ಬೈಂದೂರು: ಹೊಳೆ ದಾಟುತ್ತಿದ್ದ ವೇಳೆ ಆಯ ತಪ್ಪಿ ನೀರಿಗೆ ಬಿದ್ದು ವ್ಯಕ್ತಿ ಸಾವು 

ಬೈಂದೂರು: ಹೊಳೆ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಪಡುವರಿ ಗ್ರಾಮದಲ್ಲಿ ಜ.31ರಂದು ಮಧ್ಯಾಹ್ನ ನಡೆದಿದೆ.

ಪಡುವರಿ ಗ್ರಾಮದ ವಿರೂಪಾಕ್ಷಿ ಹುಣ್ಸೆಮನೆ ನಿವಾಸಿ 61 ವರ್ಷದ ಮಂಜಯ್ಯ ದೇವಾಡಿಗ ಮೃತ ವ್ಯಕ್ತಿ. ಇವರು ಸೋಮವಾರ ಬೆಳಿಗ್ಗೆ ಕೆಲಸಕ್ಕೆಂದು ಹೋದವರು, ಕೆಲಸವಿಲ್ಲದ ಕಾರಣ ಮನೆಗೆ ವಾಪಾಸ್ಸು ಬರುತ್ತಿದ್ದರು.

ಈ ವೇಳೆ ಪಡುವರಿ ಗ್ರಾಮದ ಸುಮನಾವತಿ ಹೊಳೆಯನ್ನು ದಾಟುತ್ತಿರುವಾಗ ಮಂಜಯ್ಯನವರು, ಆಯತಪ್ಪಿ ಕಾಲುಜಾರಿ ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.