ಮಂಗಳೂರು: ಏಪ್ರಿಲ್ 26 ರ ಬೆಳಗ್ಗೆ 10 ಘಂಟೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪನಿಗಳ ನೇರ ಸಂದರ್ಶನವು ನಡೆಯಲಿದೆ. ಪಿಯುಸಿ, ಡಿಪ್ಲೋಮಾ ಹಾಗೂ ಯಾವುದೇ ಪದವಿಯಲ್ಲಿ (ಬಿಇ ಮತ್ತು ಬಿಸಿಎ ಹೊರತುಪಡಿಸಿ) ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಸ್ವವಿವರವುಳ್ಳ ಮಾಹಿತಿಯೊಂದಿಗೆ ನಗರದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಾಜರಾಗಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.