ಜೀವರಕ್ಷಕ ಸಿಬ್ಬಂದಿಗಳ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಜಿಲ್ಲೆಯ ಮಲ್ಪೆ ಬೀಚ್ ಹಾಗೂ ತ್ರಾಸಿ ಮರವಂತೆ ಬೀಚ್‌ಗಳಲ್ಲಿ ಜೀವರಕ್ಷಕ ಸಿಬ್ಬಂದಿಗಳನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿಯೋಜಿಸಲು ಉದ್ದೇಶಿಸಿದ್ದು, ಜಿಲ್ಲೆಯಲ್ಲಿ ಜೀವರಕ್ಷಕ ತರಬೇತಿ ಹೊಂದಿರುವ ಸಿಬ್ಬಂದಿಗಳಿoದ ಸದರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 14,958 ವೇತನದೊಂದಿಗೆ ಪಿ.ಎಫ್ ಹಾಗೂ ಇ.ಎಸ್.ಐ ಸೌಕರ್ಯ ಕಲ್ಪಿಸಲಾಗುವುದು. ಬೀಚ್ ಜೀವರಕ್ಷಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿರುವ ಕನಿಷ್ಟ 18 ರಿಂದ 40 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ. […]

ಮಣಿಪಾಲದ MSDC ಯಲ್ಲಿದೆ ಕಂಟೆಂಟ್ ಮಾರ್ಕೆಟಿಂಗ್ ಇಂಟರ್ನ್ ಹುದ್ದೆ: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ಕಂಟೆಂಟ್ ಮಾರ್ಕೆಟಿಂಗ್ ಇಂಟರ್ನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೋಶಿಯಲ್ ಮೀಡಿಯಾ ವಿಷಯ ಸೃಷ್ಟಿಯಲ್ಲಿ ಆಸಕ್ತಿ ಹೊಂದಿರುವ, ಆತ್ಮವಿಶ್ವಾಸಿ ಮತ್ತು ಕ್ಯಾಮೆರಾ ಮುಂದೆ ಸಹಜವಾಗಿ ಕಾಣುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳ ವಯೋಮಿತಿ 18ರಿಂದ 25 ವರ್ಷಗಳೊಳಗಿರಬೇಕು. ಇಂಗ್ಲಿಷ್ ಸಂವಹನ ಬೇಕೇ ಬೇಕು. ಉದ್ಯೋಗ ಸ್ಥಳ ಮಣಿಪಾಲವಾಗಿದ್ದು ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿಯನ್ನು [email protected] ಗೆ ಕಳುಹಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ +91 81231 65069 ಸಂಪರ್ಕಿಸಬಹುದು.

ಉಡುಪಿ: ಸಮಾಲೋಚಕ ಹುದ್ದೆ- ಅರ್ಜಿ ಆಹ್ವಾನ

ಉಡುಪಿ: ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಯೋಜನಾ ಸಂಯೋಜಕ-1 (ಯಾವುದೇ ಸ್ನಾತಕ್ಕೋತ್ತರ ಪದವಿ) ಹಾಗೂ ಆಪ್ತ ಸಮಾಲೋಚಕ-3 (ಎಂ ಎಸ್ ಡಬ್ಲ್ಯೂ) ಹುದ್ದೆಗಳ ನೇಮಕಾತಿಗಾಗಿ ಅರ್ಹ ವಿದ್ಯಾರ್ಹತೆ ಹೊಂದಿದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಎಪ್ರಿಲ್ 13 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬನ್ನಂಜೆ ದೂ.ಸಂ;0820-2526394 ಇಲ್ಲಿ ಖುದ್ದಾಗಿ ಅಥವಾ ಇ-ಮೇಲ್ [email protected] ಅನ್ನು ಸಂಪರ್ಕಿಸಬಹುದು ಎಂದು ಹಿರಿಯ ನಾಗರಿಕರ ಸಹಾಯವಾಣಿ […]

ಉಡುಪಿ: ‘Female Office Assistant’ ಹುದ್ದೆಗೆ ನೇಮಕಾತಿ.

ಉಡುಪಿ: ಉಡುಪಿ ಕಿನ್ನಿ ಮುಲ್ಕಿಯಲ್ಲಿರುವ ಪ್ರತಿಷ್ಠಿತ ಪೃಥ್ವಿ ಏಜೆನ್ಸ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಮಳಿಗೆಗೆ Female Office Assistant ಹುದ್ದೆಗೆ ಯುವತಿಯರು ಬೇಕಾಗಿದ್ದಾರೆ. ಆಕರ್ಷಕ ವೇತನ ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ರೆಸ್ಯೂಮ್ ‌ಅನ್ನು ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಕಳಿಸಬಹುದು.ಮೊ: 9845243328,[email protected]

ಸ್ವರ್ಣ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ

ಉಡುಪಿ: ಸ್ವರ್ಣ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆಅನುಭವ ಇರುವವರು ಅಥವಾ ಫ್ರೆಶರ್ಸ್ ಅರ್ಜಿ ಸಲ್ಲಿಸಬಹುದು. ಊಟ ಮತ್ತು ವಸತಿ ಸೌಲಭ್ಯವಿದೆ. ಸಂದರ್ಶನದ ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ನೀಡಲಾಗುವುದು. ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ವಾಟ್ಸಪ್ ಅಥವಾ ಇಮೇಲ್ ಮಾಡಿ. .ಸ್ಥಳ : ಉಡುಪಿ, ಕುಂದಾಪುರ, ಮಂಗಳೂರುಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ವಾಟ್ಸಪ್ ಅಥವಾ ಇಮೇಲ್ ಮಾಡಿ. 📞 7483255496 ಅಥವಾ 📩 [email protected]