ಶಾಲೆಯಿಂದ ಹೊರಗುಳಿದ 19 ಮಿಲಿಯನ್ ಮಕ್ಕಳು : ಸುಡಾನ್ ಸಂಘರ್ಷಕ್ಕೆ 6 ತಿಂಗಳು
ವಿಶ್ವಸಂಸ್ಥೆ : ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್ಎಸ್ಎಫ್) ನಡುವಿನ ಯುದ್ಧ ಆರಂಭಗೊಂಡು ಮುಂದಿನ ವಾರ ಆರು ತಿಂಗಳಿಗೆ ಸಮೀಸುತ್ತಿದೆ. ಈ ಸಶಸ್ತ್ರ ಆಂತರಿಕ ಹೋರಾಟದಿಂದ ಸುಡಾನ್ ದೇಶ ಜರ್ಜರಿತವಾಗಿದ್ದು, ಅಂದಾಜು 19 ಮಿಲಿಯನ್ ಮಕ್ಕಳು ವಿದ್ಯಾಭ್ಯಾಸದಿಂದ ಹೊರಗುಳಿದಿದ್ದಾರೆ ಎಂದು ಯುನಿಸೆಫ್ ಮತ್ತು ಸೇವ್ ದಿ ಚಿಲ್ಡ್ರನ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.ಸುಡಾನ್ನಲ್ಲಿ ಮುಂದುವರಿದಿರುವ ಸಶಸ್ತ್ರ ಸಂಘರ್ಷದ ಕಾರಣದಿಂದ ಸುಮಾರು 19 ಮಿಲಿಯನ್ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಏತನ್ಮಧ್ಯೆ, ಯುದ್ಧದ ಪರಿಣಾಮ […]
ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ & ಹೋಂ ನರ್ಸ್ ಇಸ್ರೇಲ್‌ನಲ್ಲಿ
ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಮೇಶ ಅವರು ಜೇರುಸೆಲಂನಲ್ಲಿ ಸಿಲುಕಿದ್ದಾರೆ. ಇಸ್ರೆಲ್‌ನ ಜೇರುಸೆಲಂನಲ್ಲಿ ಲಾಡ್ಜ್ನಲ್ಲಿರುವ ಸುಮೇಶ ಹವಾಮಾನ ಶಾಸ್ತ್ರದ ಕುರಿತ ತರಬೇತಿಗಾಗಿ ತೆರಳಿದ್ದರು.ಇಸ್ರೆಲ್ ಮತ್ತು ಹಮಾಸ್ ಯುದ್ಧ ನಡೆಯುತ್ತಿದ್ದು, ಪ್ರಸ್ತುತ ಧಾರವಾಡ ಓರ್ವ ವ್ಯಕ್ತಿ ಇಸ್ರೆಲ್ನಲ್ಲಿ ಸಿಲುಕಿಕೊಂಡಿದ್ದಾರೆ. ಧಾರವಾಡದ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಕೋಲಾರ ಮೂಲದ ಹೋಂ ನರ್ಸ್ ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ. ಇಸ್ರೇಲ್‌ನಲ್ಲಿ ಸಿಲುಕಿದ ಕೋಲಾರ ಮೂಲದ ಮಹಿಳೆ: ಇಸ್ರೇಲ್‌ನಲ್ಲಿ ಕೋಲಾರ ಜಿಲ್ಲೆ ಮಾಲೂರು ಮೂಲದ ಮಹಿಳೆ ಶಾಂತಿ ಆಲ್ಮೇಡಾ ಸಿಲುಕಿಕೊಂಡಿದ್ದಾರೆ. […]
ಕಚ್ಚಾ ತೈಲ ಬೆಲೆ ಏರಿಕೆ : ಇಸ್ರೇಲ್ – ಗಾಜಾ ಸಮರದ ಎಫೆಕ್ಟ್
ನವದೆಹಲಿ: ಇಸ್ರೇಲ್ ಮತ್ತು ಗಾಜಾದಲ್ಲಿ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ತೈಲ ಉತ್ಪಾದನೆಗೆ ಅಡ್ಡಿಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳು ಸೋಮವಾರ ಶೇಕಡಾ 4 ರಷ್ಟು ಏರಿಕೆಯಾಗಿವೆ.ಅಮೆರಿಕದ ತೈಲ ಬೆಲೆಯ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯುಟಿಐ) ಬ್ಯಾರೆಲ್ಗೆ 86 ಡಾಲರ್ಗಿಂತ ಹೆಚ್ಚಾಗಿದೆ. ಹಾಗೆಯೇ ಬ್ರೆಂಟ್ ಕ್ರೂಡ್ ತೈಲದ ಬೆಲೆಯೂ ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ಸ್ಥಿತಿಯು ತೈಲ ಬೆಲೆಗಳ […]
232 ಪ್ಯಾಲೆಸ್ಟೀನ್ ಜನ ಸಾವು, ಹಮಾಸ್ ನಾಯಕನ ಮನೆ ಹೊಕ್ಕ ಫೈಟರ್‌ಜೆಟ್ : ಇಸ್ರೇಲ್ ಪ್ರತಿದಾಳಿ
ರಮಾಲ್ಲಾಹ (ಪ್ಯಾಲೆಸ್ಟೀನ್): ಪ್ಯಾಲೆಸ್ಟೀನ್ ಉಗ್ರಗಾಮಿ ಪಡೆಯ ಹಮಾಸ್ ದಾಳಿಗೆ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಸುಮಾರು 232 ಪ್ಯಾಲೆಸ್ಟೀನಿಯನ್ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಹಮಾಸ್ ನಾಯಕರನ್ನೂ ಇಸ್ರೇಲ್ ರಕ್ಷಣಾ ಪಡೆ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.ಹಮಾಸ್ ಉಗ್ರಗಾಮಿಗಳ ದಾಳಿಗೆ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದ್ದು, ಗಾಜಾ ಪಟ್ಟಿಯಲ್ಲಿ ಸುಮಾರು 232 ಪ್ಯಾಲೆಸ್ಟೀನಿಯನ್ಗಳು ಸಾವನ್ನಪ್ಪಿದ್ದಾರೆ ಅಲ್ಲದೇ, ಅನೇಕ ಇಸ್ರೇಲ್ ನಾಗರಿಕರು ಹಾಗೂ ಸೇನಾ ಸಿಬ್ಬಂದಿಯನ್ನು ಹಮಾಸ್ ಭಯೋತ್ಪಾದಕರು ಗಾಜಾಕ್ಕೆ ಅಪಹರಿಸಿದ್ದಾರೆ ಎಂದು ವರದಿಯಾಗಿದೆ. […]
ನರ್ಗಿಸ್ ಮೊಹಮ್ಮದಿ ಇರಾನ್ ಹೋರಾಟಗಾರ್ತಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿ
ಒಸ್ಲೋ (ನಾರ್ವೆ): ಇರಾನ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಸಮಾನ ಮಾನವ ಹಕ್ಕುಗಳು, ಸ್ವಾತಂತ್ರ್ಯವನ್ನು ಉತ್ತೇಜಿಸುವ ಅವಿರತ ಹೋರಾಟಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ನರ್ಗಿಸ್ ಮೊಹಮ್ಮದಿ ಸದ್ಯ ಇರಾನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ನಾರ್ವೇಜಿಯನ್ ನೊಬೆಲ್ ಸಮಿತಿಯು ಶುಕ್ರವಾರ 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ ಪ್ರಕಟಿಸಿತು. ಇರಾನ್ ದೇಶದ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. 1901ರಿಂದ ನೊಬೆಲ್ […]