ಹಿರಿಯಡಕ: ಆಟೊ ರಿಕ್ಷಾ ಹಾಗೂ ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಹಿರಿಯಡಕ ಗಣೇಶ್ ಕಲಾಮಂದಿರದ ಹತ್ತಿರ ಇಂದು ಸಂಜೆ ನಡೆದಿದೆ.
ಆಟೊ ಚಾಲಕ ಹಿರಿಯಡಕದಿಂದ ಅತ್ರಾಡಿ ಕಡೆಗೆ ತೆರಳುತ್ತಿದ್ದು, ಕಾರು ಚಾಲಕ ಮಣಿಪಾಲದಿಂದ ಹಿರಿಯಡಕ ತೆರಳುತ್ತಿದ್ದ ಎನ್ನಲಾಗಿದೆ. ಕಾರು ಚಾಲಕ ರಾಂಗ್ ಸೈಡ್ ನಲ್ಲಿ ಇದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ.