ಶ್ರೀಲಂಕಾಗೆ ಬಂದ ಚೀನಾ ಗೂಢಚಾರ ಹಡಗು: ಭಾರತದಿಂದ ತೀವ್ರ ಆಕ್ಷೇಪ

ನವದೆಹಲಿ : ಗೂಢಚಾರಿಕೆ ಉದ್ದೇಶಗಳಿಗಾಗಿ ಸಜ್ಜುಗೊಂಡ ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು, ಭಾರತಕ್ಕೆ ಕಳವಳ ಮೂಡಿಸಿದೆ.ಚೀನಾದ ಗೂಢಚಾರಿಕೆ ಹಡಗು ಶ್ರೀಲಂಕಾದ ಕೊಲಂಬೊ ಬಂದರಿಗೆ ಆಗಮಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಶ್ರೀಲಂಕಾ ನೌಕಾಪಡೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ನೌಕಾಪಡೆಯ ಹೈ ಯಾಂಗ್ 24 ಎಚ್‌ಎಒ (HAI YANG 24 HAO) ಹೆಸರಿನ ಯುದ್ಧನೌಕೆಯು ಗುರುವಾರ ಕೊಲಂಬೊ ಬಂದರಿಗೆ ಪ್ರವೇಶಿಸಿದೆ. ಈ ಹಡಗು ಶನಿವಾರ ಇಲ್ಲಿಂದ ನಿರ್ಗಮಿಸಲಿದೆ. “ಕೊಲಂಬೊಗೆ ಆಗಮಿಸಿರುವ 129 ಮೀಟರ್ ಉದ್ದದ […]

3 ಶತಕೋಟಿ ವರ್ಷ ಹಳೆಯ ಪುರಾವೆ ಮಂಗಳಗ್ರಹದಲ್ಲಿ ಪತ್ತೆ : ಜೀವ ವಿಕಾಸಕ್ಕೆ ಪೂರಕವಾಗಿದ್ದ ಗ್ರಹ

ನ್ಯೂಯಾರ್ಕ್ : ಮಂಗಳ ಗ್ರಹದಲ್ಲಿ 3.8 ರಿಂದ 3.6 ಶತಕೋಟಿ ವರ್ಷಗಳ ಹಿಂದಿನ ಸೆಡಿಮೆಂಟರಿ ಪದರುಗಳಲ್ಲಿ ಲವಣಗಳ ನಿಕ್ಷೇಪಗಳಿಂದ ರಚಿತವಾದ ಷಟ್ಕೋನಾಕಾರದ ಮಾದರಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.ಮಂಗಳ ಗ್ರಹದ ಮೇಲೆ ಜೀವಿಗಳ ಉಗಮಕ್ಕೆ ಪೂರಕವಾದ ವಾತಾವರಣ ಇತ್ತು ಎಂಬ ಬಗ್ಗೆ ಹೊಸ ಪುರಾವೆಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.ಕ್ಯೂರಿಯಾಸಿಟಿಯ ಮಾಸ್ಟ್​ ಕ್ಯಾಮ್ 1 ಮತ್ತು ಚೆಮ್​ ಕ್ಯಾಮ್​ 2 ಉಪಕರಣಗಳನ್ನು ಬಳಸಿಕೊಂಡು ವಿಜ್ಞಾನಿಗಳು 3.8 ರಿಂದ 3.6 ಬಿಲಿಯನ್ ವರ್ಷಗಳ ಹಿಂದಿನ ಲವಣಗಳ ನಿಕ್ಷೇಪವನ್ನು ಕಂಡುಹಿಡಿದಿದ್ದಾರೆ. ಋತುಮಾನಕ್ಕನುಗುಣವಾಗಿ ಒಣಗುವ […]

ವಿಜ್ಞಾನಿಗಳಿಂದ ಎಚ್ಚರಿಕೆ ಅಂಟಾರ್ಕ್ಟಿಕಾದಲ್ಲಿ ಶಾಖದ ಅಲೆ, ಕರಗುತ್ತಿರುವ ಹಿಮಗಡ್ಡೆಗಳು

ಲಂಡನ್ : ಅಂಟಾರ್ಕ್ಟಿಕಾದಲ್ಲಿ ಸಮುದ್ರದ ಶಾಖದ ಅಲೆಗಳು ಉಂಟಾಗುವುದು ಮತ್ತು ಮಂಜುಗಡ್ಡೆ ಕರಗುವಿಕೆಯಂಥ ವಿಕೋಪದ ಸಾಧ್ಯತೆಗಳು ಹೆಚ್ಚು ಸಾಮಾನ್ಯ ಮತ್ತು ಹೆಚ್ಚು ತೀವ್ರವಾಗಲಿವೆ ಎಂದು ಸಂಶೋಧಕರು ಹೇಳಿದ್ದಾರೆ. ಜಾಗತಿಕ ತಾಪಮಾನ ಏರಿಕೆಯನ್ನು ಪ್ಯಾರಿಸ್ ಒಪ್ಪಂದದ ಗುರಿಯಾದ 1.5 ಡಿಗ್ರಿ ಸೆಲ್ಸಿಯಸ್​ಗೆ ಸೀಮಿತಗೊಳಿಸಲು ಈಗ ಕಠಿಣ ಕ್ರಮದ ಅಗತ್ಯ ಎಂದು ಹೇಳಿರುವ ವಿಜ್ಞಾನಿಗಳು, ಹಿಮಗಡ್ಡೆಗಳ ಕರಗುವಿಕೆಯು ಭಾರಿ ವಿಕೋಪದ ಮುನ್ಸೂಚನೆಯಾಗಿರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಹವಾಮಾನ ಬದಲಾವಣೆಗಳ ಕಾರಣದಿಂದ ಅಂಟಾರ್ಕ್ಟಿಕಾದಲ್ಲಿ ಉಷ್ಣದ ಅಲೆಗಳು ಏಳುತ್ತಿದ್ದು, ಹಿಮಗಡ್ಡೆಗಳು ತೀವ್ರವಾಗಿ ಕರಗುತ್ತಿವೆ […]

ಮರಳಿ ಸಂಪರ್ಕಕ್ಕೆ ಸಿಕ್ಕ ವಾಯೇಜರ್​ 2: ನಾಸಾ ವಿಜ್ಞಾನಿಗಳಲ್ಲಿ ಸಂತಸ

ನ್ಯೂಯಾರ್ಕ್​:ಕಳೆದೆರಡು ವಾರಗಳ ಹಿಂದೆ ವಾಯೇಜರ್​ ಸಂರ್ಪಕವನ್ನು ಕಳೆದುಕೊಂಡಿತು. 46 ವರ್ಷದ ಈ ಬಾಹ್ಯಕಾಶ ನೌಕೆಗೆ ನಿಯಂತ್ರಕರು ತಪ್ಪು ಸಂದೇಶವನ್ನು ಕಳುಹಿಸಿದ ಪರಿಣಾಮ ಇದರ ಅಂಟೆನಾ ಭೂಮಿಯಿಂದ ದೂರಕ್ಕೆ ತಿರುಗಿತು. ಇದೀಗ ಅದರ ಸಂಪರ್ಕ ಸಾಧಿಸಲಾಗಿದೆ ಎಂದು ನಾಸಾ ತಿಳಿಸಿದೆಈ ದೀರ್ಘ ಸಮಯದ ಬಳಿಕ ಶುಕ್ರವಾರ ಬಾಹ್ಯಕಾಶ ನೌಕೆ ಮತ್ತೆ ದತ್ತಾಂಶವನ್ನು ಕಳುಹಿಸಲು ಆರಂಭಿಸಿತು ಎಂದು ಕ್ಯಾಲಿಫೋರ್ನಿಯಾದ ಜೆಟ್​ ಪ್ರೊಪ್ಯುಲ್ಸನ್​ ಲ್ಯಾಬೋರೇಟರಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಪ್ರಾಜೆಕ್ಟ್​ ಮ್ಯಾನೇಜರ್​ ಸೂಸೆನ್​ ಡೊಡ್​​, ವಾಯೇಜರ್​ ಮರು ಸಂಪರ್ಕಕ್ಕೆ ಸಿಕ್ಕಿದೆ […]

ಟೊರೊಂಟೊದಲ್ಲಿ ಇಂಡಿಯಾ ಬಜಾರ್ ಉತ್ಸವ

ಟೊರೊಂಟೊ (ಕೆನಡಾ) :ಗೆರಾರ್ಡ್ ಇಂಡಿಯಾ ಬಜಾರ್, ಇದು ಉತ್ತರ ಅಮೆರಿಕಾದಲ್ಲಿನ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಭಾರತೀಯ ಮಾರುಕಟ್ಟೆಯಾಗಿದೆ. ಇದರ 21 ನೇ ವಾರ್ಷಿಕೋತ್ಸವ ಹಬ್ಬದಂದು 3 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಇಲ್ಲಿನ ಗೆರಾರ್ಡ್ ಇಂಡಿಯಾ ಬಜಾರ್‌ನಲ್ಲಿ ನಡೆದ ಉತ್ತರ ಅಮೆರಿಕದ ಅತಿದೊಡ್ಡ ಭಾರತೀಯ ಉತ್ಸವದಲ್ಲಿ ಟೊರೊಂಟೊ ಮೇಯರ್ ಒಲಿವಿಯಾ ಚೌ ಅವರು ಭಾಂಗ್ರಾ ಮತ್ತು ಬಾಲಿವುಡ್ ಹಾಡುಗಳಿಗೆ ಸ್ಟೆಪ್ಸ್​ ಹಾಕಿದರು.ಟೊರೊಂಟೊದಲ್ಲಿನ ಅತಿ ಹಳೆಯ ಭಾರತೀಯ ಮಾರುಕಟ್ಟೆಯಾಗಿರುವ ಗೆರಾರ್ಡ್ ಇಂಡಿಯಾ ಬಜಾರ್‌ನಲ್ಲಿ ಎರಡು ದಿನಗಳ […]