ಆ.9ರಂದು ಮಣಿಪಾಲದಲ್ಲಿ ಕೆನರಾ ಬ್ಯಾಂಕ್ 5ನೇ ಆವೃತ್ತಿಯ ಫ್ರೀಡಂ ರನ್ ಚಾಲನೆ

ಪರಿಸರ ಸಂರಕ್ಷಣೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್‌ನ 5ನೇ ಆವೃತ್ತಿಯ ಫ್ರೀಡಂ ರನ್ ಕಾರ್ಯಕ್ರಮ ಆಗಸ್ಟ್ 9ರ (ಭಾನುವಾರ) ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ನಡೆಯಿತು.ಉಡುಪಿ ಜಿಲ್ಲೆಯ ಶಾಸಕರಾದ ಯಶಪಾಲ್ ಸುವರ್ಣ ಫ್ರೀಡಂ ರನ್‌ ಗೆ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ ಉಡುಪಿಯ ಪ್ರಸಿದ್ಧ ANGELS ZUMBA ಪೂರ್ಣಿಮಾ ಇವರಿಂದ ವಾರ್ಮ್ ಅಪ್ ಸೆಶನ್ ನಡೆಯಿತು.


ಈ ವರ್ಷದ ಫ್ರೀಡಂ ರನ್ ಅನ್ನು ‘ಗೋ ಗ್ರೀನ್’ ಥೀಮ್‌ನಡಿ ಆಯೋಜಿಸಲಾಗಿದ್ದು ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.


ಕಾರ್ಯಕ್ರಮದಲ್ಲಿ 21ಕಿ.ಮೀ., 10ಕಿ.ಮೀ., 5ಕಿ.ಮೀ., 3ಕಿ.ಮೀ. ಹಾಗೂ ಫನ್ ರನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು.