ಪ್ರಧಾನಿ ಮೋದಿಯವರ ಅಮೆರಿಕಾ ಭೇಟಿಯನ್ನು ಎದುರು ನೋಡುತ್ತಿದ್ದೇವೆ ಎಂದ ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ಥಾನೇದಾರ್

ವಾಷಿಂಗ್ಟನ್(ಅಮೆರಿಕಾ):ಶ್ರೀ ಥಾನೇದಾರ್ ಮಿಚಿಗನ್‌ನ 13 ನೇ ಕಾಂಗ್ರೆಸನಲ್ ಡಿಸ್ಟ್ರಿಕ್ಟ್ ಅನ್ನು ಮೊದಲ ಬಾರಿಗೆ ಪ್ರತಿನಿಧಿಸುತ್ತಿದ್ದು, ಅವರನ್ನು ಅಧ್ಯಕ್ಷ ಜೋ ಬೈಡನ್​ ಅವರು ಅದೇ ದಿನ ಪ್ರಧಾನಿ ಮೋದಿಯವರ ಗೌರವಾರ್ಥ ಆಯೋಜಿಸಿದ ವೈಟ್ ಹೌಸ್ ಸ್ಟೇಟ್ ಡಿನ್ನರ್‌ಗೆ ಆಹ್ವಾನಿಸಿದ್ದಾರೆ. ಜೂನ್ 22 ರಂದು ಅಮೆರಿಕಾದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ಶ್ರೀ ಥಾನೇದಾರ್ ಅವರು ಕರೆದೊಯ್ಯಲಿದ್ದಾರೆ.ಮಾನ್ಯ ಪ್ರಧಾನಿಯವರಿಗೆ ಅಮೆರಿಕಾ-ಭಾರತ ಸಂಬಂಧಗಳ ಅಗತ್ಯವನ್ನು ಒತ್ತಿ ಹೇಳಲು ಆಶಿಸುತ್ತೇನೆ ಎಂದು 68 ವರ್ಷದ […]

ಗುರುಗ್ರಹಕ್ಕೆ ಮಿಂಚು ಬಂದರೆ ಹೇಗಿದೆ ನಾಸಾ ಸೆರೆಹಿಡಿದ ಅಪರೂಪದ ಚಿತ್ರ

ವಾಷಿಂಗ್ಟನ್ (ಅಮೆರಿಕ): ಜುನೋ ಮಿಷನ್​ ಡಿಸೆಂಬರ್ 30, 2020ರಂದು ಗುರುಗ್ರಹದ 31ನೇ ಪ್ರದಕ್ಷಿಣೆ ಪೂರ್ಣಗೊಳಿಸುತ್ತಿದ್ದಂತೆ ಈ ನೋಟವನ್ನು ದಾಖಲಿಸಿಕೊಂಡಿತ ಜುನೋ ಮಿಷನ್‌ಗೆ ಅಳವಡಿಸಿದ್ದ ವಿಶೇಷ ಕ್ಯಾಮರಾ ಗುರುಗ್ರಹದಲ್ಲಿ ಉಂಟಾಗಿದ್ದ ಮಿಂಚಿನ ಬೆಳಕನ್ನು ಸೆರೆಹಿಡಿದಿದೆ ಎಂದು ಅಮೆರಿಕದ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತಿಳಿಸಿದೆ.ಆಗಸ್ಟ್ 2011ರಲ್ಲಿ ಉಡಾವಣೆಯಾದ ನಾಸಾದ ಜುನೋ ಯೋಜನೆ ಜುಲೈ 2016ರಲ್ಲಿ ಗುರುಗ್ರಹ ತಲುಪಿತ್ತು. ಡಿಸೆಂಬರ್ 30, 2020ರಂದು ಈ ಗ್ರಹಕ್ಕೆ ಮಿಂಚು ಅಪ್ಪಳಿಸಿದಾಗ ಸೆರೆ ಹಿಡಿದ ಚಿತ್ರವಿದು. . ಚಿತ್ರದಲ್ಲಿ ಗುರುಗ್ರಹದ ಉತ್ತರ […]

ಸುಡಾನ್​ನಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಬಣ

ವಿಶ್ವಸಂಸ್ಥೆ: ಸುಡಾನ್‌ನಲ್ಲಿ ಹಿಂಸಾತ್ಮಕ ಸಂಘರ್ಷ ಮೂರನೇ ತಿಂಗಳಿಗೆ ಕಾಲಿಟ್ಟಿದ್ದು ದೇಶಾದ್ಯಂತ ಮಾನವೀಯ ಪರಿಸ್ಥಿತಿ ಹದಗೆಡುತ್ತಲೇ ಇದೆ ಎಂದು ವಿಶ್ವಸಂಸ್ಥೆಯ ಪರಿಹಾರ ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ. ಸಂಘರ್ಷದಿಂದ ಜರ್ಜರಿತವಾಗಿರುವ ಸುಡಾನ್​ನಲ್ಲಿ ಮಾನವೀಯ ಬಿಕ್ಕಟ್ಟು ತೀರಾ ಉಲ್ಬಣಗೊಂಡಿದೆ. ಅಗತ್ಯ ವಸ್ತುಗಳಿಗೆ ಜನ ಪರದಾಡುವಂತಾಗಿದೆ. ಮಾನವೀಯ ವ್ಯವಹಾರಗಳ ಯುಎನ್ ಅಂಡರ್‌ಸೆಕ್ರೆಟರಿ ಜನರಲ್ ಮತ್ತು ತುರ್ತು ಪರಿಹಾರ ಸಂಯೋಜಕರಾಗಿರುವ ಗ್ರಿಫಿತ್ಸ್, ಸುಡಾನ್‌ನ ಡಾರ್ಫರ್‌ನಲ್ಲಿ ಪರಿಸ್ಥಿತಿಯು ಮಾನವೀಯ ವಿಪತ್ತಿನತ್ತ ತಿರುಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಸುಮಾರು 1.7 ಮಿಲಿಯನ್ ಜನರು ಈಗ ದೇಶದಲ್ಲಿ […]

ನಾವೆಲ್ಲರೂ ಆನ್​ಲೈನ್​ ದ್ವೇಷದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ ವಿಶ್ವಸಂಸ್ಥೆ ಅಧ್ಯಕ್ಷರು

ಹೈದರಾಬಾದ್: ಆನ್‌ಲೈನ್ ದ್ವೇಷವನ್ನು ಹತ್ತಿಕ್ಕಲು ಮತ್ತು ಸಾಮಾಜಿಕ ಒಗ್ಗಟ್ಟಿನಲ್ಲಿ ನಿಮ್ಮನ್ನ ನೀವು ತೊಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ. “ದ್ವೇಷವು ಪ್ರತಿಯೊಬ್ಬರಿಗೂ ಅಪಾಯವನ್ನು ತಂದೊಡ್ಡಲಿದೆ. ಆದ್ದರಿಂದ ಅದರ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಕೆಲಸವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು. ಭದ್ರತಾ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು. ಆನ್‌ಲೈನ್‌ನಲ್ಲಿ ಹರಡುತ್ತಿರುವ ದ್ವೇಷವನ್ನು ನಾವು ಹತ್ತಿಕ್ಕಲು ಪ್ರಯತ್ನಿಸಬೇಕು. ದ್ವೇಷವು ಮಾನವೀಯತೆಯ ಕೆಟ್ಟ ಪ್ರಚೋದನೆಗಳನ್ನು ತುಂಬುತ್ತದೆ. ಇದು ಧ್ರುವೀಕರಣ ಮತ್ತು ಆಮೂಲಾಗ್ರೀಕರಣಕ್ಕೆ ವೇಗವರ್ಧಕವಾಗಿದೆ ಮತ್ತು ದೌರ್ಜನ್ಯ […]

ಕಚ್‌ನಲ್ಲಿ ಚಂಡಮಾರುತ ಆತಂಕ :3.5 ತೀವ್ರತೆಯ ಭೂಕಂಪನ

ಕಚ್ (ಗುಜರಾತ್​): ರಕ್ಕಸ ಬಿಪರ್‌ಜೋಯ್ ಚಂಡಮಾರುತದ ಭೀತಿಯ ನಡುವೆಯೇ ಗುಜರಾತ್​ನ ಕಚ್‌ನಲ್ಲಿ ಬುಧವಾರ ಭೂಕಂಪನ ಸಂಭವಿಸಿದೆ. ಗುಜರಾತ್​ನ ಕಚ್‌ನಲ್ಲಿ ಚಂಡಮಾರುತದ ಆತಂಕದ ಮಧ್ಯೆ ಭೂಕಂಪದ ಭೀತಿ ಸೃಷ್ಟಿಯಾಗಿದೆ. ಇಂದು ಸಂಜೆ ಕಚ್‌ ಸಮೀಪ ಭಚೌ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ದಾಖಲಾಗಿದೆ. ಇಲ್ಲಿನ ಭಚೌ ಪ್ರದೇಶದ ಪಶ್ಚಿಮ – ನೈಋತ್ಯದ 5 ಕಿಲೋಮೀಟರ್ ದೂರದಲ್ಲಿ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಸಂಜೆ 5.15ರ ಸುಮಾರಿಗೆ […]