ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ವಿಧಿವಶ
ರೋಮ್ : ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಮಿಲಾನ್ನ ಸ್ಯಾನ್ ರಾಫೆಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಏಪ್ರಿಲ್‌ನಲ್ಲಿ ದೀರ್ಘಕಾಲದ ಲ್ಯುಕೇಮಿಯಾ ಪ್ರಕರಣಕ್ಕೆ ಸಂಬಂಧಿಸಿದ ಶ್ವಾಸಕೋಶದ ಸೋಂಕಿಗೆ ಬೆರ್ಲುಸ್ಕೋನಿ ಚಿಕಿತ್ಸೆ ಪಡೆದಿದ್ದಾರೆ ಎಂದು ಇಟಲಿಯ ಮಾಧ್ಯಮ ವರದಿಗಳು ತಿಳಿಸಿವೆ. ಪ್ರಖ್ಯಾತ ಬಿಲಿಯನೇರ್ ಮಾಧ್ಯಮ ಉದ್ಯಮಿ ಬರ್ಲುಸ್ಕೋನಿ 1994 ರಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದರು ಮತ್ತು 2011 ರವರೆಗೆ ನಾಲ್ಕು ಬಾರಿ ಪ್ರಧಾನಿಯಾಗಿದ್ದರು. .ಸಿಲ್ವಿಯೊ ಬೆರ್ಲುಸ್ಕೋನಿ ಮಿಲಾನ್ನಲ್ಲಿ 29 ಸೆಪ್ಟೆಂಬರ್ 1936 ರಂದು […]
ಜೇಮ್ಸ್ ವೆಬ್ ಟೆಲಿಸ್ಕೋಪ್ ನಿಂದ ಬ್ರಹ್ಮಾಂಡದ ಆರಂಭಿಕ 700 ಗೆಲಾಕ್ಸಿಗಳನ್ನ ಪತ್ತೆ
ವಾಷಿಂಗ್ಟನ್: ಬ್ರಹ್ಮಾಂಡ ಆರಂಭಿಕ ಹಂತದಲ್ಲಿದ್ದಾಗ ಸುಮಾರು 700 ಗೆಲಾಕ್ಸಿಗಳಿದ್ದವು ಎಂಬ ಅಂಶವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಪತ್ತೆ ಹಚ್ಚಿದೆ. ಜೇಮ್ಸ್ ವೆಬ್ ಟೆಲಿಸ್ಕೋಫ್ ಬ್ರಹಾಂಡ ತನ್ನ ಆರಂಭಿಕ ಹಂತದಲ್ಲಿದ್ದಾಗ ಜನಿಸಿದ ಸುಮಾರು 700 ಕ್ಕೂ ಹೆಚ್ಚು ಗೆಲಾಕ್ಸಿಗಳು ಹಾಗೂ ನಕ್ಷತ್ರಗಳನ್ನು ಪತ್ತೆ ಹಚ್ಚಿದೆ. ಈ ವಿಚಾರ ಈ ಮೊದಲು ತಿಳಿದಿರಲಿಲ್ಲ ಎಂಬ ಅಂಶ ಗಮನಾರ್ಹವಾಗಿದೆ. ಬಿಗ್ ಬ್ಯಾಂಗ್ ನಂತರ ಲಕ್ಷಾಂತರ ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಗೆಲಾಕ್ಸಿಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇದು ರಿಯೊನೈಸೇಶನ್ ಯುಗ ಎಂದು […]
2023 ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್
ಬ್ಯಾಂಕಾಕ್ (ಥಾಯ್ಲೆಂಡ್): ಥಾಯ್ಲೆಂಡ್ ರಾಜಧಾನಿ ಹುವಾಮಾರ್ಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮಲೇಷ್ಯಾ ಎದುರಾಳಿಯನ್ನು 21-19, 21-11 ಸೆಟ್‌ಗಳಿಂದ ಸೋಲಿಸಿದರು. ಶನಿವಾರ ಚೀನಾದ ಲು ಗುವಾಂಗ್ ಜು ಮತ್ತು ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ಎದುರಾಗುತ್ತಿದ್ದು, ಇದರಲ್ಲಿ ಗೆದ್ದವರ ಜೊತೆ ಲಕ್ಷ್ಯ ಸೇನ್ ಆಡಲಿದ್ದಾರೆ. ಲಕ್ಷ್ಯ ಸೇನ್ ಲಿಯಾಂಗ್ ಜುನ್ ಹಾವೊ ವಿರುದ್ಧ ತೀವ್ರ ಪೈಪೋಟಿಯನ್ನು ಎದುರಿಸಿದರು. 10-10ರ ಸಮಬಲದಲ್ಲಿ ಇಬ್ಬರ ಹೋರಾಟ ಮುಂದುವರೆದಿತ್ತು. ನಂತರ ಲಿಯಾಂಗ್ ಜುನ್ ಹಾವೊ ಆರು ಅಂಕಗಳ ಮುನ್ನಡೆ ಪಡೆದುಕೊಂಡರು. ಆದರೆ, ಮುನ್ನಡೆಯನ್ನು […]