ಭೂಮಿಯನ್ನು ಹಾದುಹೋಗಲಿದೆ ದೆವ್ವದ ಕೊಂಬುಗಳುಳ್ಳ ಮೌಂಟ್ ಎವರೆಸ್ಟ್‌ಗಿಂತಲೂ ದೊಡ್ಡದಾದ “ಡೆವಿಲ್ ಕಾಮೆಟ್”!!

ಮೌಂಟ್ ಎವರೆಸ್ಟ್‌ಗಿಂತಲೂ ದೊಡ್ಡದಾದ “ಡೆವಿಲ್ ಕಾಮೆಟ್” ಎಂಬ ಅಡ್ಡಹೆಸರಿನ ಬೃಹತ್ ಧೂಮಕೇತು ಭೂಮಿಯತ್ತ ಧಾವಿಸುತ್ತಿದೆ. ಅಧಿಕೃತವಾಗಿ 12P/Pons–Brooks ಎಂದು ಕರೆಯಲ್ಪಡುವ ಈ ಆಕಾಶಕಾಯವು 71 ವರ್ಷಗಳ ಕಕ್ಷೆಯ ಅವಧಿಯನ್ನು ಹೊಂದಿರುವ ಆವರ್ತಕ ಧೂಮಕೇತುವಾಗಿದೆ. ವರ್ಷವಿಡೀ, ಧೂಮಕೇತು 12P ಆಕಾಶದ ಘಟನೆಗಳ ಅದ್ಭುತ ಪ್ರದರ್ಶನದಲ್ಲಿ ಆಕಾಶದಾದ್ಯಂತ ಪ್ರಜ್ವಲಿಸಿದೆ. ಇದು ಪ್ರತಿ 15 ದಿನಗಳಿಗೊಮ್ಮೆ ಜ್ವಾಲಾಮುಖಿ ಸ್ಫೋಟಗಳ ರೂಪದಲ್ಲಿ ಭಯಂಕರವಾಗಿ ಸ್ಫೋಟಗೊಂಡು ಮಂಜುಗಡ್ಡೆ ಮತ್ತು ಅನಿಲವನ್ನು ಹೊರಹಾಕುತ್ತದೆ. ಈ ನಿಯಮಿತ ಸ್ಫೋಟಗಳು ಧೂಮಕೇತುವಿಗೆ ಅನಿಯಮಿತ ಆಕಾರವನ್ನು ನೀಡುತ್ತವೆ ಮತ್ತಿದು ದೆವ್ವದ […]

ಅತ್ಯಪರೂಪದ ಪ್ರಕರಣ : ವಾಷಿಂಗ್ಟನ್ ನಲ್ಲಿ 20 ಗಂಟೆ ಅಂತರದಲ್ಲಿ 2 ಮಕ್ಕಳ ಹೆತ್ತ ತಾಯಿ

ವಾಷಿಂಗ್ಟನ್ : ಡಿಸೆಂಬರ್ 19ರಂದು ಮಂಗಳವಾರ ಸಂಜೆ ತನ್ನ ಮೊದಲ ಮಗು ರಾಕ್ಸಿ ಲೈಲಾಗೆ, ಡಿಸೆಂಬರ್ 20ರ ಬೆಳಗ್ಗೆ ಎರಡನೇ ಮಗು ರೆಬೆಲ್ ಲೆಕಾನ್​ಗೆ ಜನ್ಮ ನೀಡಿದ್ದಾರೆ. ಎರಡು ಗರ್ಭಾಶಯಗಳಿಂದ ಮಹಿಳೆಯೊಬ್ಬರು 20 ಗಂಟೆ ಅಂತರದಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಅಮೆರಿಕದ ಅಲಬಾಮಾದಲ್ಲಿ ನಡೆದಿದೆ. ಕೆಲ್ಸಿ ಹ್ಯಾಚರ್ (32) ಎಂಬ ಮಹಿಳೆ 20 ಗಂಟೆಗಳ ಹೆರಿಗೆ ನೋವಿನ ನಂತರ ಎರಡು ಆರೋಗ್ಯವಂತ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕೆಲ್ಸಿ ಈಗಾಗಲೇ ಮೂರು ಮಕ್ಕಳ […]

‘IDF’ ನಿಂದ ವಿಡಿಯೋ ಬಿಡುಗಡೆ : ಹಮಾಸ್ ಸುರಂಗದಲ್ಲಿ 5 ಒತ್ತೆಯಾಳುಗಳ ಶವ ಪತ್ತೆ

ಐವರು ಒತ್ತೆಯಾಳುಗಳು ಶವವಾಗಿ ಪತ್ತೆಯಾದ ಬೃಹತ್ ಹಮಾಸ್ ಸುರಂಗದ ಒಳಭಾಗದ ತುಣುಕನ್ನು ಇಸ್ರೇಲ್ ರಕ್ಷಣಾ ಪಡೆಗಳು ಬಿಡುಗಡೆ ಮಾಡಿವೆ. ಭೂಗತ ಸುರಂಗದ ಪ್ರವೇಶದ್ವಾರದ ಬಳಿ ಐಡಿಎಫ್ ಸೈನಿಕರು ಕತ್ತಲೆಯಲ್ಲಿ ನಿಂತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಒತ್ತೆಯಾಳುಗಳನ್ನು ಅಕ್ಟೋಬರ್ 7 ರಂದು ಭಯೋತ್ಪಾದಕರು ಇಸ್ರೇಲ್ ನಿಂದ ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಮೃತ ಒತ್ತೆಯಾಳುಗಳನ್ನು ಡಬ್ಲ್ಯುಒ ಜಿವ್ ದಾಡೋ, ಎಸ್ಜಿಟಿ ರಾನ್ ಶೆರ್ಮನ್, ಸಿಪಿಎಲ್ ನಿಕ್ ಬೀಜರ್, ಈಡನ್ ಝಕಾರಿಯಾ ಮತ್ತು ಎಲಿಯಾ ಟೊಲೆಡಾನೊ ಎಂದು ಗುರುತಿಸಲಾಗಿದೆ.ಶವವಾಗಿ ಪತ್ತೆಯಾದ ಐದು ಜನರಿಗಾಗಿ […]

ಮಾನವ ಕಳ್ಳಸಾಗಣೆ ಶಂಕೆ : 303 ಭಾರತೀಯರಿದ್ದ ವಿಮಾನ ಮಾರ್ಗ ಮಧ್ಯೆ ಭೂಸ್ಪರ್ಶ

ವಾಟ್ರಿ, ಫ್ರಾನ್ಸ್‌: ವಿಮಾನದಲ್ಲಿ ಸುಮಾರು 300 ಮಂದಿ ಭಾರತೀಯರು ಪ್ರಯಾಣಿಸುತ್ತಿದ್ದರು. ಯುಎಇಯಿಂದ ಹೊರಟಿದ್ದ ವಿಮಾನ ರೊಮಾನಿಯಾದ ಕಂಪನಿ ಲೆಜೆಂಡ್‌ ಏರ್‌ಲೈನ್ಸ್‌ಗೆ ಸೇರಿದ ಎ340 ವಿಮಾನವನ್ನು ಖಚಿತ ಮಾಹಿತಿ ಆಧರಿಸಿ ವಾಟ್ರಿ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ. ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಶುಕ್ರವಾರ ಮಾನವ ಕಳ್ಳಸಾಗಾಣೆ ಶಂಕೆ ಮೇರೆಗೆ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿ 303 ಮಂದಿ ಭಾರತೀಯ ಪ್ರಜೆಗಳಿದ್ದಾರೆ. ಬಹುಶಃ ಇವರು ಯುಎಇಯಲ್ಲಿ ಕೆಲಸ ಮಾಡುತ್ತಿದ್ದಿರಬೇಕು. ಇವರನ್ನು ಅಮೆರಿಕ ಅಥವಾ ಕೆನಡಾಗೆ ಅಕ್ರಮವಾಗಿ ಪ್ರವೇಶಿಸುವ ಯತ್ನವಾಗಿ ತೆರಳುತ್ತಿದ್ದರು ಎಂದು ಶಂಕಿಸಲಾಗಿದೆ’ […]

ವಿದೇಶಿ ವ್ಯಾಸಂಗಕ್ಕೆ ವಿದ್ಯಾನಿಧಿ ಯೋಜನೆ ವಿಸ್ತರಣೆ : ರೈತರ ಮಕ್ಕಳಿಗೆ ಗುಡ್ ನ್ಯೂಸ್

ಬೆಂಗಳೂರು:ರೈತರ ಮಕ್ಕಳಿಗಾಗಿ ರೂಪಿಸಿದ ವಿದ್ಯಾನಿಧಿ ಯೋಜನೆ ಕಾಲೇಜು ಶಿಕ್ಷಣಕ್ಕೆ ಸೀಮಿತವಾಗಿದೆ. ರೈತರ ಮಕ್ಕಳಿಗಾಗಿ ರೂಪಿಸಿದ ವಿದ್ಯಾನಿಧಿ ಯೋಜನೆಯನ್ನು ವಿದೇಶಿ ವ್ಯಾಸಂಗಕ್ಕೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ವಾರ್ಷಿಕ ಕನಿಷ್ಠ 100 ಮಕ್ಕಳಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಂಶೋಧನೆ, ಉನ್ನತ ಶಿಕ್ಷಣ ಸೇರಿ ಯಾವುದೇ ವಿವಿಗಳಲ್ಲಿ ವ್ಯಾಸಂಗ ಮಾಡಿದರೂ ರೈತರ ಮಕ್ಕಳಿಗೆ ನೆರವು ನೀಡುವ ಉದ್ದೇಶದಿಂದ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗುವುದು. ಯೋಜನೆಗೆ ವಾರ್ಷಿಕ 100 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಿದ್ದು, ಮುಂದಿನ ಬಜೆಟ್ ನಲ್ಲಿ ಘೋಷಣೆಯಾಗುವ […]