರಿ ಪಾಲಿಟೆಕ್ನಿಕ್: ಪ್ರವೇಶಾತಿ ಅವಧಿ ವಿಸ್ತರಣೆ

ಉಡುಪಿ: ಕಾಪುವಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸುಗಳಿಗೆ ಕಡಿಮೆ ಪ್ರವೇಶ ಶುಲ್ಕದೊಂದಿಗೆ ಪ್ರವೇಶ ದಾಖಲಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 30 ರ ವರೆಗೆ ವಿಸ್ತರಿಸಲಾಗಿದೆ. ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ. 35 ಅಂಕ ಪಡೆದಿರುವ ಅರ್ಹ ಅಭ್ಯರ್ಥಿಗಳು ಆಟೋಮೇಷನ್ ಅಂಡ್ ರೊಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಅಂಡ್ ಬಿಗ್ ಡೇಟಾ ಎಂಬ ಕೋರ್ಸುಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ನೇರವಾಗಿ […]