ನವದೆಹಲಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಇಂದು ಚಾರ್ಟರ್ಡ್ ಅಕೌಂಟೆನ್ಸಿ (CA) ಅಂತಿಮ ಮತ್ತು ಮಧ್ಯಂತರ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ.
ಸಂಸ್ಥೆಯು ಈ ಪರೀಕ್ಷೆಯನ್ನು ನವೆಂಬರ್ 2023 ರಲ್ಲಿ ನಡೆಸಿತು. CA ಅಂತಿಮ ಮತ್ತು ಮಧ್ಯಂತರ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ತನ್ನ ರೋಲ್ ನಂಬರ್ ಜೊತೆಗೆ ನೋಂದಣಿ ಸಂಖ್ಯೆಯನ್ನು ನಮೂದಿಸಿ ICAI ನ ಅಧಿಕೃತ ವೆಬ್ಸೈಟ್ https://icai.nic.in/caresult/ ನಲ್ಲಿ ಪರಿಶೀಲಿಸಬಹುದು.