ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಟ್ಸ್ ಆಫ್ ಇಂಡಿಯಾ (ಐ.ಸಿ.ಎ.ಐ) ನಡೆಸಿರುವ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಆಗಸ್ಟ್ 15 ರಂದು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೂ ಸಿ.ಎ ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳಿಗೆ ಪುನಶ್ಚೇತನ (ಓರಿಯೆಂಟೇಷನ್) ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಸಿ.ಎ ಕೋರ್ಸ್ ನಲ್ಲಿ ಇಂಟರ್ ಮೀಡಿಯೆಟ್ ನ ಮಹತ್ವ ಹಾಗೂ ಐ.ಸಿ.ಎ.ಐ ನ ಹೊಸ ನಿಯಮವನ್ನು ವಿವರಿಸಿದರು ಹಾಗೂ ಸಾಧನೆ ಮಾಡುವುದಕ್ಕೆ ಬೇಕಿರುವುದು ಕೇವಲ ಪರಿಶ್ರಮವಲ್ಲ ಅದು ಸತತ ಪರಿಶ್ರಮ ಮತ್ತು ಸಮಯದ ಸರಿಯಾದ ಬಳಕೆ ಎಂದರು.
ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿ ನಮಿತಾ ಜಿ. ಭಟ್, ತ್ರಿಶಾ ಕ್ಲಾಸಸ್ ಉಡುಪಿ ಕೇಂದ್ರದ ಮುಖ್ಯಸ್ಥ ವಿಘ್ನೇಶ್ ಶೆಣೈ ಬಿ. , ತ್ರಿಶಾ ಕ್ಲಾಸಸ್ ಮತ್ತು ತ್ರಿಶಾ ವಿದ್ಯಾ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೋಷಕರೊಂದಿಗೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಮೀಕ್ಷಾ ನಿರೂಪಿಸಿ ವಂದಿಸಿದರು.