ಉಡುಪಿ: ದೃಢ ವಿಶ್ವಾಸ ಮತ್ತು ಸತತ ಪರಿಶ್ರಮವಿದ್ದಾಗ ಮಾತ್ರ ಅತ್ಯಂತ ಗೌರವಯುತವಾದ ಸಿ.ಎ ಪದವಿ ಸಿಗಲು ಸಾಧ್ಯ. ಈ ಪದವಿಯನ್ನು ಪಡೆಯಲು ತರಬೇತಿ ಪಡೆಯುತ್ತಿರುವ ಪ್ರತಿಯೊಬ್ಬರೂ, ಶಕ್ತಿಯುತ ಮತ್ತು ಆರ್ಥಿಕವಾದ ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸಲು ಶ್ರಮಿಸಬೇಕು ಎಂದು ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್ ಹೇಳಿದರು.
ಅವರು ಇತ್ತೀಚೆಗೆ ತ್ರಿಶಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಲೆಕ್ಕಪರಿಶೋಧಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿ.ಎ ಕೇದರನಾಥ್ ಶೆಣೈ ಹಾಗೂ ಸಿ.ಎ ಆನಂದತೀರ್ಥ ಇವರು ತಾವು ನಡೆದು ಬಂದ ಹಾದಿ ಹಾಗೂ ಶ್ರಮ ಪಟ್ಟ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಅವರ ಉತ್ಸಾಹವನ್ನು ಹೆಚ್ಚಿಸಿದರು.
ತ್ರಿಶಾ ಕ್ಲಾಸಸ್ ಪ್ರಾಧ್ಯಾಪಕ ಪ್ರೊಫೆಸರ್ ನೀರವ್ ಮೆಹೆತಾ, ಸಿದ್ದಾಂತ್ ಫೌಂಡೇಶನ್ ಟ್ರಸ್ಟಿ ನಮಿತಾ ಜಿ ಭಟ್, ರಾಮ್ ಪ್ರಭು, ತ್ರಿಶಾ ವಿದ್ಯಾಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್ ರಾವ್, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಇಂದು ರೀತಿ, ತ್ರಿಶಾ ಕ್ಲಾಸಸ್ ಉಡುಪಿಯ ಮುಖ್ಯಸ್ಥ ಮಹೇಶ್ ಭಟ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












