ಉಡುಪಿ: ಸಂತೆಕಟ್ಟೆಯ ಕೆಮ್ಮಣ್ಣು ನಿವಾಸಿ ವಾಸುದೇವಾ ಬೈಂದೂರು ಎಂಬವರು ಬಡತನದಲ್ಲಿದ್ದು, ಇವರ ಮಡದಿ ಕುಂದಾಪುರದ ಕೊರವಾಡಿಯವರಾದ ಪ್ರೇಮಾ ಬೈಂದೂರು ಇವರು Metastatic stomach cancer ಎಂಬ ಕಾಯಿಲೆಗೆ ತುತ್ತಾಗಿದ್ದಾರೆ.
ಎರಡು ಸಣ್ಣ ಮಕ್ಕಳಿರುವ ಕುಟುಂಬಕ್ಕೆ ಏಕೈಕ ಆಧಾರವಾಗಿರುವ ಇವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈಕೆಗೆ 2 ಬಾರಿ ಹೃದಯದ ಆಪರೇಶನ್ ಮತ್ತು 12 ಬಾರಿ ಕಿಮೋಥೆರಪಿ ನೀಡಲಾಗಿದ್ದು ಈಗಾಗಲೇ 15 ಲಕ್ಷ ರೂ ವೆಚ್ಚವಾಗಿದೆ.
ವೈದ್ಯರುಗಳು ಇದೀಗ ಆಕೆಗೆ ಇಮ್ಯೂನೋ ಥೆರಪಿ ನೀಡಿದರೆ ಆಕೆಯನ್ನು ಹುಷಾರು ಮಾಡಬಹುದು ಎಂದು ತಿಳಿಸಿದ್ದಾರೆ.ಈ ಚಿಕಿತ್ಸೆಗೆ 35 ಲಕ್ಷ ರೂ ಖರ್ಚು ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಲೆ ಬಡತನ ಅದರ ಮೇಲೆ ಮಡದಿಯ ಚಿಕಿತ್ಸೆಗಾಗಿ ಅದಾಗಲೇ ಮಾಡಿರುವ ಸಾಲದ ಮಧ್ಯೆ ಈಗಿನ ಈ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದ ಈ ಕುಟುಂಬ ಒದ್ದಾಡುತ್ತಿದ್ದು ದಾನಿಗಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ.
ಚಿಕಿತ್ಸೆಗೆ ಹಣ ನೀಡಲಿಚ್ಚಿಸುವವರು ಹಣ ವರ್ಗಾಯಿಸುವ ವಿಧಾನ
A/c No : 74020100003955
Name : PREMA V BYNDOOR
Branch Details
IFSC : BARBOVJUDPU
Name: BANK OF BARODA
G Pay : 7349594851