ಇಸ್ರೇಲ್-ಹಮಾಸ್ ಸಂಘರ್ಷ: ತಕ್ಷಣದ ಮಾನವೀಯ ಕದನ ವಿರಾಮದ ಬೇಡಿಕೆ ಪರ ಮತ ಚಲಾಯಿಸಿದ ಭಾರತ

ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ಮಂಗಳವಾರ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ತಕ್ಷಣದ ಮಾನವೀಯ ಕದನ ವಿರಾಮದ ಬೇಡಿಕೆಯ ನಿರ್ಣಯವನ್ನು ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ತೀನ್ ಸೇರಿದಂತೆ ಹಲವಾರು ದೇಶಗಳು ಪ್ರಾಯೋಜಿಸಿದ್ದವು. ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಇಸ್ರೇಲ್ ಸೇರಿದಂತೆ ಹತ್ತು ದೇಶಗಳು […]

ಧ್ವನಿಯ ವೇಗಕ್ಕಿಂತ ಹೆಚ್ಚು ವೇಗವಾಗಿ ಹಾರುವ X-59 ಸೂಪರ್ಸಾನಿಕ್ ವಿಮಾನದ ಮೊದಲ ಹಾರಾಟಕ್ಕೆ ನಾಸಾ ಸಜ್ಜು

ವಾಷಿಗ್ಟನ್ ಡಿಸಿ: ನಾಸಾ(NASA) ದ ಕ್ವೆಸ್ಟ್ ಮಿಷನ್ ತನ್ನ X-59 ಸೂಪರ್ಸಾನಿಕ್ ವಿಮಾನದ ನಿಗದಿತ ಮೊದಲ ಹಾರಾಟವನ್ನು ಜ.12, 2024 ಕ್ಕೆ ನಿಗದಿಪಡಿಸಿದೆ. ಈ ವಿಮಾನವನ್ನು ಧ್ವನಿಯ ವೇಗಕ್ಕಿಂತ ಹೆಚ್ಚು ವೇಗವಾಗಿ ಹಾರಲು ವಿನ್ಯಾಸಗೊಳಿಸಲಾಗಿದೆ ಎಂದು ನಾಸಾ ಹೇಳಿದೆ. ಪ್ರಧಾನ ಗುತ್ತಿಗೆದಾರ ಲಾಕ್‌ಹೀಡ್ ಮಾರ್ಟಿನ್ ಸ್ಕಂಕ್ ವರ್ಕ್ಸ್‌ ಸಹಯೋಗದೊಂದಿಗೆ ನಾಸಾದ ಇಂಜಿನಿಯರ್ ಗಳು ಈ ಅತ್ಯಪೂರ್ವ ಸೂಪರ್ಸಾನಿಕ್ ವಿಮಾನವನ್ನು ಅಭಿವೃದ್ದಿಪಡಿಸಿದ್ದಾರೆ. ವಿಮಾನದ ವಿನ್ಯಾಸದ ಜೊತೆಗೆ, X-59 ಹೊಸ ತಂತ್ರಜ್ಞಾನವನ್ನು ಅನೇಕ ಅದಾಗಲೇ ಸ್ಥಾಪಿತ ವಿಮಾನಗಳ ಸಿಸ್ಟಮ್‌ಗಳು ಮತ್ತು […]

12 ಲಕ್ಷ ಪ್ರವಾಸಿಗರ ಭೇಟಿ, $1.8 ಶತಕೋಟಿ ಆದಾಯ: ಚೇತರಿಕೆಯತ್ತ ಶ್ರೀಲಂಕಾ ಪ್ರವಾಸೋದ್ಯಮ

ಕೊಲಂಬೊ : ಪ್ರವಾಸೋದ್ಯಮದಿಂದ ದೇಶಕ್ಕೆ ಬಂದ ಆದಾಯ 2023 ರ ನವೆಂಬರ್​ನಲ್ಲಿ 205.3 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದ್ದು, ಇದು 2022 ರ ನವೆಂಬರ್​ನಲ್ಲಿ ಬಂದಿದ್ದ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.ಶ್ರೀಲಂಕಾ ಈ ವರ್ಷದ ನವೆಂಬರ್​ವರೆಗೆ ಪ್ರವಾಸೋದ್ಯಮದಿಂದ 1.8 ಶತಕೋಟಿ ಡಾಲರ್ ಆದಾಯ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶದ ಪ್ರವಾಸೋದ್ಯಮ ಆದಾಯ ಶೇ 78.3ರಷ್ಟು ಹೆಚ್ಚಳವಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ (ಸಿಬಿಎಸ್‌ಎಲ್) ಅಂಕಿಅಂಶಗಳು ತಿಳಿಸಿವೆ.ಶ್ರೀಲಂಕಾದ ಪ್ರವಾಸೋದ್ಯಮ […]

ಕದನವಿರಾಮ ನಿರ್ಣಯಕ್ಕೆ ವೀಟೋ; ಯುಎಸ್ ಕ್ರಮಕ್ಕೆ ವಿಶ್ವದ ರಾಷ್ಟ್ರಗಳ ಖಂಡನೆ

ವಿಶ್ವಸಂಸ್ಥೆ :”ಎರಡು ತಿಂಗಳ ಹೋರಾಟವು ಈಗಾಗಲೇ ಅಗಾಧ ಪ್ರಮಾಣದ ಸಾವು ಮತ್ತು ವಿನಾಶಕ್ಕೆ ಕಾರಣವಾಗಿದೆ ಮತ್ತು ತಕ್ಷಣದ ಕದನ ವಿರಾಮ ಈಗಿನ ತುರ್ತು ಅಗತ್ಯವಾಗಿದೆ” ಎಂದು ಜಾಂಗ್ ಹೇಳಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಚೀನಾದ ಖಾಯಂ ಪ್ರತಿನಿಧಿ ಜಾಂಗ್ ಜುನ್, “ಕರಡನ್ನು ಯುಎಸ್ ವೀಟೋ ಮಾಡಿರುವುದಕ್ಕೆ ನಾವು ತೀವ್ರ ನಿರಾಶೆ ಮತ್ತು ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದ್ದಾರೆ. ಗಾಝಾದಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮವನ್ನು ಕೋರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ಅಮೆರಿಕ […]

ವೀಟೋ ಚಲಾಯಿಸಿದ ಅಮೆರಿಕ : ಗಾಜಾದಲ್ಲಿ ಕದನ ವಿರಾಮ ಪ್ರಸ್ತಾಪ ವಿಶ್ವಸಂಸ್ಥೆಯಲ್ಲಿ ತಿರಸ್ಕೃತ

ನ್ಯೂಯಾರ್ಕ್ (ಅಮೆರಿಕ) : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಸ್ತುತಪಡಿಸಿದ ಈ ನಿರ್ಣಯದಲ್ಲಿ “ಗಾಜಾದಲ್ಲಿ ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಮತ್ತು ಎಲ್ಲ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು” ಎಂಬ ಬೇಡಿಕೆ ಇಡಲಾಗಿತ್ತು. ಆದರೆ, ಈ ಪ್ರಸ್ತಾಪಕ್ಕೆ ಅಮೆರಿಕ ಅಡ್ಡಿಪಡಿಸಿದೆ. ಇದರಿಂದಾಗಿ ಪ್ರಸ್ತಾಪವನ್ನು ಅಮೆರಿಕ ಭದ್ರತಾ ಮಂಡಳಿಯಲ್ಲಿ ಅಂಗೀಕರಿಸಲಾಗಲಿಲ್ಲ. ಇಸ್ರೇಲ್ ಮತ್ತು ಹಮಾಸ್ ನಡುವೆ ಕಳೆದ 2 ತಿಂಗಳಿಗೂ ಹೆಚ್ಚು ದಿನದಿಂದ ಯುದ್ಧ ನಡೆಯುತ್ತಿದೆ. ಈ ನಡುವೆ ಒಂದು ವಾರ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ಒಂದು ವಾರದ ಬಳಿಕ […]