ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ-ಅರ್ಜಿ ಆಹ್ವಾನ

ಉಡುಪಿ : ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಮೂಲಕ ಪ್ರವೇಶಾತಿ ಪಡೆಯುವ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2 ರ ಬಡ್ಡಿದರದಲ್ಲಿ ವಾರ್ಷಿಕವಾಗಿ ಗರಿಷ್ಠ ರೂ.1.00 ಲಕ್ಷಗಳವರೆಗೆ ಸಾಲ ಮಂಜೂರು ಮಾಡಲಾಗುತ್ತದೆ.

2019-20 ನೇ ಸಾಲಿನಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾಗಿ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ.ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ.

2019-20 ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಿ.ಇ.ಟಿ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ಪ್ರ-1, ಪ್ರ-2ಎ, ಪ್ರ-3ಎ ಮತ್ತು ಪ್ರ-3ಬಿ ಗೆ ಸೇರಿದ್ದು, (ವಿಶ್ವಕರ್ಮ ಮತ್ತು ಉಪ ಜಾತಿಗಳು, ಅಲ್ಪ ಸಂಖ್ಯಾತರು ಮತ್ತು ಉಪಜಾತಿಗಳು, ಉಪ್ಪಾರ ಮತ್ತು ಉಪಜಾತಿಗಳು ಹಾಗೂ ಬೆಸ್ತ/ಅಂಬಿಗ ಮತ್ತು ಅದರ ಉಪಜಾತಿಗಳನ್ನು ಹೊರತುಪಡಿಸಿ), ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ ರೂ.3.50 ಲಕ್ಷಗಳ ಮಿತಿಯಲ್ಲಿರುವ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

 ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ನಲ್ಲಿ  ಮೇ 24 ರ ಒಳಗೆ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಯು ಒಂದೇ ಜಿಲ್ಲೆಯಲ್ಲಿ ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. ಹೆಚ್ಚಿನ ಜಿಲ್ಲೆಯಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು.

ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ಕಛೇರಿಯನ್ನು ಅಥವಾ ನಿಗಮದ ಕೇಂದ್ರ ಕಛೇರಿಯನ್ನು ಹಾಗೂ ಹೆಲ್ಪ್‍ಲೈನ್ : 8197249898 / 8095267253 ಅನ್ನು ಸಂಪರ್ಕಿಸುವಂತೆ, ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.