140 ವರ್ಷಗಳಲ್ಲಿಯೇ ಚೀನಾ ರಾಜಧಾನಿ ಬೀಜಿಂಗ್​ನಲ್ಲಿ ಅತ್ಯಧಿಕ ಮಳೆ; 20 ಸಾವು

ಬೆಂಗಳೂರು: ದಕ್ಷಿಣ ಚೀನಾದ ಪ್ರಾಂತ್ಯಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾದ ಡೊಕ್ಸುರಿ ಚಂಡಮಾರುತ ನಂತರ ಉತ್ತರಕ್ಕೆ ಚಲಿಸಿದ್ದರಿಂದ ಸುರಿದ ಮಳೆಯಿಂದಾಗಿ ಉತ್ತರ ಚೀನಾ ಪ್ರವಾಹದಲ್ಲಿ ಮುಳುಗಿದೆ. ಬೀಜಿಂಗ್ ಮತ್ತು ಹೆಬೈ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳು ತೀವ್ರ ಪ್ರವಾಹಕ್ಕೆ ತುತ್ತಾಗಿದ್ದು, ನೀರು ಅಪಾಯಕಾರಿ ಮಟ್ಟಕ್ಕೆ ಏರಿದೆ. ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಡಿಯುವ ನೀರು ಪೂರೈಸುವ ಪೈಪ್‌ಗಳು ಸಹ ಹಾಳಾಗಿವೆ.ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕಳೆದ 140 ವರ್ಷಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದು […]

ಉಕ್ರೇನ್: ಮಾಸ್ಕೋ ರಷ್ಯಾದ ರಾಜಧಾನಿ ಮೇಲೆ ಡ್ರೋನ್ ದಾಳಿ

ಮಾಸ್ಕೋ (ರಷ್ಯಾ):  ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್‌ ದಾಳಿ ನಡೆಸಿದ್ದು 2 ಕಟ್ಟಡಗಳಿಗೆ ಹಾನಿಯುಂಟಾಗಿದೆ.ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಅವರು ನಗರದಲ್ಲಿ ಉಕ್ರೇನಿಯನ್ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಹೇಳಿದ್ದಾರೆ.  ಉಕ್ರೇನಿಯನ್ ಡ್ರೋನ್ ದಾಳಿ ನಡೆದಿದೆ. ಮಾಸ್ಕೋ ನಗರದಲ್ಲಿ ಎರಡು ಕಚೇರಿ ಕಟ್ಟಡಗಳ ಮುಂಭಾಗಗಳು ಸ್ವಲ್ಪ ಹಾನಿಗೊಳಗಾಗಿವೆ. ಯಾವುದೇ ಸಾವು-ನೋವು ವರದಿಯಾಗಿಲ್ಲ” ಎಂದು ಅವರು ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ […]

60 ಕೋಟಿ ವರ್ಷಗಳಷ್ಟು ಹಳೆಯದಾದ ಸಾಗರವನ್ನು ಹಿಮಾಲಯದಲ್ಲಿ ಕಂಡುಹಿಡಿದ ಭಾರತ, ಜಪಾನ್ ವಿಜ್ಞಾನಿಗಳು!

ಹಿಮಾಲಯ ಪರ್ವತಗಳು (Himalayan Mountain) ಸಾಕಷ್ಟು ವಿಸ್ಮಯಗಳಿಂದ ಕೂಡಿರುವ ತಾಣ. ಇದು ಪ್ರವಾಸಿಗರಿಗೆ (Tourist) ಆಕರ್ಷಣೆಯ ಕೇಂದ್ರವಾಗಿದ್ದರೆ, ವಿಜ್ಞಾನಿಗಳ ಪಾಲಿಗೆ ಸಂಶೋಧನೆಗೆ ಸರಕುಗಳನ್ನು ಒದಗಿಸುವ ಬೃಹತ್ ಸಂಪತ್ತಿನ ನಾಡು.ನಾವು ಪ್ಯಾಲಿಯೊ ಸಾಗರಗಳ ಸಮಯದ ನೀರಿನ ಹನಿಗಳನ್ನು ಕಂಡುಕೊಂಡಿದ್ದೇವೆ” ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಅರ್ಥ್ ಸೈನ್ಸಸ್ (CEaS) ಪಿಎಚ್‌ಡಿ(PhD) ವಿದ್ಯಾರ್ಥಿ ಮತ್ತು ‘ಪ್ರಿಕೇಂಬ್ರಿಯನ್ ರಿಸರ್ಚ್’ ನಲ್ಲಿ ಪ್ರಕಟವಾದ ಅಧ್ಯಯನದ ಮೊದಲ ಲೇಖಕ ಪ್ರಕಾಶಚಂದ್ರ ಆರ್ಯ ಹೇಳಿದ್ದಾರೆ.ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೋನೇಟ್‌ಗಳನ್ನು ಹೊಂದಿರುವ ಈ ನಿಕ್ಷೇಪಗಳ […]

ಫಿಲಿಪ್ಪೀನ್ಸ್‌ನಲ್ಲಿ ದೋಣಿ ಮುಳುಗಡೆ ಹಿನ್ನೆಲೆ 30 ಮಂದಿ ಸಾವು, 40 ಪ್ರಯಾಣಿಕರ ರಕ್ಷಣೆ

ಮನಿಲಾ (ಫಿಲಿಪ್ಪೀನ್ಸ್‌): ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 30 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಫಿಲಿಪ್ಪೀನ್ಸ್‌ ರಾಜಧಾನಿ ಸಮೀಪದ ಸರೋವರದಲ್ಲಿ ಗುರುವಾರ ನಡೆದಿದೆ.ಘಟನೆಯಿಂದ 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಫಿಲಿಪ್ಪೀನ್ಸ್‌ ಕರಾವಳಿ ರಕ್ಷಣಾ ಪಡೆ ತಿಳಿಸಿದೆ ಫಿಲಿಪ್ಪೀನ್ಸ್‌ ದೇಶದ ರಾಜಧಾನಿಯ ಸಮೀಪದ ಸರೋವರದಲ್ಲಿ ದೋಣಿ ಮಗುಚಿ ಅಪಾರ ಸಾವುನೋವು ಸಂಭವಿಸಿದೆ. ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಬಲವಾದ ಗಾಳಿಯಿಂದಾಗಿ ಯಾಂತ್ರೀಕೃತ ದೋಣಿ ಒಂದು ಕಡೆಗೆ ವಾಲಿತ್ತು. ಇದರಿಂದ ಭಯಭೀತರಾದ ಪ್ರಯಾಣಿಕರು ದೋಣಿಯ ಒಂದೇ ಕಡೆ […]

ಗ್ರೀಸ್ ದೇಶದ ಹಲವಾರು ಕಡೆಗಳಲ್ಲಿ ಭೀಕರ ಕಾಳ್ಗಿಚ್ಚು: 19 ಸಾವಿರ ಜನ ಸ್ಥಳಾಂತರ

ಅಥೆನ್ಸ್​ (ಗ್ರೀಸ್) : ಗ್ರೀಸ್​ನ 82 ಸ್ಥಳಗಳಲ್ಲಿ ವ್ಯಾಪಿಸಿರುವ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ಪಡೆಗಳು ಹರಸಾಹಸ ಪಡುತ್ತಿವೆ. ಈ ಪೈಕಿ ಭಾನುವಾರದಂದು 64 ಸ್ಥಳಗಳಲ್ಲಿ ಹೊಸದಾಗಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ರಾತ್ರಿ ಸಮಯದಲ್ಲಿ ಅಗ್ನಿಶಾಮಕ ವಿಮಾನ ಹಾಗೂ ಹೆಲಿಕಾಪ್ಟರ್​ಗಳು ಸಂಚರಿಸಲು ಸಾಧ್ಯವಾಗದ ಕಾರಣದಿಂದ ಅಗ್ನಿಶಾಮಕ ಪಡೆ ಸಿಬ್ಬಂದಿಗೆ ಬೆಂಕಿ ನಂದಿಸುವುದು ಸವಾಲಾಗಿದೆ. ಗ್ರೀಸ್ ದೇಶದ ಹಲವಾರು ಕಡೆಗಳಲ್ಲಿ ಕಾಣಿಸಿಕೊಂಡ ಭೀಕರ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ 12 ಗ್ರಾಮಗಳಿಂದ ಜನರ ಸ್ಥಳಾಂತರ: 12 ಗ್ರಾಮಗಳು ಮತ್ತು […]