ಹೆಬ್ರಿ: ಮನೆಗೆ ನುಗ್ಗಿದ ಕಾರು; ಚಾಲಕ ಸಾವು

ಹೆಬ್ರಿ: ಕಾರೊಂದು ಹಿಮ್ಮುಖವಾಗಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಎದುರಿನ ಮನೆಗೆ ನುಗ್ಗಿದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಗಾಂಧಿನಗರ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಮೃತ ಕಾರು ಚಾಲಕನನ್ನು ಗಾಂಧಿನಗರ ನಿವಾಸಿ ವಸಂತ (52) ಎಂದು ಗುರುತಿಸಲಾಗಿದೆ. ವಸಂತ್ ಅವರು ತನ್ನ ಮನೆಯಿಂದ ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಎದುರುಗಡೆಯ ಮನೆಗೆ ಹಿಮ್ಮುಖವಾಗಿ ಕಾರು ನುಗ್ಗಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಚಾಲಕ ವಸಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರು ನುಗ್ಗಿದ ರಭಸಕ್ಕೆ ಮನೆಯ ಗೋಡೆ ಕುಸಿತಗೊಂಡಿದ್ದು, ಅಪಾರ ಹಾನಿ ಸಂಭವಿಸಿದೆ.

ಕೂದಲೆಳೆ ಅಂತರದಲ್ಲಿ ಪಾರಾದ ಮನೆಯವರು:
ಮನೆಯೊಳಗಿದ್ದ ಜನರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಲ್ಲದೆ, ಕಾರು ನುಗ್ಗಿದ ಜಾಗದಲ್ಲಿ ಮಗು ಇತ್ತು. ಘಟನೆ ನಡೆಯುವ ಸ್ವಲ್ಪ ಮೊದಲು ಮಗು ಸಹಿತ ಮನೆಯವರು ಹೊರಗೆ ಓಡಿಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ. ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.